ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದು ಅವರ ಜ್ಞಾನಾರ್ಜನೆಯ ಮಟ್ಟವನ್ನು ಉನ್ನತೀಕರಿಸಿ ಮನುಕುಲದ ಅಭಿವೃದ್ಧಿಗೆ ನಾಂದಿ ಹಾಡಬೇಕೆಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ತಿಪಟೂರು : ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದು ಅವರ ಜ್ಞಾನಾರ್ಜನೆಯ ಮಟ್ಟವನ್ನು ಉನ್ನತೀಕರಿಸಿ ಮನುಕುಲದ ಅಭಿವೃದ್ಧಿಗೆ ನಾಂದಿ ಹಾಡಬೇಕೆಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ನಗರದ ಕಲ್ಪತರು ವಿದ್ಯಾಸಂಸ್ಥೆಯ ಕಲ್ಪತರು ಸೆಂಟ್ರಲ್ ಶಾಲೆಯ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ ತಿಪ್ಪೇರುದ್ರಪ್ಪ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಯೊಬ್ಬರನ್ನು ರಂಜಿಸುವ ಜೊತೆಗೆ ಬದುಕಿನ ಮೂಲಮಂತ್ರವಾಗಿವೆ. ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಲ್ಲಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುತ್ತವೆ. ಶಿಕ್ಷಣದ ಜೊತೆ ಜೊತೆಗೆ ಇಂತಹ ಕಾರ್ಯಗಳ ಪೋ›ತ್ಸಾಹಕ್ಕೆ ಸದಾ ನಾವು ಸಿದ್ದರಾಗಿರುತ್ತೇವೆಂದು ತಿಳಿಸಿದರು.
ಕೆವಿಎಸ್ ಉಪಾಧ್ಯಕ್ಷ ಬಾಗೆಪಲ್ಲಿ ನಟರಾಜ್ ಮಾತನಾಡಿ, ವು ಕೆಲವೇ ಜನರ ಸ್ವತ್ತಾಗದೆ ಎಲ್ಲರ ಹಕ್ಕಾಗಬೇಕು ಎಂಬ ತತ್ವದ ಅಡಿಯಲ್ಲಿ ಈಯು ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಬದ್ಧರಾಗಿ ನಾವೆಲ್ಲ ಕಾರ್ಯೋನ್ಮುಖರಾಗಿದ್ದು ಇದರ ಸದುಪಯೋಗವನ್ನು ಮಕ್ಕಳೆಲ್ಲರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕೆವಿಎಸ್ ಕಾರ್ಯದರ್ಶಿ ಎಂ.ಆರ್ ಸಂಗಮೇಶ್ ಮಾತನಾಡಿ, ಶಿಕ್ಷಣವು ಮಾನವನನ್ನು ಸುಸಂಸ್ಕೃತದತ್ತ ಕೊಂಡೊಯ್ಯುವ ಸಾಧನ. ಇಂತಹ ಶಿಕ್ಷಣವನ್ನು ನಮ್ಮ ಸಂಸ್ಥೆ ಹಾಗೂ ಶಾಲೆಯು ಅಂದಿನಿಂದ ಇಂದಿನವರೆಗೂ ನೀಡುತ್ತಾ ಬಂದಿದೆ. ಅಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳು ಮಾನವನ ಅವಿಭಾಜ್ಯ ಅಂಗಗಳಾಗಿವೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಮಕ್ಕಳು ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಎಲ್ಲರನ್ನು ರಂಜಿಸುತ್ತ ಅನೇಕ ಪ್ರಶಸ್ತಿಗಳನ್ನು ಪಡೆದು ಮುನ್ನಡೆಯುತ್ತಿದ್ದು ಪೋಷಕರು ಹಾಗೂ ನಮಗೆ ಸಂತಸ ತಂದಿದೆ ಎಂದರು.
