ಉಪ ನೊಂದಣಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗಳನ್ನು ಮತ್ತಷ್ಟುಸುಲಭ ಮತ್ತು ಸರಳವಾಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸರ್ಕಾರ ರೂಪಿಸಿರುವ ಕಾವೇರಿ 2.0 ತಂತ್ರಾಂಶವನ್ನು ಜೂನ್ 20 ರೊಳಗೆ ರಾಜ್ಯಾದ್ಯಂತ ಅನುಷ್ಠಾನಕ್ಕೆ ಬರಲಿದೆ ಎಂದು ರಾಜ್ಯ ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಾದ ಡಾ.ಬಿ.ಆರ್.ಮಮತಾ ತಿಳಿಸಿದರು.
ಚಿಕ್ಕಬಳ್ಳಾಪುರ : ಉಪ ನೊಂದಣಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗಳನ್ನು ಮತ್ತಷ್ಟುಸುಲಭ ಮತ್ತು ಸರಳವಾಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸರ್ಕಾರ ರೂಪಿಸಿರುವ ಕಾವೇರಿ 2.0 ತಂತ್ರಾಂಶವನ್ನು ಜೂನ್ 20 ರೊಳಗೆ ರಾಜ್ಯಾದ್ಯಂತ ಅನುಷ್ಠಾನಕ್ಕೆ ಬರಲಿದೆ ಎಂದು ರಾಜ್ಯ ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಾದ ಡಾ.ಬಿ.ಆರ್.ಮಮತಾ ತಿಳಿಸಿದರು.
ಜಿಲ್ಲಾ ಕೇಂದ್ರದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಶನಿವಾರ ಕಾವೇರಿ ತಂತ್ರಾಂಶ 2 ತಂತ್ರಾಂಶದಡಿ ನೋಂದಣಿ ಮಾಡಿಕೊಂಡ ಫಲಾನುಭವಿಗೆ ದಸ್ತಾವೇಜು ವಿತರಣೆ ಮಾಡುವ ಮೂಲಕ ಅನುಷ್ಠಾನಕ್ಕೆ ಅವರು ಚಾಲನೆ ನೀಡಿ ಮಾತನಾಡಿ, ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳ್ಳಲಿದೆಂದರು.
ಮಧ್ಯವರ್ತಿಗಳ ಹಾವಳಿಗೆ ಬ್ರೇಕ್
ಆಸ್ತಿ ನೋಂದಣಿ ಪ್ರಕ್ರಿಯೆಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ವಿಳಂಬವನ್ನು ತಪ್ಪಿಸಲು ಹಾಗೂ ಮಧ್ಯವರ್ತಿಗಳ ಹಾವಳಿಯಿಲ್ಲದೇ ನೇರವಾಗಿ ಸಾರ್ವಜನಿಕರೇ ಆನ್ ಲೈನ್ ಮೂಲಕ ಸುಲಭ ಮತ್ತು ಸರಳ ನೋಂದಣಿ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಕಾವೇರಿ 2.0 ತಂತ್ರಾಂಶ ಹೆಚ್ಚು ಅನುಕೂಲವಾಗಿದೆ. ಈ ವರ್ಷದ ಜೂನ್ ತಿಂಗಳ ಅಂತ್ಯದೊಳಗಾಗಿ ರಾಜ್ಯದ ಎಲ್ಲಾ ಕಚೇರಿಗಳಲ್ಲಿಯೂ ಈ ತಂತ್ರಾಂಶವನ್ನು ಅಳವಡಿಸಿ ಸಾರ್ವಜನಿಕರ ಆಸ್ತಿನೊಂದಣಿ ಪ್ರಕ್ರಿಯೆಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಆಸ್ತಿ ನೋಂದಣಿ ಅಕ್ರಮ ತಡೆಗೆ ಹೊಸ ಪದ್ಧತಿ: ಸಚಿವ ಆರ್.ಅಶೋಕ್
ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿಯೂ ಈ ತಿಂಗಳ 11 ರೊಳಗಾಗಿ ಕಾವೇರಿ 2.0 ತಂತ್ರಾಂಶದ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ ಎಂದು ತಿಳಿಸಿದರು. ಆಸ್ತಿ ನೋಂದಣಿ, ಕ್ರಯ, ಕರಾರು, ದಾನ, ಒಪ್ಪಂದ ಕರಾರು ಮತ್ತು ಉಯಿಲು (ವಿಲ್…) ಸೇರಿ ನಾನಾ ಸೇವೆಗಳನ್ನು ಸಾರ್ವಜನಿಕರು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಿನವಿಡೀ ಕಾಯುವ ತಾಪತ್ರಯ ಇರುವುದಿಲ್ಲ ಹಾಗೂ ಮಧ್ಯವರ್ತಿಗಳಿಲ್ಲ. ’ಕಾವೇರಿ -2’ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ಮನೆಯಿಂದಲೇ ಆಸ್ತಿ ನೋಂದಣಿ ಮತ್ತಿತರ ಸೇವೆ ಪಡೆಯಬಹುದಾಗಿದೆ ಎಂದರು.
