ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದ ಸರ್ಕಾರ : ಬಿ.ಎನ್.ಚಂದ್ರಪ್ಪ

By Kannadaprabha News  |  First Published Jan 17, 2024, 10:39 AM IST

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ನೀಡಿದ್ದ ಪ್ರಣಾಳಿಕೆಯಂತೆ 5 ಗ್ಯಾರಂಟಿಗಳನ್ನು 6 ತಿಂಗಳಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡುವ ಮೂಲಕ ರಾಜ್ಯದ ಜನರಿಗೆ ಕೊಟ್ಟ ಮಾತಿನ ಪ್ರಕಾರ ನುಡಿದಂತೆ ನಡೆದಿದ್ದಾರೆ ಎಂದು ಮಾಜಿ ಸಂಸದರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಆದ ಬಿ.ಎನ್.ಚಂದ್ರಪ್ಪ ಹೇಳಿದರು.


 ಶಿರಾ :  ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ನೀಡಿದ್ದ ಪ್ರಣಾಳಿಕೆಯಂತೆ 5 ಗ್ಯಾರಂಟಿಗಳನ್ನು 6 ತಿಂಗಳಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡುವ ಮೂಲಕ ರಾಜ್ಯದ ಜನರಿಗೆ ಕೊಟ್ಟ ಮಾತಿನ ಪ್ರಕಾರ ನುಡಿದಂತೆ ನಡೆದಿದ್ದಾರೆ ಎಂದು ಮಾಜಿ ಸಂಸದರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಆದ ಬಿ.ಎನ್.ಚಂದ್ರಪ್ಪ ಹೇಳಿದರು.

ನಗರದ ಗ್ರಾಮ ದೇವತೆ ಶ್ರೀ ದುರ್ಗಮ್ಮ ಕ್ಕೆ ಭೇಟಿ ನೀಡಿ ನಂತರಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

Tap to resize

Latest Videos

undefined

ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಪ್ರಧಾನಿಗಳಾಗುವುದಕ್ಕೂ ಮುಂಚೆ ನೀಡಿದ್ದ ಭರವಸೆಗಳಲ್ಲಿ ಶೇ. ೧೦ರಷ್ಟನ್ನೂ ಪೂರ್ಣಗೊಳಿಸಿಲ್ಲ. ಪ್ರತಿ ಬಾರಿಯೂ ಚುನಾವಣೆ ಹೊತ್ತಲ್ಲಿ ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸುತ್ತಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿ ನಡೆಯಿತು. ಸೈನಿಕರ ಮೇಲೆ ದಾಳಿ ಮಾಡಿದವರು ಯಾರೂ ಬಾಂಬ್ ಹಾಕಿದವರು ಯಾರೂ ಎಂಬುದೇ ಇದುವರೆಗೂ ಸಂಪೂರ್ಣ ಮಾಹಿತಿ ನಿಗೂಢವಾಗಿಯೇ ಉಳಿದಿದೆ. ಸೈನಿಕರ ಭಾವನಾತ್ಮಕ ವಿಷಯದಿಂದ ಕಳೆದ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಈ ಬಾರಿ ರಾಜನ್ಮಭೂಮಿಯ ನೆಪವನ್ನು ತಂದಿದ್ದಾರೆ. ರಾಮನ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೂ ಅಪಾರವಾದ ಗೌರವವಿದೆ. ಎಲ್ಲಾ ಪ್ರಜೆಗಳನ್ನು ಒಂದೇ ರೀತಿ ನೋಡಿದರೆ ಅದು ರಾಮ ರಾಜ್ಯದ ಕನಸು ನನಸಾಗುತ್ತದೆ. ಆದರೆ ದೇಶದ ಶೇ. ೨೧ ರಷ್ಟು ಇರುವ ಮುಸ್ಲಿಂ, ಕ್ರಿಶ್ಚಿಯನ್, ಬುದ್ದಿಷ್ಟ್ ಜನರನ್ನು ಹೊರಗಿಟ್ಟು ಬಿಜೆಪಿ ಪಕ್ಷ ಆಡಳಿತ ನಡೆಸುತ್ತಿದೆ. ಬಿಜೆಪಿ ಪಕ್ಷದಲ್ಲಿ ಟಿಕೇಟ್ ಕೊಡುವುದಿಲ್ಲ. ಮಂತ್ರಿಮಂಡಲದಲ್ಲಿ ಸ್ಥಾನವೂ ಇಲ್ಲ. ಹೀಗಿದ್ದಾಗ ಸಬ್‌ಕಾ ಸಾತ್ ಸಬ್‌ಕಾ ವಿಕಾಸ್ ಎಂದು ಹೇಳುವುದರಲ್ಲಿ ಅರ್ಥವಿದೆಯೇ ಎಂದರು.

