ಶಕ್ತಿ ಯೋಜನೆಯ ಪರಿಣಾಮ; ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.40 ರಿಂದ 60ಕ್ಕೆ ಹೆಚ್ಚಳ!

By Kannadaprabha News  |  First Published Jun 17, 2023, 9:15 AM IST

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಶಕ್ತಿ ಯೋಜನೆ’ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ. ಯೋಜನೆಯಡಿ ಉಚಿತ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಯೋಜನೆ ಜಾರಿಗಿಂತ ಮುಂಚೆ ಶೇ. 40ರಷ್ಟಿದ್ದ ಮಹಿಳಾ ಪ್ರಯಾಣಿಕರ ಸಂಖ್ಯೆ ಇದೀಗ ಶೇ. 60ಕ್ಕೂ ಹೆಚ್ಚಾಗಿದೆ.


ಶಿವಾನಂದ ಗೊಂಬಿ

ಹುಬ್ಬಳ್ಳಿ (ಜೂ.17) ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಶಕ್ತಿ ಯೋಜನೆ’ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ. ಯೋಜನೆಯಡಿ ಉಚಿತ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಯೋಜನೆ ಜಾರಿಗಿಂತ ಮುಂಚೆ ಶೇ. 40ರಷ್ಟಿದ್ದ ಮಹಿಳಾ ಪ್ರಯಾಣಿಕರ ಸಂಖ್ಯೆ ಇದೀಗ ಶೇ. 60ಕ್ಕೂ ಹೆಚ್ಚಾಗಿದೆ.

Tap to resize

Latest Videos

ಬೆಳಗಾವಿ, ಚಿಕ್ಕೋಡಿ, ಶಿರಸಿ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ಹುಬ್ಬಳ್ಳಿ ಗ್ರಾಮಾಂತರ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ಹೀಗೆ ಆರು ಜಿಲ್ಲೆಗಳ 9 ಘಟಕಗಳನ್ನು ಹೊಂದಿರುವ ದೊಡ್ಡ ಘಟಕವಿದು. ಇಲ್ಲಿ 23500 ಜನ ನೌಕರರಿದ್ದಾರೆ. ಬರೋಬ್ಬರಿ 4505 ಬಸ್‌ಗಳು ಪ್ರತಿದಿನ ರಸ್ತೆಗಿಳಿಯುತ್ತವೆ.

'ಶಕ್ತಿ ಯೋಜನೆ ಸ್ಮಾರ್ಟ್‌ ಕಾರ್ಡ್‌' ಪಡೆದ ಮೊದಲ ಮಹಿಳೆ ಇವರೇ! ಉಚಿತ ಪ್ರಯಾಣವನ್ನೂ ಮಾಡಿದ್ರು

ಪ್ರಯಾಣಿಕರ ಸಂಖ್ಯೆ:

ಮೊದಲು ಅಂದರೆ ಶಕ್ತಿ ಯೋಜನೆ ಪ್ರಾರಂಭವಾಗುವ ಮುನ್ನ ಬರೋಬ್ಬರಿ 16 ರಿಂದ 17 ಲಕ್ಷಕ್ಕೂ ಅಧಿಕ ಜನರು ಪ್ರಯಾಣ ಮಾಡುತ್ತಿದ್ದರು. ಇದು ಕೆಲವೊಮ್ಮೆ 18 ಲಕ್ಷವರೆಗೂ ಹೋಗಿದ್ದುಂಟು. ಇದರಲ್ಲಿ ಶೇ.40-45ರಷ್ಟುಜನ ಮಹಿಳಾ ಪ್ರಯಾಣಿಕರು ಇರುತ್ತಿದ್ದರು. ಅಂದರೆ 7- 7.5 ಲಕ್ಷ ಜನ ಮಹಿಳಾ ಪ್ರಯಾಣಿಕರು ಇರುತ್ತಿದ್ದರು. ಉಳಿದ 10-11 ಲಕ್ಷ ಜನ ಪುರುಷರು ಪ್ರಯಾಣಿಸುತ್ತಿದ್ದರು.

