Koppal| ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ: ಹಾಲಪ್ಪ ಆಚಾರ್‌

Kannadaprabha News   | Asianet News
Published : Oct 09, 2021, 01:41 PM IST
Koppal| ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ: ಹಾಲಪ್ಪ ಆಚಾರ್‌

ಸಾರಾಂಶ

*  ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಚಿವ ಹಾಲಪ್ಪ ಆಚಾರ್‌ ಚಾಲನೆ *  ಜನಪರ ಆಡಳಿತ ನೀಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ  *  ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯುತ್ತಿರುವ ಪ್ರಧಾನಿ ಮೋದಿ 

ಯಲಬುರ್ಗಾ(ಅ.09):  ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಕೃಷಿ ಕಾಯ್ದೆಗಳಿಗೆ(Agricultural Act) ತಿದ್ದುಪಡೆ ತಂದು ರೈತರು ಬೆಳೆದ ಬೆಳೆಗಳಿಗೆ ಮುಕ್ತ ಮಾರಾಟಕ್ಕೆ ಅನುಕೂಲ ಕಲ್ಪಿಸಿರುವುದನ್ನು ಕಾಂಗ್ರೆಸ್‌(Congress) ಸಹಿಸದೆ ರೈತರನ್ನು ಪ್ರಚೋಧಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ಹೇಳಿದ್ದಾರೆ. 

ತಾಲೂಕಿನ ಚಿಕ್ಕೋಪ್ಪ ತಾಂಡಾ, ಚಿಕ್ಕೋಪ್ಪ, ಹೊಸಳ್ಳಿ ಗ್ರಾಮಗಳಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಜನಪರ ಆಡಳಿತ ನೀಡುತ್ತಿದ್ದಾರೆ. ಈ ದೇಶವನ್ನು ಕಾಂಗ್ರೆಸ್‌ ಪಕ್ಷ 60 ವರ್ಷಗಳ ಆಳ್ವಿಕೆ ನಡೆಸಿದರೂ ದೇಶವನ್ನು ಎಂದೂ ಅಭಿವೃದ್ಧಿ ಪಡಸಲು ಆಸಕ್ತಿ ತೋರಲಿಲ್ಲ. ಆದರೆ, ಮೋದಿ ಅವರು 7 ವರ್ಷಗಳಲ್ಲಿ ಯಾವುದೇ ಒಂದು ಭ್ರಷ್ಟಾಚಾರದ(Corruption) ಕಪ್ಪುಚುಕ್ಕೆ ಇಲ್ಲದೆ ಸುಭದ್ರ ಆಡಳಿತ ನೀಡುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯುತ್ತಿರುವುದನ್ನು ಇಡೀ ವಿಶ್ವವೇ ಮೆಚ್ಚಿ ಕೊಂಡಾಡುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್‌ನವರಿಗೆ ರಾತ್ರಿ ನಿದ್ದೆ ಬರುತ್ತಿಲ್ಲ ಇವರ ಕನಸಿನಲ್ಲೂ ಮೋದಿಯವರೇ ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

'ಬಿಜೆಪಿ ಪಕ್ಷದ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್‌ ಸೇರ್ಪಡೆ'

ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕನಾಗಿ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಿದ್ದೀರಿ ಅದಕ್ಕೆ ಚ್ಯುತಿ ಬರದಂತೆ ನಿಮ್ಮ ಋುಣ ತೀರಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ನಾನು ಬೆಂಗಳೂರು(Bengaluru), ಧಾರವಾಡದಲ್ಲಿ(Dharwad) ಮನೆ ಕಟ್ಟಿಸಿಕೊಂಡಿಲ್ಲ. ಕ್ಷೇತ್ರದ ಜನರ ಮಧ್ಯೆ ಇದ್ದು ನಿಮ್ಮ ಸಮಸ್ಯೆಗಳನ್ನು ಆಲಿಸುವ ಸೇವಕನಾಗಿದ್ದೇನೆ. ಚುನಾವಣೆ(Election) ಬಂದಾಗ ಮಾತ್ರ ಕ್ಷೇತ್ರಕ್ಕೆ ಬಂದು ನೀರಾವರಿಯ(Irrigation) ನೆಪದಲ್ಲಿ ಎಲ್ಲವನ್ನೂ ನಾನೇ ಮಾಡಿದ್ದೇನೆ, ನನ್ನಂತೆ ಯಾರು ತಿಳಿದುಕೊಂಡಿಲ್ಲ, ನಾನೇ ಪಂಡಿತ ಎನ್ನುವ ರೀತಿಯಲ್ಲಿ ಜನರ ದಿಕ್ಕು ತಪ್ಪಿಸುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ನನಗೆ ಮಂತ್ರಿಯಾಗಿ ಕೆಲಸ ಮಾಡುವ ಭಾಗ್ಯ ದೊರಕಿದೆ ಎಂದರೆ ಅದು ಕ್ಷೇತ್ರದ ಜನತೆಯ ಪುಣ್ಯವೇ ಕಾರಣ ಎಂದರು.