\Bರಾಮನನ್ನು ಇವರಿಗೆ ಗುತ್ತಿಗೆ ಕೊಟ್ಟಿಲ್ಲ: \Bರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ನವರ ವಿರೋಧ ಇದೆ ಎಂದು ಬಿಂಬಿಸಲು ಹೊರಟಿದ್ದಾರೆ. ರಾಮ ಕೇವಲ ಬಿಜೆಪಿಯವರ ಸ್ವತ್ತಲ್ಲ. ರಾಮನನ್ನ ಅವರಿಗೆ ಗುತ್ತಿಗೆ ಕೊಟ್ಟಿಲ್ಲ. ರಾಮ ಎಲ್ಲರಿಗೂ ಸೇರಿದ್ದಾನೆ. ರಾಮನ ಮೇಲೆ ಅಪಾರವಾದ ಭಕ್ತಿ ನಮಗೂ ಇದೆ. ಆದರೆ ಬಿಜೆಪಿಯವರು ಈ ಬಾರಿಯ ಚುನಾವಣೆಗೆ ರಾಮನ ಹೆಸರಿನಲ್ಲಿ ಗೆಲುವು ಸಾಧಿಸಲು ಹೊರಟಿದ್ದಾರೆ. ಆದರೆ ಜನ ಈ ಬಾರಿ ಮೋಸ ಹೋಗುವುದಿಲ್ಲ. ಕಳೆದ ಎರಡು ಬಾರಿ ಮೋಸ ಹೋಗಿದ್ದಾರೆ. ಆದರೆ ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಕಾಂಗ್ರೆಸ್ ಪಕ್ಷ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ನೆಹರು ಅವರು ಹಲವಾರು ಜಲಾಶಯ ಕಟ್ಟಿಸಿದ್ದಾರೆ, ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದ್ದಾರೆ. ಆದರೆ ಬಿಜೆಪಿಯವರು ಕೇವಲ ಜಾತಿ ಜಾತಿಗಳನ್ನು ಎತ್ತಿ ಕಟ್ಟಿ ಚುನಾವಣೆ ಹೊತ್ತಲ್ಲಿ ಭಾವನಾತ್ಮಕವಾಗಿ ಸೆಳೆದು ಗೆಲುವು ಸಾಧಿಸುತ್ತಿರಿ ಎಂದರು.

\Bಅನಂತಕುಮಾರ್ ಹೆಗಡೆ ಕ್ಷಮೆ ಕೇಳಬೇಕು: ರಾಜ್ಯದ ೭ ಕೋಟಿ ಜನರ ಪ್ರತಿನಿಧಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರು ಮಾತನಾಡಿರುವುದು ಖಂಡನೀಯ. ಅವರು ಈ ರಾಜ್ಯದ ಜನರ ಕ್ಷಮೆ ಕೇಳಬೇಕು. ಇದೇ ರೀತಿ ಮುಂದುವರೆದರೆ ಬಿಜೆಪಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಬಿ.ಎನ್.ಚಂದ್ರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಎಚ್. ಗುರುಮೂರ್ತಿ ಗೌಡ, ಕೆಪಿಸಿಸಿ ಸದಸ್ಯ ಟಿ. ಲೋಕೇಶ್, ಮಾಜಿ ಜಿ.ಪಂ. ಸದಸ್ಯ ಅರೆಹಳ್ಳಿ ರಮೇಶ್, ಸಿ.ಆರ್‌. ಉಮೇಶ್, ಮಾಜಿ ತಾ.ಪಂ. ಸದಸ್ಯ ಪಿ.ಬಿ. ನರಸಿಂಹಯ್ಯ, ಮಂಜುಳಾ ಬಾಯಿ ಶೇಷಾನಾಯ್ಕ, ನಗರಸಭೆ ಸದಸ್ಯರಾದ ಲಕ್ಷ್ಮೀಕಾಂತ್, ಅಜಯ್‌ ಕುಮಾರ್, ಆಶ್ರಯ ಸಮಿತಿ ಸದಸ್ಯರಾದ ನೂರುದ್ದೀನ್, ಜಯಲಕ್ಷ್ಮೀ, ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಧರಣೇಶ್ ಗೌಡ, ಮುಖಂಡರಾದ ರಾಕೇಶ್, ರೂಪೇಶ್ ಕೃಷ್ಣಯ್ಯ, ಬಸವರಾಜು, ಶಾಸಮರು ಮೂರ್ತಿ, ಹೊನ್ನೇಶ್ ಗೌಡ ಇದ್ದರು.

click me!