ಕೊಡಗು ಜಿಲ್ಲೆಯಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದ ತಾಪಮಾನ: ಸ್ಥಳೀಯರ ಆತಂಕ

By Govindaraj S  |  First Published Jan 11, 2023, 8:20 PM IST

ಬೆಟ್ಟ, ಗುಡ್ಡಗಳಿಂದ ಕೂಡಿರುವ ಕೊಡಗು ಸಾಮಾನ್ಯವಾಗಿಯೇ ಕೂಲ್ ಕೂಲ್ ಆಗಿರುತ್ತದೆ. ಆದರೆ ಈ ಬಾರಿ ಅದೇಕೋ ಕಂಡು ಕೇಳರಿಯದಷ್ಟು ಮೈಕೊರೆಯುವ ಚಳಿ ಇದ್ದು, ಹೃದಯ ಸಂಬಂಧಿ ಮತ್ತು ಉಸಿರಾಟದ ಸಂಬಂಧಿ ಕಾಯಿಲೆಗಳು ತೀವ್ರಗೊಳ್ಳುತ್ತಿವೆ.


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜ.11): ಬೆಟ್ಟ, ಗುಡ್ಡಗಳಿಂದ ಕೂಡಿರುವ ಕೊಡಗು ಸಾಮಾನ್ಯವಾಗಿಯೇ ಕೂಲ್ ಕೂಲ್ ಆಗಿರುತ್ತದೆ. ಆದರೆ ಈ ಬಾರಿ ಅದೇಕೋ ಕಂಡು ಕೇಳರಿಯದಷ್ಟು ಮೈಕೊರೆಯುವ ಚಳಿ ಇದ್ದು, ಹೃದಯ ಸಂಬಂಧಿ ಮತ್ತು ಉಸಿರಾಟದ ಸಂಬಂಧಿ ಕಾಯಿಲೆಗಳು ತೀವ್ರಗೊಳ್ಳುತ್ತಿವೆ. ಪರಿಸರವೇ ಮಸುಕು, ಮಸುಕಾಗಿರುವಂತೆ ಸುರಿಯುತ್ತಿರುವ ಹಿಮ, ಮೈಕೊರೆಯುವ ಚಳಿ ತಡೆಯಲಾರದೆ ಟೋಪಿ, ಸ್ವೆಟರ್ ಧರಿಸಿ ಓಡುವುದೋ ಬೇಡವೋ ಎಂದು ವಾಯುವಿಹಾರ ಮಾಡುತ್ತಿರುವ ವೃದ್ಧರು. ಯುವಕರು ವೃದ್ಧರಾದಿಯಾಗಿ ಚಳಿ ತಡೆಯುವುದಕ್ಕೆ ಸಾಧ್ಯವೇ ಇಲ್ಲಪ್ಪ ಎಂದು ಸಿಕ್ಕ ತರಗೆಲೆ, ಒಣಹುಲ್ಲು ಕೂಡಿಹಾಕಿ ಬೆಂಕಿಹಚ್ಚಿ ಚಳಿ ಕಾಯಿಸುತ್ತಿರುವ ಜನರು. 

Tap to resize

Latest Videos

undefined

ಹೌದು! ಸದ್ಯ ಕೊಡಗಿನ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತಿರುವ ದೃಶ್ಯಗಳು. ಸಾಕಷ್ಟು ಅರಣ್ಯ ಪ್ರದೇಶದಿಂದ ಕೂಡಿರುವ ಕೊಡಗಿನಲ್ಲಿ ಸಾಮಾನ್ಯವಾಗಿ ಕನಿಷ್ಠ 16ರಿಂದ 18ರಷ್ಟು ತಾಪಮಾನ ಇರುತ್ತದೆ. ಆದರೆ ಈ ಬಾರಿ ಹವಾಮಾನ ಆ ರೀತಿ ಇಲ್ಲ. ಬದಲಾಗಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಅದರಲ್ಲೂ ಕಳೆದ ನಾಲ್ಕು ದಿನಗಳಿಂದ ಕೇವಲ 11 ಕನಿಷ್ಠ ತಾಪಮಾನ ದಾಖಲಾಗಿದೆ. ಇನ್ನೂ ನಾಲ್ಕೈದು ದಿನಗಳ ಕಾಲ 12ರಿಂದ 13ರಷ್ಟು ಕನಿಷ್ಠ ತಾಪಮಾನ ಅಷ್ಟೇ ದಾಖಲಾಗಲಿದೆ. ಇದು ಹಿಂದೆ ಎಂದೂ ಇಷ್ಟೊಂದು ಮೈಕೊರೆಯುವ ಚಳಿ ಇರಲಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ಸಂಸದ ಜಿ.ಎಸ್.ಬಸವರಾಜು ದೊಡ್ಡ ಲೂಟಿಕೋರ: ಶಾಸಕ ಎಸ್.ಆರ್.ಶ್ರೀನಿವಾಸ್

