ಚುನಾವಣೆ ಸ್ಪರ್ಧೆ ಮಾಡ್ತಾರಾ ಜಿಟಿಡಿ ಪುತ್ರ : ಬೆಂಬಲಿತರ ಸ್ಪರ್ಧೆಗೆ ಯಾವ ಪಕ್ಷ ..?

By Kannadaprabha News  |  First Published Jul 18, 2021, 1:17 PM IST
  • ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ನಾನಾಗಲಿ ಅಥವಾ ನಮ್ಮ ತಂದೆಯಾಗಲೀ ಸ್ಪರ್ಧಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ
  • ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹಾಗೂ ರಾಜ್ಯ ಅಪೆಕ್ಸ್‌ ಬ್ಯಾಂಕಿನ ಉಪಾಧ್ಯಕ್ಷ ಜಿ.ಡಿ. ಹರೀಶ್‌ ಗೌಡ ಹೇಳಿಕೆ
  •  ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳ ಪಕ್ಷದ ಬಗ್ಗೆ ಚರ್ಚಿಸಿ ತೀರ್ಮಾನ

 ಸಾಲಿಗ್ರಾಮ (ಜು.18):  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ನಾನಾಗಲಿ ಅಥವಾ ನಮ್ಮ ತಂದೆಯಾಗಲೀ ಸ್ಪರ್ಧಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹಾಗೂ ರಾಜ್ಯ ಅಪೆಕ್ಸ್‌ ಬ್ಯಾಂಕಿನ ಉಪಾಧ್ಯಕ್ಷ ಜಿ.ಡಿ. ಹರೀಶ್‌ ಗೌಡ ಹೇಳಿದರು.

ಮಾಜಿ ಸಚಿವರಾದ ಜಿಟಿಡಿ, ಅಸ್ನೋಟಿಕರ್ ಜೆಡಿಎಸ್ ಬಿಡ್ತಾರಾ? ಸ್ಪಷ್ಟನೆ ಕೊಟ್ಟ ದೇವೇಗೌಡ

Latest Videos

undefined

ಸಾಲಿಗ್ರಾಮ ತಾಲೂಕಿನ ಹರದನಹಳ್ಳಿಯಲ್ಲಿ ಎಂಡಿಎ ಮಾಜಿ ಅಧ್ಯಕ್ಷ ಎಚ್‌.ಎನ್‌. ವಿಜಯ್‌ ಅವರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 2015ರಲ್ಲಿ ಹುಣಸೂರಿನಲ್ಲಿ ನಡೆದ ಸಭೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಜಿ.ಡಿ. ಹರೀಶ್‌ಗೌಡ ನಮ್ಮ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದಿದ್ದರು. ಆದರೆ ನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದ ಅದು ಸಾಧ್ಯವಾಗಲಿಲ್ಲ. ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಯಾವ ರೀತಿಯಲ್ಲಿ ಚುನಾವಣಾ ಅಖಾಡಕ್ಕೆ ಇಳಿಸಬೇಕು. ಪಕ್ಷೇತರರನ್ನಾಗಿ ನಿಲ್ಲಿಸಬೇಕಾ. ಕೇವಲ ನಮ್ಮ ಕ್ಷೇತ್ರದಲ್ಲಿ ನಿಲ್ಲಿಸಬೇಕಾ ಅಥವಾ ಇಡೀ ಜಿಲ್ಲೆಯಲ್ಲಿ ನಿಲ್ಲಿಸಬೇಕಾ ಎಂಬುದನ್ನು ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಜಿಟಿಡಿ ಪತ್ನಿ ಚುನಾವಣೆ ಸ್ಪರ್ಧೆ ಬಗ್ಗೆ ಜೋರಾದ ಚರ್ಚೆ

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಒಂದು ತಿಂಗಳ ಹಿಂದೆ ನಮ್ಮ ತಂದೆ ಜಿಟಿಡಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ, ರಾಜ್ಯದ ಎಲ್ಲಾ ಜೆಡಿಎಸ್‌ ಶಾಸಕರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು. ಆ ರೀತಿಯಲ್ಲಿ ಮುನ್ನಡೆಯೋಣ ನೀವು ಯಾವುದೇ ದುಡುಕಿನ ತೀರ್ಮಾನ ತೆಗೆದುಕೊಳ್ಳಬೇಡಿ ಎಂದಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಕ್ಷೇತ್ರದ ಜನರು. ಮುಖಂಡರು, ಹಿತೈಷಿಗಳು, ಅಭಿಮಾನಿಗಳು ಹಾಗೂ ಕಾರ್ಯಕರ್ತರುಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಎಚ್‌.ಎನ್‌. ವಿಜಯ್‌ ಅವರು ಎಂಡಿಎ ಅಧ್ಯಕ್ಷರಾಗಿ ಹಾಗೂ ಜಿಪಂ ಸದಸ್ಯರಾಗಿ ಉತ್ತಮ ಕೆಲಸ ಮಾಡುವ ಮೂಲಕ ಒಳ್ಳೆಯ ಹೆಸರುಗಳಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯವಾಗಿ ರಾಜ್ಯಮಟ್ಟದ ಸ್ಥಾನಮಾನಗಳು ವಿಜಯ್‌ ಅವರಿಗೆ ದೊರೆಯಲಿ ಎಂದು ಶುಭ ಹಾರೈಸುತ್ತೇನೆ ಎಂದರು

click me!