ಚಿತ್ರದುರ್ಗ: ಚಳ್ಳಕೆರೆ ಬಳಿ ಕಾರು ಪಲ್ಟಿ, ನಾಡೋಜ ಬೆಳಗಲ್ಲು ವೀರಣ್ಣ ಸಾವು

Published : Apr 02, 2023, 10:00 AM ISTUpdated : Apr 02, 2023, 12:13 PM IST
ಚಿತ್ರದುರ್ಗ: ಚಳ್ಳಕೆರೆ ಬಳಿ ಕಾರು ಪಲ್ಟಿ, ನಾಡೋಜ ಬೆಳಗಲ್ಲು ವೀರಣ್ಣ ಸಾವು

ಸಾರಾಂಶ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ನಡೆದ ಘಟನೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಚಿತ್ರದುರ್ಗ(ಏ.02):  ತೊಗಲು ಗೊಂಬೆಯಾಟದ ಮೂಲಕ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಕಲಾವಿದ ಹಾಗೂ ವಿಧಾನಸಭಾ ಚುನಾವಣೆಯ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್‌ ರಾಯಭಾರಿಯಾಗಿದ್ದ ನಾಡೋಜ ಬೆಳಗಲ್ಲು ವೀರಣ್ಣ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಭಾನುವಾರ ಬೆಳಗ್ಗೆ ಚೆಳ್ಳಕೇರಿಯಿಂದ ಚಿಕ್ಕಮಗಳೂರಿಗೆ ಪುತ್ರನೊಂದಿಗೆ ಕಾರ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ವಾಹನ ನಿಯಂತ್ರಣಕ್ಕೆ ಸಿಗದೇ ಪಲ್ಟಿಯಾಗಿ ಸ್ಥಳದಲ್ಲಿಯೇ ಹಿರಿಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ(91) ಮೃತಪಟ್ಟಿದ್ದಾರೆ. ಪುತ್ರ ತೀವ್ರಗಾಯಗೊಂಡಿದ್ದಾರೆ.

10 ದಿನದ ಹಿಂದೆ ಮದುವೆಯಾಗಿದ್ದ ನವಜೋಡಿ ಸಾವು: ಮನೆ ದೇವರಿಗೆ ಹೋದವರು ಮರಳಿ ಬರಲೇ ಇಲ್ಲ

ಬೆಳಗಲ್ಲು ವೀರಣ್ಣನವರ ಪರಿಚಯ:

1936ರ ಜುಲೈ 6ರಂದು ಸಿಳ್ಳೇಕ್ಯಾತ ಜನಾಂಗದ ಹನುಮಂತಪ್ಪ ಹಾಗೂ ವೀರಮ್ಮ ದಂಪತಿಯ ಪುತ್ರನಾಗಿ ಜನಿಸಿರುವ ಬೆಳಗಲ್ಲು ವೀರಣ್ಣ ಅವರು ತಂದೆಯ ಹಾದಿಯಲ್ಲಿ ರಂಗಭೂಮಿಯನ್ನು ಪ್ರವೇಶಿಸಿದ್ದರು. ವೀರಣ್ಣನವರು ಹಲವು ನಾಟಕ ಕಂಪನಿಗಳಲ್ಲಿನಟರಾಗಿ ಗಾಯಕರಾಗಿ, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಬಾಲ ನಟರಾಗಿ, ಸ್ತ್ರೀ ಪಾತ್ರಧಾರಿಯಾಗಿ, ಖಳನಾಯಕರಾಗಿ, ಹಾಸ್ಯನಟರಾಗಿ ನೂರಾರು ಪಾತ್ರಗಳಲ್ಲಿಎಲ್ಲಾಬಗೆಯ ಪಾತ್ರಗಳನ್ನು ನಿರ್ವಹಿಸಿ ಗಮನಸೆಳೆದಿದ್ದಾರೆ. ಅವರು ನಿರ್ವಹಿಸಿದ ರಕ್ತರಾತ್ರಿ ನಾಟಕದ ಶಕುನಿ ಪಾತ್ರ ಅವರಿಗೆ ಅಪಾರ ಯಶಸ್ಸು ತಂದುಕೊಟ್ಟಿತ್ತು. 

ಬಳಿಕ ಅವರು ಮತ್ತೊಂದು ಹೆಜ್ಜೆ ಇಟ್ಟಿದ್ದು ತೊಗಲುಗೊಂಬೆಯಾಟದತ್ತ. ಸ್ವಿಟ್ಜರ್‌ಲ್ಯಾಂಡ್‌, ಜರ್ಮನಿ, ಇಂಡೊನೇಶ್ಯಯಾದಲ್ಲಿ ಸೀತಾ ಅಪಹರಣ ಕುರಿತು, ಬರ್ಮಾದಲ್ಲಿ 9 ದೇಶದ ಕಲಾತಂಡಗಳೊಂದಿಗೆ ಭಾರತ ದೇಶವನ್ನು ಪ್ರತಿನಿಧಿಸಿ ಬಾಪು ತೊಗಲು ಗೊಂಬೆಯಾಟವನ್ನು ಪ್ರದರ್ಶಿಸುವ ಮೂಲಕ ಗಮನಸೆಳೆದಿದ್ದರು.

PREV
Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್