ಈಗಾಗಲೇ 3 ವರ್ಷಗಳ ಅಧಿಕಾರವಧಿಯಲ್ಲಿ 2 ವರ್ಷ ಕೊರೋನಾ(Coronavirus) ಸಂಕಷ್ಟದಲ್ಲೇ ಕಳೆದುಹೋಯಿತು. ಅಲ್ಪ ಅವಧಿಯಲ್ಲಿ ಸರ್ಕಾರದಿಂದ(Government) ಸಾಕಷ್ಟು ಅನುದಾನ ತಂದು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಸಚಿವ ಹಾಲಪ್ಪ ಆಚಾರ್‌ ಅವರನ್ನು ಹೊಸಳ್ಳಿ ಗ್ರಾಮಸ್ಥರು ಹೂಮಾಲೆ ಹಾಕಿ, ಪಟಾಕಿ ಸಿಡಿಸಿ, ಮೆರವಣಿಗೆ ಮೂಲಕ ಗ್ರಾಮಕ್ಕೆ ಸ್ವಾಗತಿಸಿದರು. ತಹಸೀಲ್ದಾರ್‌ ಶ್ರೀಶೈಲ್‌ ತಳವಾರ, ಅಧಿಕಾರಿಗಳಾದ ಪಿ. ಹೇಮಂತರಾಜ್‌, ಬಿ. ಮೌನೇಶ, ಅನಿಲಕುಮಾರ ಪಾಟೀಲ, ಮಹಾದೇವಪ್ಪ, ಎಂ.ಎಸ್‌. ದ್ಯಾಮಣ್ಣನವರ್‌, ಗ್ರಾಪಂ ಅಧ್ಯಕ್ಷೆ ಶಾರದಾ ಕೊಡತಗೇರಿ, ಉಪಾಧ್ಯಕ್ಷೆ ರೇಣುಕಾ ತೊಗರಿ, ಬಿಜೆಪಿ ಮುಖಂಡರಾದ ಬಸವಲಿಂಗಪ್ಪ ಭೂತೆ, ಸಿ.ಎಚ್‌. ಪಾಟೀಲ್‌, ವೀರಣ್ಣ ಹುಬ್ಬಳ್ಳಿ, ರತನ್‌ ದೇಸಾಯಿ, ಎಸ್‌.ಎನ್‌. ಶ್ಯಾಗೋಟಿ, ಪ್ರಭುರಾಜ ಕಲಬುರಗಿ, ಬಸನಗೌಡ ತೊಂಡಿಹಾಳ, ಎಸ್‌. ನಾಗಲಾಪೂರಮಠ, ಮಾರುತಿ ಗಾವರಾಳ, ನೀಲನಗೌಡ ತೊಂಡಿಹಾಳ, ಪ್ರೇಮಾ ಪಾಟೀಲ, ಶಾಂತವ್ವ ವಡ್ಡರ, ಹನುಮಂತ ರಾಠೋಡ, ಬಾಪುಗೌಡ ಪಾಟೀಲ, ಸುರೇಶ ಹೊಸಳ್ಳಿ ಸೇರಿದಂತೆ ಮತ್ತಿತರರು ಇದ್ದರು.
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು