ನಮ್ಮ ಮೆಟ್ರೋ ವಿಸ್ತೃತ ಮಾರ್ಗ ಉದ್ಘಾಟಿಸಿದ ಮೋದಿ, ನಾನು ಹಿಂದಿ ಮಾತಾಡಲ್ಲ ಎಂದ ಸಿಎಂ ಸಿದ್ದರಾಮಯ್ಯ

By Gowthami K  |  First Published Oct 20, 2023, 12:53 PM IST

ನಮ್ಮ ಮೆಟ್ರೋ ವಿಸ್ತೃತ ಮಾರ್ಗ ಅಧಿಕೃತ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.   ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಕೂಡ ಇದ್ದರು.


ಬೆಂಗಳೂರು (ಅ.20): ನಮ್ಮ ಮೆಟ್ರೋ ವಿಸ್ತೃತ ಮಾರ್ಗ ಅಧಿಕೃತ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.  ಎರಡು ವಿಸ್ತೃತ ಮಾರ್ಗವಾದ ಕೆ.ಆರ್.ಪುರಂ- ಬೈಯಪ್ಪನಹಳ್ಳಿ ಮತ್ತು ಕೆಂಗೇರಿ- ಚಲ್ಲಘಟ್ಟ ಮಾರ್ಗವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ  ಉದ್ಘಾಟನೆ ಮಾಡಿದ್ದಾರೆ. ಪಿಎಂ ಉದ್ಘಾಟಿಸುವ ನಮ್ಮ ಮೆಟ್ರೋ ವಿಸ್ತೃತ ಮಾರ್ಗ ವಿಡಿಯೋ ಕಾನ್ಪರೆನ್ಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಭಾಗಿಯಾಗಿದ್ದಾರೆ.  ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್, ಸಿಎಸ್ ವಂದಿತಾ ಶರ್ಮಾ, ಮೆಟ್ರೋ ಎಂಡಿ ಅಂಜುಮ್ ಪರ್ವೇಜ್ ಉಪಸ್ಥಿತಿ ಇದ್ದರು. ಇದೇ ವೇಳೆ  ದೇಶದ ಮೊದಲ ರ್ಯಾಪಿಡ್‌ ರೈಲಿಗೂ ಮೋದಿ ಚಾಲನೆ ನೀಡಿದರು.

ವಿಶ್ವಕಪ್‌ ಕ್ರಿಕೆಟ್‌ಗೆ ಆಫರ್‌ ಕೊಟ್ಟ ನಮ್ಮ ಮೆಟ್ರೋ: ಬೆಂಗಳೂರು ಪಂದ್ಯಕ್ಕೆ ವಿಶೇಷ ಟಿಕೆಟ್‌ ವ್ಯವಸ್ಥೆ

Tap to resize

Latest Videos

undefined

ಉದ್ಘಾಟನೆಗೂ ಮುನ್ನ ಸಿಎಂ ಅನೌಪಚಾರಿಕವಾಗಿ ಡಿಕೆಶಿ ಜೊತೆ ಮಾತುಕತೆ ನಡೆಸಿದರು. ಈ ವೇಳೆ ನಾನು ಕನ್ನಡದಲ್ಲೇ ಮಾತನಾಡುತ್ತೇನೆ ಎಂದ ಸಿದ್ದರಾಮಯ್ಯ, ಹಿಂದಿ ನ್ಯಾಷನಲ್ ಲಾಂಗ್ವೇಜ್ ಅಲ್ಲ ನಮಗೆ ಹಿಂದಿ ಅರ್ಥ ಆಗಲ್ಲ, ನಾನು ಮಾತನಾಡಲ್ಲ ಎಂದರು. ಹೀಗಾಗಿ ವಿಡಿಯೋ ಕಾನ್ಪರೆನ್ಸ್ ನಲ್ಲಿ ಕನ್ನಡದಲ್ಲೇ ಭಾಷಣ ಮಾಡಿದರು. 

ಬೆಂಗಳೂರು ನಗರ ಪರವಾಗಿ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರೋದ್ರಿಂದ ಮೆಟ್ರೋ ಸೇವೆ ಅತ್ಯಗತ್ಯ. ಮೆಟ್ರೋ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಯೋಜನೆ ಮಾಡಲಾಗ್ತಿದೆ. 5600 ಕೋಟಿ ಹಣ ರಾಜ್ಯ ಸರ್ಕಾರ ಮೆಟ್ರೋ ಯೋಜನೆ ನೀಡಲಾಗಿದೆ. ಎಂದು ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿಯವರನ್ನು ಸಿಎಂ  ನೆನಪಿಸಿಕೊಂಡರು. ಈ ಹಿಂದೆ ಅವರು  ಮೆಟ್ರೋ ಗೆ ಚಾಲನೆ ನೀಡಿದ್ದರು.

