Dharwad: ಶಾಲೆಗಳಿಗೆ ಮಾತ್ರ ರಜೆ, ಕಾಲೇಜುಗಳಿಗೆ ರಜೆ ಇಲ್ಲ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ಪಷ್ಟನೆ

By Sathish Kumar KH  |  First Published Jan 11, 2023, 7:39 PM IST

ನಾಳೆ ಒಂದು ದಿನ ಮಾತ್ರ ಹುಬ್ಬಳ್ಳಿ ನಗರದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ  ರಜೆ ಘೋಷಣೆ; ಪಿಯುಸಿ,ಪದವಿ ಕಾಲೇಜುಗಳಿಗೆ ರಜೆ ಇಲ್ಲ: ಡಿಸಿ ಗುರುದತ್ತ ಹೆಗಡೆ


ಧಾರವಾಡ (ಜ.11):  ಧಾರವಾಡ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮ ಹುಬ್ಬಳ್ಳಿ ನಗರದ ರೈಲ್ವೆ ಮೈದಾನದಲ್ಲಿ ಜರುಗುವದರಿಂದ ಮತ್ತು ಮಾನ್ಯ ಪ್ರಧಾನಮಂತ್ರಿಗಳು ಕಾರ್ಯಕ್ರಮ ಉದ್ಘಾಟನೆಗೆ ಆಗಮಸುತ್ತಿರುವದರಿಂದ ಜನದಟ್ಟಣೆ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಳೆ ಒಂದು ದಿನ ಮಾತ್ರ ಹುಬ್ಬಳ್ಳಿ ನಗರದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ  ರಜೆ ಘೋಷಣೆ ಮಾಡಲಾಗಿದೆ. ಉಳಿದಂತೆ ಪದವಿಪೂರ್ವ ಕಾಲೇಜು ಮತ್ತು ಉಳಿದ ಎಲ್ಲ ಪದವಿ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. 

ಧಾರವಾಡ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವು ಹುಬ್ಬಳ್ಳಿ ನಗರದಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ ನಗರದ 1 ರಿಂದ 10 ನೇ ತರಗತಿ ವರೆಗಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜ.12ರ ಬುಧವಾರದಂದು ಮಾತ್ರ ಒಂದು ದಿನ ರಜೆ ಘೋಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಜಿಲ್ಲೆಯ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಯಾವುದೇ ರಜೆ ನೀಡಿರುವದಿಲ್ಲ. ಎಂದಿನಂತೆ ಪಿಯುಸಿ ಮತ್ತು ಪದವಿ ಕಾಲೇಜುಗಳ ತರಗತಿಗಳು ನಡೆಯುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tap to resize

Latest Videos

Dharwad: ಪಿಎಂ ಯುವಜನೋತ್ಸವಕ್ಕೆ ಯುವಕರಿಗಿಲ್ಲ ಅವಕಾಶ: ಕಾಲೇಜು, ಹಾಸ್ಟೆಲ್‌ಗೆ ರಜೆ ಘೋಷಣೆ

ಹಾಸ್ಟೆಲ್‌ಗಳಿಗೆ ರಜೆ ಘೋಷಣೆ: ಜನವರಿ 12 ರಂದು 26 ನೇಯ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಜನೇವರಿ 12 ರಿಂದ 16 ರ ವರೆಗೆ ಯುವಜನೊತ್ಸವ ನಡೆಯಲಿದೆ. ಒಂದು ಕಡೆ ಮಕ್ಕಳಿಗೆ ಯುವಜನೋತ್ಸವ ಮಾಡಿ ಯುವಕರಿಗೆ ಮಾದರಿಯಾಗಬೇಕಾದ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿಶ್ವವಿದ್ಯಾಲಯದ ಎಲ್ಲ ಕ್ಯಾಂಪಸ್ ಹಾಸ್ಟೆಲ್‌ಗಳಿಗೆ ರಜೆ ಘೋಷಣೆ ಮಾಡಿದೆ. ಈ ಬಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಕೆ.ಬಿ ಗುಡಸಿ ಆದೇಶ ಹೋರಡಿಸಿದ್ದಾರೆ. ಇನ್ನು ಕವಿವಿಯ ಕ್ಯಾಂಪಸನ್ ಎಲ್ಲ ಹಾಸ್ಟೆಲ್ ಗಳು, ಕರ್ನಾಟಕ ಕಾಲೇಜಿನ ಎಲ್ಲ ಹಾಸ್ಟೆಲ್ ಗಳು, ಮತ್ತು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಾಸ್ಟೆಲ್ ಗಳನ್ನ ವಸತಿ ಸಮೇತ ಖಾಲಿ ಮಾಡಬೇಕು ಎಂದು ಆದೇಶವನ್ನ ಹೊರಡಿಸಿದೆ. ಒಂದು ಕಡೆ ಕವಿವಿಯ ವ್ಯಾಪ್ತಿಯಲ್ಲಿ ವಿವಿಧ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು ನಾವು ಎಂದು ಕವಿವಿ ಕುಲಪತಿ ಗಳಿಗೆ ಬಿಡಿಶಾಪವನ್ನ ಹಾಕುತ್ತಿದ್ದಾರೆ. 

click me!