* ಧಾರವಾಡದ ಪ್ರಹ್ಲಾದ ವಿದ್ಯಾರ್ಥಿ ನಿಲಯದಲ್ಲಿ ಈ ವಿಶೇಷ ಕಾರ್ಯ
* ತ್ರಿಮತಸ್ಥ ಬ್ರಾಹ್ಮಣದಿಂದ ಲೋಕಕಲ್ಯಾಣಕ್ಕಾಗಿ ಹೋಮ
* 2 ವರ್ಷಗಳಿಂದ ದೇಶದ ಜನರನ್ನು ಕಾಡುತ್ತಿರುವ ಕೊರೋನಾದಿಂದ ಮುಕ್ತಿ ಸಿಗಲಿ
ಧಾರವಾಡ(ಜೂ.16): ವಿಶ್ವವೇ ಕೋವಿಡ್ ಮಹಾಮಾರಿಗೆ ತತ್ತರಿಸಿ ಹೋಗಿದ್ದು ಈ ವ್ಯಾಧಿಯಿಂದ ಬೇಗನೆ ಮುಕ್ತಿ ಸಿಗಲಿ ಹಾಗೂ ಕೋವಿಡ್‌ಗೆ ಬಲಿಯಾದವರಿಗೆ ಸಂಸ್ಕಾರ ಸಿಗಲೆಂದು ಧಾರವಾಡದಲ್ಲಿ ಎರಡು ದಿನಗಳ ಕಾಲ ತಿಮತಸ್ಥ ಬ್ರಾಹ್ಮಣರು ನಡೆಸಿದ ವಿಶೇಷ ಮಂಗಳವಾರ ಸಮಾರೋಪಗೊಂಡಿತು.
ಮಾಳಮಡ್ಡಿಯ ಪ್ರಹ್ಲಾದ ವಿದ್ಯಾರ್ಥಿ ನಿಲಯದಲ್ಲಿ ಎರಡು ದಿನಗಳ ಕಾಲ 37 ಪುರೋಹಿತರಿಂದ ವಿಶೇಷ ಹೋಮ-ಹವನ ನಡೆಸಲಾಯಿತು. ಪೇಜಾವರದ ವಿಶ್ವಪ್ರಸನ್ನ ತೀರ್ಥರ ಮಾರ್ಗದರ್ಶನ, ಸಂಸ್ಕೃತ ಪಾಠ ಶಾಲೆಯ ಪಂ. ರಾಜೇಶ್ವರ ಶಾಸ್ತ್ರೀಗಳ ಮಾರ್ಗದರ್ಶನದಲ್ಲಿ ರುದ್ರ ಹೋಮ, ನಾಮತ್ರಯ ವಿಷ್ಣು ಹೋಮ, ಪುರುಷಸೂಕ್ತ ಹೋಮ, ದುರ್ಗಾ ಹೋಮಗಳನ್ನು ನಡೆಸಲಾಯಿತು. ಮಂಗಳವಾರ ಬೆಳಗ್ಗೆ ಪೂರ್ಣಾಹುತಿ ನಡೆಸಿ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.
ಬಳ್ಳಾರಿ: ಹಳ್ಳಿಗಳಲ್ಲಿ ಹೆಚ್ಚಾಯಿತು ಕೊರೋನಾ ಮೌಢ್ಯಾಚಾರಣೆ
ಸುಮಾರು 2 ವರ್ಷಗಳಿಂದ ದೇಶದ ಜನರನ್ನು ಕಾಡುತ್ತಿರುವ ಕೊರೋನಾದಿಂದ ಮುಕ್ತಿ ಸಿಗಲಿ ಹಾಗೂ ಈ ದಿಂದ ಸಾವನ್ನಪ್ಪಿದವರ ಸದ್ಗತಿಗಾಗಿ ಹೋಮಗಳನ್ನು ನಡೆಸುವ ಮೂಲಕ ಲೋಕ ಕಲ್ಯಾಣಕ್ಕಾಗಿ ಬ್ರಾಹ್ಮಣರು ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು. ನಂತರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಪಂ. ರಾಜೇಶ್ವರ ಶಾಸ್ತ್ರೀ, ಯಜ್ಞಗಳನ್ನು ನಿಷ್ಕಾಮವಾಗಿ ನೆರವೇರಿಸಿದರೆ ಹೆಚ್ಚಿನ ಫಲ ಸಿಗಲಿದೆ. ಆದ್ದರಿಂದ ನಿಷ್ಕಾಮವಾಗಿ ಎಲ್ಲರೂ ನೆರವೇರಿಸಿದ್ದು ಇಡೀ ವಿಶ್ವಕ್ಕೆ ಅಂಟಿಕೊಂಡಿರುವ ಕೋವಿಡ ತೊಲಗಿ ಹೋಗಲಿದೆ. ಇಂತಹ ವ್ಯಾಧಿಗಳು ಉತ್ಪತ್ತಿಯಾಗಲು ಅಪಕಾರ, ಸ್ವಾರ್ಥ, ಪಾಪ ಕಾರ್ಯಗಳೇ ಕಾರಣ. ಜನರು ಇಂತಹ ಕಾರ್ಯಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆದಾಗ ಮನುಷ್ಯ ಮಾತ್ರ ಅಲ್ಲದೆ, ಇಡೀ ದೇಶ ಆರೋಗ್ಯಯುತವಾಗಿ ಇರಲು ಸಾಧ್ಯ ಎಂದರು.
ಪುರೋಹಿತರಾದ ವೆಂಕಟಾಚಾರ್ಯ ನರಸಿಂಹ ಜೋಶಿ, ಕೋವಿಡ್ನಿಂದ ಬಳಲಿ ಸಾಕಷ್ಟು ಜನರು ಮೃತರಾಗಿದ್ದಾರೆ. ಅವರಿಗೆ ಸಂಸ್ಕಾರವಾಗಿಲ್ಲ. ಹವನದ ಮೂಲಕ ಅವರಿಗೆ ಸಂಸ್ಕಾರ ಮಾಡುವುದು, ವ್ಯಾದಿಯನ್ನು ನಾಶ ಮಾಡುವುದೇ ನಮ್ಮ ಉದ್ದೇಶವಾಗಿದೆ. ಹೋಮ-ಹವನಕ್ಕೆ ಕರಕಿ, ಎಳ್ಳು, ಆಕಳ ತುಪ್ಪ, ಅಮೃತ ಬಳ್ಳಿಯನ್ನು ಬಳಸಲಾಗಿದೆ. ಮತ ಬೇಧ ಬಿಟ್ಟು ತ್ರಿಮತಸ್ಥ ಬ್ರಾಹ್ಮಣರು ಈ ಕಾರ್ಯ ಮೊದಲ ಬಾರಿಗೆ ಧಾರವಾಡದಲ್ಲಿ ಮಾಡಿದ್ದು ಇದು ಎಲ್ಲೆಡೆ ನಡೆಯಬೇಕು ಎಂದರು. ಈ ವೇಳೆ ಡಾ. ಪವನ ಜೋಶಿ, ವಿದ್ವಾಂಸ ಅಖಿಲಾಚಾರ್ಯ ಗಲಗಲಿ, ವಿನಾಯಕ ಜೋಶಿ ಇದ್ದರು.