ಆದರೆ, ಇದೀಗ ಶಕ್ತಿ ಯೋಜನೆಗೆ ಚಾಲನೆ ನೀಡಿದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪ್ರತಿದಿನ ಬಸ್‌ಗಳಲ್ಲಿ ಕುಳಿತುಕೊಳ್ಳಲು ಆಸನವೇ ಇಲ್ಲದಷ್ಟುಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಪ್ರತಿ ಬಸ್‌ಗಳು ತುಂಬಿ ತುಳುಕುತ್ತಿವೆ. ಪುರುಷರಿಗೆ ನಿಂತು ಪ್ರಯಾಣಿಸುವುದು ಅನಿವಾರ್ಯವಾಗಿದೆ.

ಎಷ್ಟೆಷ್ಟುಪ್ರಯಾಣ?

ಯೋಜನೆ ಜಾರಿಯಾದ ಜೂ. 11ರಂದು ಮಾತ್ರ ಮಹಿಳಾ ಪ್ರಯಾಣಿಕರ ಸಂಖ್ಯೆ ಕೊಂಚ ಕಡಿಮೆ ಇತ್ತು. ಆದರೂ ಅವತ್ತು ಮಧ್ಯಾಹ್ನ 1ರಿಂದ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ಅಂದು ರಾತ್ರಿ 12ರವರೆಗೆ ಅಂದರೆ 11 ಗಂಟೆಯಲ್ಲಿ ಬರೋಬ್ಬರಿ 1.22 ಲಕ್ಷ (ಟಿಕೆಟ್‌ ಮೌಲ್ಯ36.17 ಲಕ್ಷ) ಮಹಿಳೆಯರು ಪ್ರಯಾಣಿಸಿದ್ದರು. .36.17 ಲಕ್ಷ ರೂ. ಮೌಲ್ಯದ ಬಳಿಕ ಜೂ. 12ರ ಲೆಕ್ಕ ನೋಡಿದರೆ ಬರೋಬ್ಬರಿ 8.31 ಲಕ್ಷ ಪ್ರಯಾಣಿಸಿದ್ದಾರೆ. ಇವರ ಟಿಕೆಟ್‌ ಮೌಲ್ಯ ಬರೋಬ್ಬರಿ .2.10 ಕೋಟಿ. ಇನ್ನು 13ರಂದು 11.09 ಲಕ್ಷ ಪ್ರಯಾಣಿಕರು (ಟಿಕೆಟ್‌ ಮೌಲ್ಯ- .2.72 ಕೋಟಿ), ಜೂ. 14ರಂದು 12.72 ಲಕ್ಷ ಮಹಿಳೆಯರು (ಟಿಕೆಟ್‌ ಮೌಲ್ಯ - .3.02 ಕೋಟಿ), ಜೂ. 14ರ ಮಧ್ಯರಾತ್ರಿ 12ರಿಂದ ಜೂ.15ರ ಮಧ್ಯರಾತ್ರಿ 12ರ ವರೆಗೆ 13.18 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಇವರ ಪ್ರಯಾಣಿಸಿದ ಟಿಕೆಟ್‌ ಮೌಲ್ಯ .3.21 ಕೋಟಿ ಆಗಿದೆ ಎಂದು ವಾಯವ್ಯ ಸಾರಿಗೆ ಮೂಲಗಳು ತಿಳಿಸಿವೆ. ಹಾಗಂತ ಪುರುಷ ಪ್ರಯಾಣಿಕರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಅವರ ಪ್ರಮಾಣ ಅಷ್ಟೇ ಇದೆ. ಈಗಲೂ 10-11 ಲಕ್ಷ ಪುರುಷರು ನಿಗಮದ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿದ್ದಾರೆ.

