ಅವನು ರೌಡಿಶೀಟರ್ - ಇವನ ಹೆಂಡ್ತಿ ಜೊತೆ ಅಕ್ರಮ ಸಂಬಂಧ : ನೋಡಿ ನೋಡಿ ಕೊಂದೇ ಬಿಟ್ಟ

Suvarna News   | Asianet News
Published : Apr 11, 2021, 11:20 AM ISTUpdated : Apr 11, 2021, 11:25 AM IST
ಅವನು ರೌಡಿಶೀಟರ್  - ಇವನ ಹೆಂಡ್ತಿ ಜೊತೆ ಅಕ್ರಮ ಸಂಬಂಧ : ನೋಡಿ ನೋಡಿ ಕೊಂದೇ ಬಿಟ್ಟ

ಸಾರಾಂಶ

ತನ್ನ ಹೆಂಡ್ತಿ ಜೊತೆ ರೌಡಿಶೀಟರ್‌ ಅಕ್ರಮ ಸಂಬಂಧ ಇಟ್ಕೊಂಡಿದ್ದ. ಅದನ್ನ ನೋಡಿ ಸಹಿಸಿಕೊಳ್ಳಲಾಗದ ಗಂಡ ಆತನನ್ನು ಮನಬಂದಂತೆ ಕೊಚ್ಚಿ ಕಲ್ಲಿನಿಂದ ಚಚ್ಚಿ ಕೊಂದು ಹಾಕಿದ್ದಾನೆ.

ವಿಜಯಪುರ (ಏ.11): ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ರೌಡಿಶೀಟರ್  ಓರ್ವನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. 

ವಿಜಯಪುರ ಹೊರವಲಯದ ಇಟ್ಟಂಗಿಹಾಳ ರಸ್ತೆ ಬಳಿ ಜಮೀನಿನಲ್ಲಿ ಶನಿವಾರ ರಾತ್ರಿ  ವೇಳೆ ದಸ್ತಗೀರಸಾಬ ಮಮದಾಪುರ(45) ಎಂಬಾತನನ್ನು ಕೊಲೆ ಮಾಡಲಾಗಿದೆ. 

ಅಣ್ಣಪ್ಪಗೌಡ ಬಾಗಾಯತ ಹಾಗೂ  ಆತನ ಸಹಚರರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲಿನಿಂದ ಚಚ್ಚಿ ದಸ್ತಗೀರಸಾಬನನ್ನು ಕೊಲೆ ಮಾಡಿದ್ದಾರೆ.

ರೌಡಿನೇ ಬೇಕೆಂದು ಮದ್ವೆಯಾಗಿ ಪ್ರಿಯಕರನೊಂದಿಗೆ ಚಕ್ಕಂದ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸುಂದರಿ ..

ಅಣ್ಣಪ್ಪ ಗೌಡನ ಪತ್ನಿಯೊಂದಿಗೆ ದಸ್ತಗೀರಸಾಬ್ ಅನೈತಿಕ ಸಂಬಂಧ ಹೊಂದಿದ್ದ ಎಂಬ ಶಂಕೆಯ ಮೇರೆಗೆ ಕೊಲೆ ಮಾಡಲಾಗಿದೆ. 

ಕಳೆದ ಹದಿನೈದು ದಿನಗಳ‌ ಹಿಂದೆಯೂ ಸಹ ದಸ್ತಗೀರಸಾಬ್ ಕೊಲೆಗೆ ಯತ್ನ ನಡೆದಿತ್ತು. ಆದರೆ ಅಂದು ಕೊಲೆ ಯತ್ನ ಮಿಸ್ ಆಗಿದ್ದು ಇಂದು ಜಮೀನಲ್ಲೇ ಕೊಲೆ ಮಾಡಲಾಗಿದೆ. 

ಸ್ಥಳಕ್ಕೆ ಆದರ್ಶನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು,    ಕೊಲೆ ಪ್ರಕರಣ ಸಂಬಂಧ ಆರೋಪಿ ಅಣ್ಣಪ್ಪಗೌಡ ಬಾಗಾಯತನನ್ನು ಬಂಧಿಸಲಾಗಿದೆ.  

PREV
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!