Mysuru ನಾನು ಯಾವ ತ್ಯಾಗಕ್ಕೂ ಸಿದ್ಧ : ಪ್ರತಾಪ್ ಸಿಂಹ

By Kannadaprabha NewsFirst Published Oct 9, 2021, 1:57 PM IST
Highlights
  • ರೈತರ ಅಭಿವೃದ್ಧಿಗೆ ಯಾವ ತ್ಯಾಗಕ್ಕೂ ಸಿದ್ಧನಾಗಿದ್ದೇನೆ
  • ಅವರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ 

 ಬೆಟ್ಟದಪುರ (ಅ.09):  ರೈತರ (Farmers) ಅಭಿವೃದ್ಧಿಗೆ ಯಾವ ತ್ಯಾಗಕ್ಕೂ ಸಿದ್ಧನಾಗಿದ್ದೇನೆ, ಅವರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ಹೇಳಿದರು.

ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪಶು ಆಸ್ಪತ್ರೆಯನ್ನು ಉದ್ಘಾಟಿಸಿ ಅವರ ಮಾತನಾಡಿದರು.

ರೈತರ ಏಳಿಗೆಗೆ ಸದಾ ದುಡಿಯಲು ಕೇಂದ್ರ ಸರ್ಕಾರದ (Central Govt) ವಿವಿಧ ಯೋಜನೆಗಳಲ್ಲಿ ಧನಸಹಾಯಗಳನ್ನು ತಂದು ಪಶು ಆಸ್ಪತ್ರೆ, ರೈತರಿಗೆ ವಿಮೆ (Insurance) ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುವುದು, ಅಲ್ಲದೆ ರೈತರು ಬೆಳೆದಿರುವ ಎಲ್ಲ ಬೆಲೆಗಳು ಕುಸಿತ ಕಂಡಿರುವುದರಿಂದ ಕೇಂದ್ರ ಸರ್ಕಾರ ಈ ಕೂಡಲೇ ರೈತರ ನೆರವಿಗೆ ಬರಬೇಕಾದ ಎಲ್ಲ ಅನುದಾನಗಳನ್ನು ತರುವುದಾಗಿ ಅವರು ತಿಳಿಸಿದರು.

ದಸರಾ ಉದ್ಘಾಟನೆ: ಸಂಪ್ರದಾಯ ಮುರಿದು ಎಸ್‌. ಎಂ ಕೃಷ್ಣರನ್ನೇಕೆ ಕರೆದಿದ್ದು ಬೊಮ್ಮಾಯಿ?!

ಶಾಸಕ ಕೆ. ಮಹದೇವ್‌ ಮಾತನಾಡಿ, ಜಾನುವಾರುಗಳಿಗೆ ಹೆಚ್ಚಿನ ರೀತಿಯಲ್ಲಿ ಸೌಲಭ್ಯಗಳು ಸಿಗಬೇಕು, ಖಾಸಗಿಯಾಗಿ ಪಶುಗಳನ್ನು ತೋರಿಸುವುದರಿಂದ ಅವರಿಗೆ ಹೆಚ್ಚಿನ ಹೊರೆ ಬೀಳುತ್ತದೆ, ತಕ್ಷಣವೇ ರಾಜ್ಯ ಸರ್ಕಾರದ ಗಮನ ಸೆಳೆದು ಪ್ರತಿ ಆಸ್ಪತ್ರೆಗೆ ಎಲ್ಲ ರೀತಿಯ ಔಷಧಿಗಳನ್ನು ದಾಸ್ತಾನು ಮಾಡಿ ಗುಣಮಟ್ಟದ ಚಿಕಿತ್ಸೆ ನೀಡುವಂತೆ ನೋಡಿಕೊಳ್ಳಲಾಗುವುದು ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿರುವ ಎಲ್ಲ ಪಶು ಆಸ್ಪತ್ರೆಗಳಿಗೆ ವೈದ್ಯರನ್ನು ಶೀಘ್ರದಲ್ಲೇ ನೇಮಿಸುವಂತೆ ಸಂಸದರು ಮತ್ತು ನಾನು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ತಹಸೀಲ್ದಾರ್ ವರ್ಗಾವಣೆ ವಿಚಾರ : ಶಾಸಕ ಹರ್ಷವರ್ಧನ್‌ಗೆ ಸಿಂಹ ತಿರುಗೇಟು

ತಾಲೂಕು ಜೆಡಿಎಸ್‌ (JDS) ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ರಾಜ್ಯ ಒಳಚರಂಡಿ ಮಂಡಳಿ ನಿರ್ದೇಶಕ ಆರ್‌.ಟಿ. ಸತೀಶ್‌, ಇಒ ಕೃಷ್ಣಕುಮಾರ್‌, ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಸೌಮ್ಯ, ಸದಸ್ಯರಾದ ರಾಜಶೇಖರ್‌, ಗಿರಿಗೌಡ, ವಿದ್ಯಾಶಂಕರ, ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಗೌಡ, ಮುಖಂಡರಾದ ಕೌಲನಹಳ್ಳಿ ಸೋಮಶೇಖರ್‌, ಬೆಮ್ಮತ್ತಿ ಚಂದ್ರು, ಪಿರಿಯಾಪಟ್ಟಣ ಪುರಸಭಾ ಸದಸ್ಯರಾದ ಶಿವರಾಮ, ಬೆಟ್ಟದಪುರ ಬಿಜೆಪಿ ಮುಖಂಡ ಎಸ್‌. ಮಲ್ಲೇಶ್‌, ಅರುಣ್ ರಾಜ್ ಅರಸ್‌, ಪ್ರವೀಣ್ ಕುಮಾರ್‌, ಸುಂದರ್‌, ಯೋಗೇಶ ಇದ್ದರು.

click me!