ಶಾಲಾ ಪ್ರಾಂಶುಪಾಲರಾದ ದೇವಿಕ ಬಿ.ಸ್ವಾಮಿ ಶಾಲಾ ಅಭಿವೃದ್ಧಿ ಹಾಗೂ ಮಕ್ಕಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಾಧನೆಯ ವರದಿಯನ್ನು ಓದಿದರು. ಸಮಾರಂಭದಲ್ಲಿ ಕೆವಿಎಸ್ ಉಪಾಧ್ಯಾಕ್ಷರಾದ ಟಿ.ಎಸ್ ಬಸವರಾಜು, ಜಿ.ಪಿ ದೀಪಕ್, ಬಿ.ಎಸ್ ಉಮೇಶ್, ಕಾರ್ಯದರ್ಶಿಗಳಾದ ಟಿ.ಯು ಜಗದೀಶ್‌ಮೂರ್ತಿ, ಜಿ .ಎಸ್. ಉಮಾಶಂಕರ್, ಎಚ್.ಜಿ ಸುಧಾಕರ್, ತಹಸೀಲ್ದಾರ್ ಎಸ್. ಪವನ್‌ಕುಮಾರ್ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ಪ್ರಭುಸ್ವಾಮಿ, ಸೇರಿದಂತೆ ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಭರತನಾಟ್ಯ, ಭೂತಕೋಲ, ಶಿವತಾಂಡವ, ಸಿರಿಗನ್ನಡಂ ಗೆಲ್ಗೆ, ಯಕ್ಷಗಾನ, ವಿವಿಧ ರಾಜ್ಯಗಳ ಕಲೆಗಳನ್ನು ನಯನ ಮನೋಹರವಾಗಿ ನೃತ್ಯ ಮಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಕೋಟ್...1
ಪೋಷಕರು ಅಂಕಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡದೆ ಪಠ್ಯೇತರ ಚಟುವಟಿಕೆಗಳ ಮೂಲಕ ಅನುರಾಗದ ಶಿಕ್ಷಣವನ್ನು ಸ್ವೀಕರಿಸುವ ಮನೋಭವ ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ ಒತ್ತಡ ಹೇರದೆ ಅವರಲ್ಲಿ ಪ್ರತಿಭೆಯನ್ನು ಗುರ್ತಿಸುವ ಕೆಲಸ ಮಾಡಬೇಕು. ಶಿಕ್ಷಕರು ಸಹ ಇದಕ್ಕೆ ಪೋ›ತ್ಸಾಹ ನೀಡಬೇಕು. ಸರ್ಕಾರವೂ ಸಹ ಮಕ್ಕಳ ಪ್ರತಿಭೆ ಗುರುತಿಸಲು ವಿಭಿನ್ನ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
ಬಿ.ಸಿ. ನಾಗೇಶ್ ಶಿಕ್ಷಣ ಸಚಿವ
ಕೋಟ್...2
ಸ್ವಾಮಿ ವಿವೇಕಾನಂದರು ಹೇಳಿರುವಂತೆ ನಮ್ಮ ಆಲೋಚನೆಗಳೆ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೊ ಅದರ ಬಗ್ಗೆ ಎಚ್ಚರದಿಂದಿರಿ. ಇಂತಹ ಮೌಲ್ಯಯುತ ಯೋಚನಾ ಮಟ್ಟದ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಗಾಂಧೀಜಿಯವರ ದೃಷ್ಟಿಕೋನವಾದ ಔದ್ಯೋಗಿಕ ಶಿಕ್ಷಣಕ್ಕೆ ಹೆಚ್ಚು ಹೊತ್ತು ಕೊಟ್ಟು ಮಕ್ಕಳಲ್ಲಿ ಕ್ರಿಯಾಶೀಲತೆಯ ಗುಣವನ್ನು ಬೆಳಸಿ ಸ್ವಾವಲಂಬನೆಯ ಜೀವನ ನಡೆಸಲು ಪೋ›ತ್ಸಾಹಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲಿದೆ.
ವೊಡೇ ಪಿ ಕೃಷ್ಣ ಶಿಕ್ಷಣ ತಜ್ಞ
ಫೋಟೋ 12-ಟಿಪಿಟಿ2ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ :
ತಿಪಟೂರು ಕಲ್ಪತರು ಸೆಂಟ್ರಲ್ ಶಾಲೆಯ ಶಾಲಾ ವಾರ್ಷಿಕೋತ್ಸವದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಪಿ.ಕೆ ತಿಪ್ಪೇರುದ್ರಪ್ಪ, ಶಿಕ್ಷಣ ತಜ್ಞ ವೊಡೇ ಪಿ ಕೃಷ್ಣ ಮತ್ತಿತರರಿದ್ದರು.