ಹಣ ನೀಡಿ:

ಸದ್ಯಕ್ಕೆ ಮಹಿಳೆಯರಿಗೆ ‘ಶೂನ್ಯ ಟಿಕೆಟ್‌’ ನೀಡುವುದರಿಂದ ನಿಗಮಕ್ಕೆ ಸಮಸ್ಯೆಯಾಗುತ್ತದೆ. ಆದಕಾರಣ ಸರ್ಕಾರ ವಿದ್ಯಾರ್ಥಿಗಳ ಬಸ್‌ ಪಾಸ್‌ ಸೇರಿದಂತೆ ಇತರೆ ಸೌಲಭ್ಯಗಳ ಹಣ ಬಿಡುಗಡೆಗೆ ಪ್ರತಿ ಸಲ ಸತಾಯಿಸುತ್ತಲೇ ಬರುತ್ತದೆ. ಅದೇ ರೀತಿ ಮಹಿಳಾ ಪ್ರಯಾಣಿಕರ ಬಸ್‌ ಶುಲ್ಕ ಬಿಡುಗಡೆಗೂ ಸತಾಯಿಸಬಾರದು. 3-4 ತಿಂಗಳಿಗೊಮ್ಮೆ ಬಿಡುಗಡೆ ಮಾಡಿದರೆ ನಿಗಮಗಳನ್ನು ನಡೆಸುವುದೇ ಕಷ್ಟವಾಗುತ್ತದೆ. ಆದಕಾರಣ ಮಹಿಳಾ ಪ್ರಯಾಣಿಕರ ಸಂಖ್ಯೆಗಳಿಗುಣವಾಗಿ ಖರ್ಚಾಗಿರುವುದನ್ನು ಆಯಾ ತಿಂಗಳೇ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ನಾವು ಸಂಬಳ ಪಡೆಯವುದಕ್ಕೂ ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಮಾತು ನೌಕರ ವರ್ಗದ್ದು.

ಪುರುಷರಿಗೆ ಸೀಟು ಮೀಸಲು:

ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ಪುರುಷರು ಆಸನ ಸಿಗದೇ ನಿಂತುಕೊಂಡೇ ಪ್ರಯಾಣಿಸಬೇಕಿದೆ. ಆದಕಾರಣ ಎಲ್ಲ ಬಸ್‌ಗಳಲ್ಲಿ ಕಡ್ಡಾಯವಾಗಿ ಶೇ. 50ರಷ್ಟುಸೀಟುಗಳನ್ನು ಪುರುಷರಿಗಾಗಿ ಮೀಸಲಿಡಬೇಕು. ಅಲ್ಲಿ ಮಹಿಳೆಯರು ಕುಳಿತುಕೊಂಡರೆ ಪುರುಷರು ಬಂದಾಗ ಎದ್ದು ನಿಂತು ಸೀಟು ಬಿಟ್ಟು ಕೊಡಬೇಕು ಎಂಬ ಒತ್ತಾಯ ಇದೀಗ ಪುರುಷ ಪ್ರಯಾಣಿಕರಿಂದ ಕೇಳಿ ಬರುತ್ತಿದೆ.

ಕರ್ನಾಟಕದ 'ಶಕ್ತಿ ಯೋಜನೆ' ಅಧಿಕೃತ ಆರಂಭ: ಮಹಿಳೆಯರಿಗೆ ಬಸ್‌ನಲ್ಲಿ ಫ್ರೀ ಟಿಕೆಟ್‌ ಶುರು

ಶಕ್ತಿ ಯೋಜನೆ ಜಾರಿಯಾದ ಮೇಲೆ ಮಹಿಳಾ ಪ್ರಯಾಣಿಕರ ಪ್ರಮಾಣ ಶೇ. 40ರಿಂದ ಶೇ.60- 65ಕ್ಕೇರಿದೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುತ್ತಿದ್ದಾರೆ.

- ಎಚ್‌.ಎನ್‌.ರಾಮನಗೌಡರ, ಸಾರ್ವಜನಿಕ ಸಂಪರ್ಕ ಅಧಿಕಾರಿ, ವಾಯವ್ಯ ಸಾರಿಗೆ

click me!