ಜಿಲ್ಲೆಯ ಚಿಂತಾಮಣಿ ಏ. 03, ಗೌರಿಬಿದನೂರು ಏ. 05, ಬಾಗೇಪಲ್ಲಿ ಏ. 06, ಶಿಡ್ಲಘಟ್ಟಏ.10, ಗುಡಿಬಂಡೆಯಲ್ಲಿ ಏ.11 ರಂದು ಅನುಷ್ಠಾನಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ನೋಂದಣಾಧಿಕಾರಿ ಶ್ರೀದೇವಿ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿನಿಂದ ಏಪ್ರಿಲ್ 11 ರೊಳಗೆ ಕಾವೇರಿ - 2 ತಂತ್ರಾಂಶ ಆಧಾರಿತ ನೋಂದಣಿ ವ್ಯವಸ್ಥೆಯು ಅನುಷ್ಠಾನಗೊಳ್ಳಲಿದೆ. ಸಾರ್ವಜನಿಕರು ಹೆಚ್ಚಿನ ವಿವರಗಳಿಗೆ ಜಾಲತಾಣ ಅಥವಾ ಸಹಾಯವಾಣಿ 080-68265316 ಅನ್ನು ಸಂಪರ್ಕಿಸಿ ಈ ತಂತ್ರಾಂಶದ ಅನುಕೂಲ ಪಡೆಯಲು ಅವರು ಮನವಿ ಮಾಡಿದರು.
‘ಕಾವೇರಿ 2.0’ ತಂತ್ರಾಂಶದ ಸೇವೆ ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಲಭ್ಯ
ಬೆಂಗಳೂರು (ಮಾ.03): ನೋಂದಣಿ ವ್ಯವಸ್ಥೆಯಲ್ಲಿ ಮಧ್ಯವರ್ತಿ ಹಾವಳಿ, ವಂಚನೆ ತಡೆದು ಜನಸ್ನೇಹಿ ಸೇವೆ ನೀಡುವ ಉದ್ದೇಶದಿಂದ ಅಭಿವೃದ್ಧಿ ಪಡಿಸಿದ ‘ಕಾವೇರಿ 2.0’ ತಂತ್ರಾಂಶದ ಸೇವೆ ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಲಭ್ಯವಾಗಲಿದೆ. ಶೀಘ್ರದಲ್ಲಿ ದೊಡ್ಡಬಳ್ಳಾಪುರದಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸೇವೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಅಭಿವೃದ್ಧಿ ಪಡಿಸಿದ ನೂತನ ತಂತ್ರಾಂಶದಿಂದ ಸೇವೆಗಳು ಸುಲಭವಾಗಲಿವೆ. ನಕಲಿ ದಾಖಲೆಗಳನ್ನು ನೀಡಿ ನೋಂದಣಿ ಮಾಡುವ ಪ್ರಕ್ರಿಯೆಗೆ ಕಡಿವಾಣ ಬೀಳಲಿದೆ, ಕಚೇರಿಗೆ ಬಂದು ದಿನವಿಡಿ ಕಾಯುವುದು ತಪ್ಪಲಿವೆ. ಮನೆಯಲ್ಲಿ ಕುಳಿತು ಸಂಬಂಧ ಪಟ್ಟದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಕೆ ಮಾಡಿ, ನಿಗದಿಪಡಿಸಿದ ದಿನದಂದು ಕಚೇರಿಗೆ ಬಂದು ಭಾವಚಿತ್ರ, ಹೆಬ್ಬೆಟ್ಟಿನ ಗುರುತು ನೀಡಿದ ನಂತರ ನೋಂದಣಿ ಮಾಡಲಾಗುವುದು. ಈ ಪ್ರಕ್ರಿಯೆ 10 ನಿಮಿಷಗಳಲ್ಲಿ ಮುಗಿಯಲಿದೆ ಎಂದು ವಿವರಿಸಿದರು.
ಮಠಾಧೀಶರು ರಾಜಕೀಯಕ್ಕೆ ಬರುವುದು ಅವರ ವೈಯಕ್ತಿಕ: ಸಚಿವ ಅಶೋಕ್
ತಾವು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಮನೆ ಬಾಗಿಲಿಗೆ ಖಾತೆ ನೀಡುವುದು, ಪೋಡಿ ಮಾಡುವುದು, ಕಾಫಿ ಬೆಳೆಗಾರರಿಗೆ ಕಂದಾಯ ಭೂಮಿ ಬಾಡಿಗೆ ನೀಡುವುದು ಸೇರಿದಂತೆ ಸಾಕಷ್ಟುಕೆಲಸ ಮಾಡಲಾಗಿದೆ. ನೋಂದಣಿಗೆ ಸಂಬಂಧಪಟ್ಟಂತೆ ಹಿಂದೆ ಡಿಡಿ, ಚಲನ್‌ಗಳ ಹಗರಣ ನಡೆದಿತ್ತು. ಯಾರದ್ದೋ ಹೆಸರಿಗೆ ಡಿಡಿ ಹೋಗುತ್ತಿತ್ತು. ಕಚೇರಿಯಲ್ಲಿ ಸದಾ ಜನರಿಂದ ಕೂಡಿರುತ್ತಿತ್ತು. ಹೊಸ ತಂತ್ರಾಂಶದಿಂದ ಈಗ ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವರು ಹೇಳಿದರು.