ಹಿಮೋಫಿಲಿಯಾ ಕೊರತೆಯ ರೋಗಿಗಳ ಸಂಖ್ಯೆ ಹೆಚ್ಚಳ : ಡಾ.ಕೆ.ವಿ. ರಾಜೇಂದ್ರ

By Kannadaprabha News  |  First Published Jan 17, 2024, 11:29 AM IST

ಹಿಮೋಫಿಲಿಯಾ, ತಲೆಸೀಮಿಯಾ, ಸಿಕಲ್ ಸೆಲ್ ಕೊರತೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆತಂಕ ವ್ಯಕ್ತಪಡಿಸಿದರು.


  ಮೈಸೂರು : ಹಿಮೋಫಿಲಿಯಾ, ತಲೆಸೀಮಿಯಾ, ಸಿಕಲ್ ಸೆಲ್ ಕೊರತೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆತಂಕ ವ್ಯಕ್ತಪಡಿಸಿದರು.

ಮೈಸೂರು ಹಿಮೋಫಿಲಿಯಾ ಸೊಸೈಟಿಯು ಆರೋಗ್ಯ ಮತ್ತು ಇಲಾಖೆ ಮೈಸೂರು ವಿಭಾಗ ಹಾಗೂ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಜೆ.ಕೆ. ಮೈದಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಹಿಮೋಫಿಲಿಯಾ ಪುನರ್ವಸತಿ ಕುರಿತು ಕುಸುಮಾ ಅರಿಕೆ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

Latest Videos

undefined

ಹಿಮೋಫಿಲಿಯಾ, ತಲೆಸೀಮಿಯಾ, ಸಿಕಲ್ ಸೆಲ್ ಕೊರತೆ ಎದುರಿಸುತ್ತಿರುವ ರೋಗಿಗಳಿಗೆ ಅನುಕೂಲ ಕಲ್ಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಪ್ರಮುಖವಾಗಿ ಡ್ರಾಮಾ ಕೇರ್ ಸೆಂಟರ್ ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿ ಹಿಮೋಫಿಲಿಯಾ ಸಂಯೋಜಿತ ರಕ್ತ ಕೇಂದ್ರ ಸ್ಥಾಪನೆಗೆ ಕ್ರಮವಹಿಸುವುದಾಗಿ ಅವರು ತಿಳಿಸಿದರು.

ಜಿಲ್ಲಾಸ್ಪತ್ರೆ ಅಥವಾ ಟ್ರಾಮಾ ಸೆಂಟರ್ ನ ಒಂದೇ ಸೂರಿನಡಿ ಫಿಜಿಯೋಥೆರೆಪಿ, ನರ್ಸಿಂಗ್ ಕೇರ್ ಮತ್ತು ಮೆಡಿಸನ್ ಲಭ್ಯವಾಗಲಿದೆ. ಪ್ರತಿ ರೋಗಿಗೆ ತಿಂಗಳಿಗೊಮ್ಮೆ ಈ ಸೇವೆ ದೊರೆಯುವಂತೆ ಕ್ರಮ ವಹಿಸಲಾಗುವುದು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕಿ ಡಾ. ಪುಷ್ಪಾಲತಾ ಮಾತನಾಡಿ, ಹಿಮೋಫಿಲಿಯಾ ರಕ್ತ ಕಾಯಿಲೆಯಾಗಿದ್ದು, ಇದರಲ್ಲಿ ಒಳ ಮತ್ತು ಹೊರ ರಕ್ತಸ್ರಾವ ನಿಲ್ಲುವುದಿಲ್ಲ. ಅಂಶದ ಕೊರತೆಯಿಂದಾಗಿ ಹೆಪ್ಪುಗಟ್ಟುವಿಕೆ ರಚನೆಯಾಗುವುದಿಲ್ಲ. ಹಿಮೋಫಿಲಿಯಾ ಅನೇಕ ಬಾರಿ ಸಾವಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಮತ್ತು 1.5 ಲಕ್ಷಕ್ಕೂ ಹೆಚ್ಚು ಈ ದೀರ್ಘಕಾಲದಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ 2016ರಲ್ಲಿ ಅಂಗವೈಕಲ್ಯ ಕಾಯಿದೆಯಡಿ ಅಂಗವೈಕಲ್ಯ ಎಂದು ಘೋಷಿಸಲಾಗಿದೆ. ಆದರೆ, ಕೇವಲ ಶೇ. 25 ಪ್ರತಿಶತದಷ್ಟು ರೋಗಿಗಳು ಗುರುತಿಸಲ್ಪಟ್ಟಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ರಾಜ್ಯ ರಕ್ತ ಕಣ ಅಧಿಕಾರಿ ಡಾ. ಶಕೀಲಾ, ಡಾ.ಎಂ.ಎಸ್. ಶೋಭಾ, ಡಾ. ನಯಾಜ್ ಪಾಷಾ, ಡಾ. ಕುಸುಮಾ, ಮೈಸೂರು ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ .ಎಸ್.ಕೆ. ಮಿತ್ತಲ್, ಕಾರ್ಯದರ್ಶಿ ಎನ್. ಮಹದೇವ್ ಮೊದಲಾದವರು ಇದ್ದರು.

click me!