1807 ಅಂತ್ಯೋದಯ, ಬಿಪಿಎಲ್ ಕಾರ್ಡ್ ದುರ್ಬಳಕೆ | ವಾಪಸಾಗಿದ್ದು ಕೇವಲ 203 ಕಾರ್ಡ್ ಮಾತ್ರ, ಮುಂದಿನ ಹಂತದ ಕ್ರಮದ ಕುತೂಹಲ| ಅಕ್ರಮ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಹೊಂದಿರುವವರು ಸೆ. 30 ರೊಳಗೆ ಹಿಂತಿರುಗಿಸಬೇಕು| ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಖಡಕ್ ಎಚ್ಚರಿಕೆ ನೀಡಿದ್ದರು| ಅಂತಿಮ ಗಡುವಿನ ನಡುವೆಯೂ ಬಹುತೇಕರು ಅನಧಿಕೃತವಾಗಿ ಪಡೆದಿರುವ ಆಹಾರ ಪಡಿತರ ಕಾಡ್ ಗರ್ಳನ್ನು ಹಿಂತಿರುಗಿಸಿಲ್ಲ|
ಕೆ.ಎಂ. ಮಂಜುನಾಥ್
ಬಳ್ಳಾರಿ[ಅ.4] ಸರ್ಕಾರಕ್ಕೆ ವಂಚಿಸಿ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಹೊಂದಿರುವವರು ಸೆ. 30 ರೊಳಗೆ ಹಿಂತಿರುಗಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂಬ ಜಿಲ್ಲಾಧಿಕಾರಿಗಳ ಖಡಕ್ ಎಚ್ಚರಿಕೆ ಫಲ ನೀಡಿಲ್ಲ. ಅಂತಿಮ ಗಡುವಿನ ನಡುವೆಯೂ ಬಹುತೇಕರು ಅನಧಿಕೃತವಾಗಿ ಪಡೆದಿರುವ ಆಹಾರ ಪಡಿತರ ಕಾಡ್ ಗರ್ಳನ್ನು ಹಿಂತಿರುಗಿಸಿಲ್ಲ ಎಂಬುದು ಆಹಾರ ನಾಗರಿಕ ಸರಬರಾಜು ಇಲಾಖೆ ನೀಡಿದ ಅಂಕಿ ಅಂಶದಿಂದಲೇ ತಿಳಿದು ಬಂದಿದೆ.
undefined
1807 ಕಾರ್ಡ್‌ಗಳು ದುರ್ಬಳಕೆ:
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜಿಲ್ಲಾದ್ಯಂತ ತಪಾಸಣೆ ನಡೆಸಿದ ಆಹಾರ ನಾಗರಿಕ ಸರಬರಾಜು ಇಲಾಖೆ ಜಿಲ್ಲೆಯಲ್ಲಿ ಒಟ್ಟು 1807 ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳು ದುರ್ಬಳಕೆಯಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚಿತ್ತು. ಇದರಲ್ಲಿ ಕಾರ್ಡ್ ಪಡೆದುಕೊಂಡಿರುವವರ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಸಹ ಸಿಕ್ಕಿದೆ. ಈ ಆಧಾರದಲ್ಲಿ ಎಲ್ಲರಿಗೂ ನೋಟಿಸ್ ನೀಡಲಾಗಿತ್ತು. ಈ ಪೈಕಿ ೨೦೩ ಕಾಡ್ ಗರ್ಳು ಮಾತ್ರ ಇಲಾಖೆಗೆ ಹಿಂತಿರುಗಿಸಿದ್ದು, ಇನ್ನು ಉಳಿದವರ ಕಾರ್ಡ್‌ಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಬಳ್ಳಾರಿ ನಗರ ಹಾಗೂ ಗ್ರಾಮೀಣ ಸೇರಿ 73, ಹಡಗಲಿ 15, ಕಂಪ್ಲಿ 12, ಹೊಸಪೇಟೆ 17, ಹಗರಿಬೊಮ್ಮನಹಳ್ಳಿ 19, ಸಂಡೂರು 4, ಸಿರುಗುಪ್ಪ 30 ಹಾಗೂ ಹರಪನಹಳ್ಳಿ ತಾಲೂಕಿನ 33 ಕಾರ್ಡ್‌ಗಳು ಇಲಾಖೆಗೆ ಸರೆಂಡರ್ ಆಗಿವೆ.
ಎಷ್ಟಿವೆ ಅಕ್ರಮ ಕಾರ್ಡ್‌ಗಳು?:
ಜಿಲ್ಲೆಯಲ್ಲಿ ಸರ್ಕಾರಿ ನೌಕರರು ಸಹ ಅಕ್ರಮವಾಗಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವುದು ಇಲಾಖೆ ನಡೆಸಿದ ತಪಾಸಣೆ ವೇಳೆ ಪತ್ತೆಹಚ್ಚಲಾಗಿತ್ತು. ಒಟ್ಟು ೬೪೯ ಸರ್ಕಾರಿ ನೌಕರರು ಪಡಿತರ ಕಾರ್ಡ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕಾರು ಸೇರಿದಂತೆ ನಾಲ್ಕು ಚಕ್ರ ವಾಹನಗಳು ಹೊಂದಿರುವ ಶ್ರೀಮಂತ ವರ್ಗದ 1106 ಜನರು ಅಕ್ರಮವಾಗಿ ಪಡಿತರ ಕಾರ್ಡ್‌ಗಳನ್ನು ಪಡೆದಿದ್ದಾರೆ.
ಇನ್ನು ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಒಟ್ಟು 52 ಜನರು ಅಕ್ರಮವಾಗಿ ಪಡಿತರ ಕಾರ್ಡ್‌ಗಳನ್ನು ಪಡೆದಿದ್ದಾರೆ. ಈ ಪೈಕಿ ಬಳ್ಳಾರಿ ನಗರ ಪ್ರದೇಶದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಪಡಿತರ ಕಾರ್ಡ್‌ಗಳು ದುರ್ಬಳಕೆಯಾಗಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಡೆಸಿದ ತಪಾಸಣೆಯಿಂದ ತಿಳಿದು ಬಂದಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಮಾತನಾಡಿದ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು, ಸರ್ಕಾರಕ್ಕೆ ವಂಚಿಸಿ ಪಡಿತರ ಕಾರ್ಡ್‌ಗಳನ್ನು ಪಡೆದವರು ಹಿಂತಿರುಗಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಮರಳಿಸದವರ ವಿರುದ್ಧ ಕಾನೂನು ಪ್ರಕಾರ ಯಾವ ಕ್ರಮ ಜರುಗಿಸಬೇಕು ಅದನ್ನು ಖಂಡಿತ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.