ಕ್ರಿಯಾಶೀಲತೆ ಇದ್ದವರಿಗೆ ಉನ್ನತವಾದ ವೇದಿಕೆ ಮತ್ತು ಪ್ರೋತ್ಸಾಹ ನೀಡಿದರೆ ಕಲೆ ಬೆಳೆಯುತ್ತದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
ಮೈಸೂರು : ಕ್ರಿಯಾಶೀಲತೆ ಇದ್ದವರಿಗೆ ಉನ್ನತವಾದ ವೇದಿಕೆ ಮತ್ತು ಪ್ರೋತ್ಸಾಹ ನೀಡಿದರೆ ಕಲೆ ಬೆಳೆಯುತ್ತದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
ಹೆಬ್ಬಾಳದ ನಾದ ವಿದ್ಯಾಲಯ ಅಕಾಡೆಮಿ ಆಫ್ ಆ್ಯಂಡ್ ಡಾನ್ಸ್ ಸಂಸ್ಥೆ ಜಗನ್ಮೋಹನ ಅರಮನೆಯ ಸಭಾಂಗಣ ಆಯೋಜಿಸಿದ್ದ ಕಲಾವಿದೆ ಸುನಿತಾ ರತೀಶ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
undefined
ಬಹುಮುಖ ಪ್ರತಿಭೆಯ ಯುವ, ನವ ಕಲಾವಿದೆ ಸುನಿತಾ ಚಿಕ್ಕ ವಯಸ್ಸಿನಲ್ಲೇ ಹಲವು ರಂಗದಲ್ಲಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಭರತನಾಟ್ಯದಲ್ಲಿ ಅವರು ವಿನೂತನ ಪ್ರಯೋಗದ ಮೂಲಕ ಹೊಸ ಹೆಜ್ಜೆಗಳನ್ನು ಸ್ಥಾಪಿಸುತ್ತಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಮತ್ತು ,ರಾಷ್ಟ್ರಮಟ್ಟದ ವೇದಿಕೆಗಳು ಮತ್ತು ಮಾನ್ಯತೆ ದೊರಕಲಿ ಎಂದು ಹಾರೈಸಿದರು.
ವಿದುಷಿ ಮಿತ್ರಾ ಅವರು 32ನೇ ರಂಗಪ್ರವೇಶ ಕಾರ್ಯಕ್ರಮ ಮಾಡುತ್ತಿರುವುದು ದೊಡ್ಡ ಸಾಧನೆಯೇ ಆಗಿದೆ ಎಂದರು.
ನಾಟ್ಯಾಚಾರ್ಯ ಪ್ರೊ.ಕೆ. ರಾಮಮೂರ್ತಿ ರಾವ್ ಮಾತನಾಡಿ, ಆರಂಭದಿಂದ ಕೊನೆಯವರೆಗೂ ನಾಟ್ಯದಲ್ಲಿ ತನ್ನ ನಗುವಿನ ಮುಖಭಾವದೊಂದಿಗೆ ಸಭಿಕರನ್ನು ರಂಜಿಸುವ ಕಲೆಯನ್ನು ಸುನಿತಾ ಸಿದ್ಧಿಸಿಕೊಂಡಿದ್ದಾರೆ. ನಾಟ್ಯದಲ್ಲಿ ಅವರು ತೋರುವ ತಲ್ಲೀನತೆ, ಶ್ರದ್ಧಾಭಾವದಿಂದ ಅವರೊಬ್ಬ ನುರಿತ ನೃತ್ಯಪಟು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.
ಆರೋಗ್ಯ ಇಲಾಖೆ ಜಿಲ್ಲಾ ಅಧೀಕ್ಷಕ ಸುರೇಶ ಬಾಬು, ಉದ್ಯಮಿ ರತೀಶ್, ವಿದುಷಿ ಮಿತ್ರಾ ನವೀನ್, ವಿದ್ವಾನ್ ನವೀನ್, ಶ್ರೀರಾಮು ಇದ್ದರು.