ಹಂಪಿಯಲ್ಲಿ ಬಿದ್ದಿರೋ ಖಾಲಿ ಪ್ಲಾಸ್ಟಿಕ್ ಬಾಟಲ್‌ಗೆ ದರ ನಿಗಿದಿ; ಪುರಾತತ್ವ ಇಲಾಖೆಯ ಯೋಜನೆ

Published : Jul 20, 2026, 12:02 PM IST
Hampi

ಸಾರಾಂಶ

ವಿಶ್ವವಿಖ್ಯಾತ ಹಂಪಿಯನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಲು, ಹಂಪಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆ ಹೊಸ ಯೋಜನೆ ಜಾರಿಗೆ ತಂದಿದೆ. ಪ್ರವಾಸಿಗರು ಬಳಸಿದ ಖಾಲಿ ಪ್ಲಾಸ್ಟಿಕ್‌ ಬಾಟಲಿಗಳನ್ನು ನಿಗದಿತ ಯಂತ್ರದಲ್ಲಿ ಹಾಕಿದರೆ, ಪ್ರತಿ ಬಾಟಲಿಗೆ ಹಣ ಪಡೆಯಬಹುದು. ಈ ಕ್ರಮವು ಹಂಪಿಯಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಪರಿಸರ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ.

ಸಿ.ಕೆ. ನಾಗರಾಜ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲಿಗಳು ಎಸೆಯುವಂತಿಲ್ಲ. ಹಂಪಿಯ ಪ್ರಮುಖ ಪಾರ್ಕಿಂಗ್ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ರಷಿಂಗ್ (ಪುಡಿಗಟ್ಟುವ) ಯಂತ್ರಗಳನ್ನು ಅಳವಡಿಸಲಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್‌ಗಳನ್ನು ಈ ಯಂತ್ರದಲ್ಲಿ ಹಾಕಿದರೆ ಸಾಕು ತಕ್ಷಣವೇ ನೀವು ₹1 ಪಡೆಯಬಹುದು.

ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರದೊಳಗೆ ಒಂದು ಪ್ಲಾಸ್ಟಿಕ್‌ ಬಾಟಲಿ ಹಾಕಿದರೆ ಸಾಕು, ನಿಮಗೆ ಒಂದು ರುಪಾಯಿ ನಾಣ್ಯ ನೀಡುತ್ತದೆ. ಇದು ಪ್ರವಾಸಿಗರಲ್ಲಿ ಪರಿಸರ ಕಾಳಜಿ ಉತ್ತೇಜಿಸುವ ಕ್ರಮವಾಗಿದೆ. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಂತಹದೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ.

ಪ್ಲಾಸ್ಟಿಕ್‌ ಮುಕ್ತ ಹಂಪಿ

ಹಂಪಿಗೆ ದೇಶ-ವಿದೇಶ ಪ್ರವಾಸಿಗರು, ಸಾವಿರಾರು ಭಕ್ತರು ನಿತ್ಯವೂ ಭೇಟಿ ನೀಡುತ್ತಾರೆ. ಬಹುತೇಕ ಪ್ರವಾಸಿಗರು ತಾವು ತಂದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಾಡುತ್ತಾರೆ. ಇದರಿಂದ ಹಂಪಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬೀಳುತ್ತಿದೆ. ಸ್ವಚ್ಛತೆ ಕಾರ್ಯ ಕಾರ್ಮಿಕರಿಗೆ ಸವಾಲಿನ ಕೆಲಸವಾಗಿತ್ತು. ಅದರಿಂದ ಸ್ವಚ್ಛ ಹಂಪಿ-ಸುಂದರ ಹಂಪಿ ಎನ್ನುವ ಈ ಅಭಿಯಾನವನ್ನು ಎಎಸ್‌ಐ, ಹಂಪಿ ಪ್ರಾಧಿಕಾರ ಆರಂಭಿಸಿತು. ಪ್ಲಾಸ್ಟಿಕ್‌ ಮುಕ್ತ ಹಂಪಿಯನ್ನಾಗಿ ರೂಪಿಸುವ ಕಾರ್ಯಕ್ಕೆ ಹೈಟೆಕ್‌ ಸ್ಪರ್ಶ ನೀಡಲು ಮುಂದಾಗಿದೆ.

ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರಗಳ ಅಳವಡಿಕೆ

ಪ್ರವಾಸಿಗರು ಹೆಚ್ಚು ಭೇಟಿ ನೀಡುವ ವಿರೂಪಾಕ್ಷೇಶ್ವರ ದೇವಸ್ಥಾನ, ಪಾರ್ಕಿಂಗ್‌ ಪ್ರದೇಶ, ಗೆಜ್ಜಲ ಮಂಪಟ, ರಾಣಿಸ್ನಾನಗೃಹ, ಕಡಲೆಕಾಳು ಗಣೇಶ, ಮಹಾನವಮಿ ದಿಬ್ಬ ಸೇರಿದಂತೆ ಹಂಪಿಯ ಪ್ರಮುಖ 7​-8 ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಪ್ಲಾಸ್ಟಿಕ್ ರಿಸೈಕ್ಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಂಪನಿಯೊಂದು ಈ ಯಂತ್ರಗಳನ್ನು ಅಳವಡಿಸಿದೆ.

10-15 ದಿನಗಳಲ್ಲಿ ಅಧಿಕೃತವಾಗಿ ಕಾರ್ಯಾರಂಭ

ಹಂಪಿಯಲ್ಲಿ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಪ್ರವಾಸಿಗರು ಬಳಸುವ ಪ್ಲಾಸ್ಟಿಕ್‌ ನೀರಿನ ಬಾಟಲಿಗಳು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರಕ್ಕೆ ಮಾರಕವಾಗುತ್ತಿವೆ. ಇದನ್ನು ತಪ್ಪಿಸಲು ರಿವರ್ಸ್‌ ವೆಂಡಿಂಗ್‌ ಯಂತ್ರಗಳನ್ನು ಪಾರ್ಕಿಂಗ್‌ ಪ್ರದೇಶದಲ್ಲಿ ಅಳವಡಿಸಲಾಗುತ್ತಿದೆ. ಇನ್ನು 10-15 ದಿನಗಳಲ್ಲಿ ಈ ಯೋಜನೆ ಅಧಿಕೃತವಾಗಿ ಕಾರ್ಯಾರಂಭವಾಗಲಿದೆ ಎನ್ನುತ್ತಾರೆ ಪುರಾತತ್ವ ಅಧೀಕ್ಷಕರು, ಎಎಸ್‌ಐ ಹಂಪಿ ವೃತ್ತ ಕೆ. ರಾಮಕೃಷ್ಣ ರೆಡ್ಡಿ.

PREV
Read more Articles on
click me!

Recommended Stories

ಪುನರ್ವಸು ಮಳೆಗೆ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ; ಕೃಷಿ ಚುಟುವಟಿಕೆ ಚುರುಕು
ಶಿವಮೊಗ್ಗ-ನರಸಿಂಹರಾಜಪುರ- ಕೊಪ್ಪ ಮಾರ್ಗವಾಗಿ ಶೃಂಗೇರಿ ರೇಲ್ವೆ ಮಾರ್ಗ; ಆಗುಂಬೆ ಸುರಂಗ ಮಾರ್ಗ