ಇನ್ನೂ ಈ ಕುರಿತು ಮಾತನಾಡಿರುವ ಅರವತ್ತೊಕ್ಲು ಗ್ರಾಮದ ಮಹಿಳೆ ಕುಮುದಾ ಅವರು ಮಾತನಾಡಿ ಮನೆಯಿಂದ ಹೊರಗೆ ಹೊರಡಲು ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ಹತ್ತು ಗಂಟೆಯಾದರೂ ಚಳಿ ಕಡಿಮೆಯಾಗುತ್ತಿಲ್ಲ. ಮಧ್ಯಾಹ್ನ ತೀವ್ರವಾದ ಬಿಸಿಲಿದ್ದರೆ, ಮೂರು ಗಂಟೆ ಎನ್ನುವಷ್ಟರಲ್ಲಿಯೇ ಮತ್ತೆ ಚಳಿ ಆರಂಭವಾಗುತ್ತದೆ. ವೃದ್ಧರು, ಮಕ್ಕಳು ಸಮಸ್ಯೆ ಅನುಭವಿಸುವಂತೆ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗೆ ಕನಿಷ್ಠ ತಾಪಮಾನ ದಾಖಲಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಹೃದಯ ಸಂಬಂಧಿ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. 

ತೀವ್ರ ಚಳಿಯಿಂದಾಗಿ ನಿತ್ಯ ಕನಿಷ್ಠ ಎರಡು ಕಾರ್ಡಿಯಾಸ್ಟಿಕ್ ಅರೆಸ್ಟ್ ಪ್ರಕರಣದ ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಶ್ವಾಸಕೋಶ ಸಂಬಂಧಿ ರೋಗಗಳು ಹೆಚ್ಚುತ್ತಿದ್ದು, ಉಸಿರಾಟದ ಸಮಸ್ಯೆಯಿಂದ ಜಿಲ್ಲೆಯ ಐದು ತಾಲ್ಲೂಕು ಆಸ್ಪತ್ರೆಗಳಿಗೆ ನಿತ್ಯ ಕನಿಷ್ಠ ನೂರು ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ಹೀಗೆ ಹೃದಯ ಸಂಬಂಧಿ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಆಗಮಿಸುತ್ತಿರುವವರಿಗೆ ತಡ ಮಾಡದೆ, ತಕ್ಷಣವೇ ಚಿಕಿತ್ಸೆ ಕೊಡುವಂತೆ ಎಲ್ಲಾ ಆಸ್ಪತ್ರೆಗಳ ವೈದ್ಯರಿಗೆ ಸೂಚಿಸಲಾಗಿದೆ. ಜೊತೆಗೆ ಐಎಲ್ಐ ಮತ್ತು ಸಾರಿ ಕೇಸ್‌ಗಳು ಜಾಸ್ತಿ ಆಗುತ್ತಿವೆ. 

Chamarajanagar: ಬೆಳೆ ರಕ್ಷಣೆಗಾಗಿ ರೈತನಿಂದ ನಾಯಿಗೆ ಹುಲಿ ಬಣ್ಣ!

ವೃದ್ದರು, ಮಕ್ಕಳು ಕೆಮ್ಮು, ಜ್ವರ, ಶೀತದಂತಹ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಕೋವಿಡ್ ಕೂಡ ಹೆಚ್ಚಾಗುವ ಸಾಧ್ಯತೆ. ಜನರು ಸಾಧ್ಯವಾದಷ್ಟು ಬೆಚ್ಚನೆ ಇರುವಂತೆ ನೋಡಿಕೊಳ್ಳಿ, ಟೊಪ್ಪಿ, ಸ್ಪೆಟರ್ ಸೇರಿದಂತೆ ವಿವಿಧ ಬೆಚ್ಚನೆಯ ಉಡುಪುಗಳನ್ನು ಧರಿಸಿ ಎಂದು ಎಂದು ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಹಿಂದೆ ಎಂದೂ ಕಂಡು ಕೇಳರಿಯದಷ್ಟು ಮೈ ಕೊರೆಯುವ ಚಳಿ ಬೀಸುತ್ತಿದ್ದು, ಜನರು ಆತಂಕ ಪಡುವಂತೆ ಆಗಿದೆ. ಇನ್ನೂ ನಾಲ್ಕೈದು ದಿನಗಳ ಕಾಲ ಚಳಿಗಾಳಿ ಇದೇ ರೀತಿ ಮುಂದುವರಿಯಲಿದ್ದು, ಜನರು ಈ ಸ್ಥಿತಿಯನ್ನು ಅನುಭವಿಸಲೇಬೇಕು.

click me!