ಮೆಟ್ರೋ ಹ್ಯಾಂಡಲ್‌ ಹಿಡಿದು ಸರ್ಕಸ್‌ ಮಾಡಿದ ವಿದ್ಯಾರ್ಥಿಗೆ ₹500 ದಂಡ

ಕೆಆರ್ ಪುರದಿಂದ ಬೈಯಪ್ಪನಳ್ಳಿ, ಕೆಂಗೇರಿ ಯಿಂದ ಚಲ್ಲಗಟ್ಟದವರಗೆ ಮೆಟ್ರೋ ಸೇವೆಯನ್ನ ರಾಷ್ಟ್ರಕ್ಕೆ ಸಮರ್ಪಣೆ ಮಾಡ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಜಂಟಿಯಾಗಿ ಮೆಟ್ರೋ ಯೋಜನೆ ಜಾರಿಗೊಳಿಸುತ್ತಿದೆ. ಮೊದಲ ಹಂತದಲ್ಲಿ ಸು. 42.3 ಉದ್ದದ ಯೋಜನೆ ಜಾರಿ ಮಾಡಲಾಗಿದೆ. ಇದಕ್ಕೆ‌ 5630 ಕೋಟಿ ರಾಜ್ಯ ಸರ್ಕಾರ ಖರ್ಚು ಮಾಡಿದೆ. ಕೇಂದ್ರ ರಾಜ್ಯ ಎರಡೂ ಸರ್ಕಾರಗಳು ಜಂಟಿಯಾಗಿ ಮೆಟ್ರೋ ಯೋಜನೆ ಮಾಡಲಾಗ್ತಿದೆ. ಎರಡೂ ಹಂತ ಸೇರಿ ಸುಮಾರು 74 ಕಿ.ಲೋ ವಿಸ್ತರಣೆ ಆಗಿದೆ ಎಂದು ಮಾಹಿತಿ ನೀಡಿದರು.

ಗಾಜಿಯಾಬಾದ್ ವೇದಿಕೆಯ ಪೋಸ್ಟರ್ ನಲ್ಲಿ ಯೋಗಿ ಜತೆ ಸಿದ್ದರಾಮಯ್ಯ ಫೋಟೋ:
ಇದೇ ವೇಳೆ ಗಾಜಿಯಾಬಾದ್ ಕಾರ್ಯಕ್ರಮದ ವೇದಿಕೆಯ ಪೋಸ್ಟರ್ ನಲ್ಲಿ  ಯೋಗಿ ಆದಿತ್ಯನಾಥ್ ಜೊತೆ ಸಿದ್ದರಾಮಯ್ಯ ಫೋಟೋವನ್ನು ಹಾಕಿದ್ದರು. ಪ್ರಧಾನಿ ಜೊತೆ ಇಬ್ಬರು ಸಿಎಂಗಳ ಫೋಟೋ ಹಾಕಿದ್ದು ಈ ವೇಳೆ ನಿಮ್ಮದೂ  ಫೋಟೋ ಇದೆ  ಎಂದು ಡಿಕೆ ಶಿವಕುಮಾರ್ ಹೇಳಿದರು. ಹೇ.. ಇಲ್ಲ ಅನ್ಸುತ್ತೆ ಎಂದು ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕಣ್ಣಿಟ್ಟು ನೋಡಿದರು. ಆಗ ಇದೆ.. ಇದೆ.. ನಾನು ನೋಡ್ದೆ ಎಂದು ಡಿಕೆಶಿ ಸ್ಪಷ್ಟಪಡಿಸಿದರು. ನಿಮ್ ಫೋಟೋ ಹಾಕಿದ್ದಾರೆ ಸರ್ ಎಂದು ಅಧಿಕಾರಿಗಳು ಕೂಡ ಮಾಹಿತಿ ನೀಡಿದರು. ಈ ವೇಳೆ ಹೌದಾ ಎಂದು ಸಿಎಂ ಸಿದ್ದರಾಮಯ್ಯ ಸುಮ್ಮನಾದರು.

click me!