ಕೊರೋನಾ ಸೋಂಕಿತ ಕುಟುಂಬಗಳಿಗೆ ರೋಗ ನಿರೋಧಕ ಶಕ್ತಿವರ್ಧಕ ಪಾನೀಯ

By Kannadaprabha NewsFirst Published Sep 24, 2020, 12:04 PM IST
Highlights

ಕೊರೋನಾ ಮಹಾಮಾರಿಯಿಂದ ದೇಶದಲ್ಲಿ ಲಕ್ಷಾಂತರ ಜನರು ಬಳಲುತ್ತಿದ್ದು, ಸಾವಿರಾರು ಜನರನ್ನು ಬಲಿ ಪಡೆದಿದೆ. ಇದೀಗ ಕೊರೋನಾ ಪೀಡಿತ ಕುಟುಂಬಗಳಿಗೆ ಶಕ್ತಿವರ್ಧಕ ಪಾನೀಯ ನೀಡಲಾಗುತ್ತಿದೆ. 

ಕೊರಟಗೆರೆ(ಸೆ.24):  ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ, ಇಸ್ಫೋಸಿಸ್‌ ಫೌಂಡೇಷನ್‌ ಮತ್ತು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ಸಂಯುಕ್ತಾಶ್ರಯದಲ್ಲಿ ಕೊರಟಗೆರೆ ತಾಲೂಕಿನ ಬಿಸಿ ಊಟ ತಯಾರಿಸುವ ಅಡುಗೆ ಸಿಬ್ಬಂದಿಗೆ ಕೊರೋನಾ ವೈರಸ್‌ ನಿಯಂತ್ರಣ ಯೋಜನೆಯಡಿಯಲ್ಲಿ ತಾಲೂಕು ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ಬಿಸಿಊಟ ತಯಾರಿಸುವ 496 ಸಿಬ್ಬಂದಿ ವರ್ಗದವರಿಗೆ ದವಸ ಧಾನ್ಯದ ಕಿಟ್‌ ವಿತರಣಾ ಉದ್ಘಾಟನಾ ಕಾರ್ಯಕ್ರಮವನ್ನು ಪಟ್ಟಣದ ಗುರುಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಮಹರಾಜ್‌ ಸಾನಿಧ್ಯ ವಹಿಸಿ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾವಗಡ ತಾಲೂಕಿನ 600 ಮಂದಿ, ಮಧುಗಿರಿ ತಾಲೂಕಿನ 712 ಮಂದಿ ಅಕ್ಷರ ದಾಸೋಹ ಸಿಬ್ಬಂದಿಗೆ ದವಸ ಧಾನ್ಯದ ಕಿಟ್‌ಗಳನ್ನು ವಿತರಿಸಿದ್ದು, ಮತ್ತು ಕಳೆದ ಮಾಚ್‌ರ್‍ ತಿಂಗಳಿಂದ ಕೋವಿಡ್‌-19 ನಿಯಂತ್ರಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವುದನ್ನು ಮತ್ತು ಸಮಾಜದ ದುರ್ಬಲ ಹಾಗೂ ದೀನ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸೇವಾಶ್ರಮದ ವತಿಯಿಂದ ದವಸ ಧಾನ್ಯದ ಕಿಟ್‌ ವಿತರಿಸಿರುವುದಾಗಿ ತಿಳಿಸಿದರು. ಇದುವರೆಗೆ ಸುಮಾರು 20000ಕ್ಕೂ ಅ​ಧಿಕ ಮಂದಿ ಇಂತಹ ಪ್ರಯೋಜನವನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ವಿಧಾನಸೌಧ​ದಲ್ಲಿ ಕೊರೋನಾ ಪರೀಕ್ಷೆ: 110 ಮಂದಿಗೆ ಪಾಸಿಟಿವ್‌! ...

ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನ ಅ​ಧಿಕಾರಿಗಳಿಗೆ ಮತ್ತು ಟ್ರಸ್ಟಿಗಳಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಹಾಗೂ ಅವರ ಕುಟುಂಬ ವರ್ಗದವರಿಗೆ ಶಕ್ತಿವರ್ಧಕ ಪಾನೀಯಗಳನ್ನು ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ತಾಲೂಕಿಗೆ ವಿತರಣೆ ಮಾಡಿದರು.

ಕೊರಟಗೆರೆ ತಾಲೂಕಿನ ಕೊರೋನಾ ಸೋಂಕಿತ ಮತ್ತು ಅವರ ಕುಟುಂಬಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುವ 35000 ಪಾನೀಯ ಪ್ಯಾಕೇಟ್‌ (5 ಟನ್‌), ಮಧುಗಿರಿ ಟನ್‌ 35000 ಪಾನೀಯ ಪೌಚುಗಳು (5 ಟನ್‌) ಹಾಗೂ ಪಾವಗಡ ತಾಲೂಕಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸುಮಾರು ಒಂದು ಲಕ್ಷಕ್ಕೂ ಮಿಗಿಲಾದ ಪಾನೀಯಗಳ ಪೌಚುಗಳನ್ನು ವಿತರಿಸಿದರು.

ನಿಯಂತ್ರಣಕ್ಕೆ ಬಂದಿಲ್ಲ ಕೊರೋನಾ; ಟಫ್‌ ರೂಲ್ಸ್‌ ಜಾರಿಗೆ ಮುಂದಾಗ್ತಾರಾ ಮೋದಿ?

ಡಿಡಿಪಿಐ ರೇವಣಸಿದ್ದಪ್ಪ, ಕ್ಷೇತ್ರ ಶಿಕ್ಷಣಾ​ಧಿಕಾರಿ ಎನ್‌.ಎಸ್‌. ಸುಧಾಕರ್‌ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್‌.ಎಂ ರುದ್ರೇಶ್‌ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕೊರಟಗೆರೆ ತಾಪಂ. ಇಒ ಶಿವಪ್ರಕಾಶ್‌, ಕ್ಷೇತ್ರ ಶಿಕ್ಷಣಾ​ಧಿಕಾರಿ ಎನ್‌.ಎಸ್‌. ಸುಧಾಕರ್‌, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿ​ಕಾರಿ ಸುರೇಂದ್ರನಾಥ್‌, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಆರ್‌.ರಘು, ರಕ್ತದಾನಿ ಶಿಕ್ಷಕರ ಸ್ನೇಹ ಬಳಗದ ವೆಂಕಟೇಶಯ್ಯ ಮತ್ತು ಶಶಿಕುಮಾರ್‌, ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷ ಎಲ್‌ ಕಾಮಯ್ಯ, ಮುಖ್ಯ ಶಿಕ್ಷಕ ಹೆಚ್‌ ಹನುಮಂತರಾಯಪ್ಪ ಸೇರಿದಂತೆ ಶಿಕ್ಷಣ ಕ್ಷೇತ್ರದ ವಲಯದ ಅ​ಧಿಕಾರಿಗಳು ಭಾಗವಹಿಸಿದ್ದರು.

click me!