ಲಾಕ್‌ಡೌನ್ ಟೈಮಲ್ಲಿ ಬೇರೊಬ್ಬನ ಸಂಗ : ಹೆಂಡತಿ ಅತ್ತೆ ಬಡಿದು ಕೊಂದ ಗಂಡ

Kannadaprabha News   | Asianet News
Published : Jun 16, 2021, 04:02 PM ISTUpdated : Jun 16, 2021, 04:39 PM IST
ಲಾಕ್‌ಡೌನ್ ಟೈಮಲ್ಲಿ ಬೇರೊಬ್ಬನ ಸಂಗ : ಹೆಂಡತಿ ಅತ್ತೆ ಬಡಿದು ಕೊಂದ ಗಂಡ

ಸಾರಾಂಶ

ತನ್ನ ಹೆಂಡತಿ ಸೇರಿದಂತೆ ಅತ್ತೆಯನ್ನು ಬಡಿದು ದಾರುಣ ಹತ್ಯೆ ಮಾಡಿದ  ಅಕ್ರಮ ಸಂಬಂಧ ಸಹಿಸದ ಪತಿಯಿಂದ ಜೋಡಿ ಕೊಲೆ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದ ದಾರುಣ ಘಟನೆ  

ಅರಸೀಕೆರೆ (ಜೂ.16): ಅಕ್ರಮ ಸಂಬಂಧ ಸಹಿಸದ ಪತಿ ತನ್ನ ಹೆಂಡತಿ ಸೇರಿದಂತೆ  ಅತ್ತೆಯನ್ನು ಬಡಿದು ದಾರುಣವಾಗಿ ಕೊಲೆಗೈದಿರುವ  ಘಟನೆ ತಾಲೂಕಿನ ಗಂಡಸಿ ಹೋಬಳಿಯಲ್ಲಿ ನಡೆದಿದೆ. 

ತಾಲೂಕಿನ  ಗಂಡಸಿ ಪೊಲೀಸ್ ಠಾಣೆಯ ವ್ಯಾಪ್ತಿಯ ರಂಗಾಪುರ ಗ್ರಾಮದ ಶ್ರೀಧರ್ ಜೋಡಿ ಕೊಲೆಯ ಆರೋಪಿಯಾಗಿದ್ದು ಈತನ ಪತ್ನಿ ಮಂಜುಳಾ (28) ಹಾಗು ಭಾರತಿ ಕೊಲೆಗೀಡಾದ ದುರ್ದೈವಿಗಳಾಗಿದ್ದಾರೆ. 

ಕಳೆದ 5 ವರ್ಷಗಳ ಹಿಂದೆ ಜಾವಗಲ್ ಹೋಬಳಿಯ ಹರಳಹಳ್ಳಿ ಗ್ರಾಮದ ಪರಮೇಶ್ವರ ಅವರ ಮಗಳು ಮಂಜುಳಾ ಎಂಬುವರನ್ನು ಗಂಡಸಿ ಹೋಬಳಿಯ  ರಂಗಾಪುರ ಗ್ರಾಮದ ಶ್ರೀಧರ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.  ಮದುವೆಯಾದ ಬಳಿಕ  2- 3 ವರ್ಷ ದಂಪತಿ ಚೆನ್ನಾಗಿಯೇ ಇದ್ದರು. ಆದರೆ ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ಮಂಜುಳಾ ರಂಗಾಪುರ ಗ್ರಾಮದ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳೆನ್ನಲಾಗಿದೆ. 

ರಾಮನಗರ; ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಹೆಣ ಮಾವಿನ ತೋಪಿನಲ್ಲಿ! .

ಇದರಿಂದ ಮನನೊಂದ ಗಂಡ ಹೆಂಡತಿಗೆ ಸಾಕಷ್ಟು ಬುದ್ದಿ ಹೇಳಿದ್ದಾನೆ ಆದರೆ ಗಂಡನ ಮಾತು ಕೇಳದ ಹೆಂಡತಿ ಅಕ್ರಮ ಸಂಬಂಧ ಮುಂದುವರಿಸಿದ್ದಾಳೆ. 

ಇದಕ್ಕೆ ಹೆಂಡತಿ ತಾಯಿ ಕೂಡ ಸಾಥ್ ನೀಡಿದ್ದು, ಇದರಿಂದ ಹೆಂಡತಿ ಮತ್ತು ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಈ ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳಿದ್ದಾಳೆ. ಸ್ಥಳಕ್ಕೆ ಎಸ್‌ಪಿ ಶ್ರೀನಿವಾಸ ಗೌಡ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!