
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.22): ಓರ್ವ ತಹಶೀಲ್ದಾರ್ ಸರ್ಕಾರಿ ಜಮೀನು ಹಾಗೂ ಮೀಸಲು ಅರಣ್ಯವನ್ನೇ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿಕೊಟ್ರು. ಮತ್ತೋರ್ವ ತಹಶೀಲ್ದಾರ್ ಈ ದೇಶದಲ್ಲೇ ಇರದವರಿಗೂ ಸರ್ಕಾರಿ ಜಮೀನನ್ನ ಖಾತೆ ಮಾಡಿಕೊಟ್ರು. ಪರ್ಸನಲ್ ಆಗಿ ಭೇಟಿಯಾಗಿ ಆತ್ಮೀಯವಾಗಿ ನೋಡಿಕೊಂಡವರಿಗೆ ಕಣ್ಣಿಗೆ ಕಂಡ ಜಾಗವನ್ನೆಲ್ಲಾ ಖಾತೆ ಮಾಡಿಕೊಟ್ಟ ಇಬ್ಬರು ತಹಶೀಲ್ದಾರ್ ಹಾಗೂ ಅಧಿಕಾರಿಗಳ ವಿರುದ್ಧ 15 ತಹಶೀಲ್ದಾರ್ ಕೊಟ್ಟ ವರದಿ 10 ಸಾವಿರ ಪುಟದಷ್ಟು. ವರದಿ ನೀಡಿ ತಿಂಗಳುಗಳೇ ಕಳೆದ್ರು ಸರ್ಕಾರದಿಂದ ನೋ ರಿಯಾಕ್ಷನ್.
ರಾಜ್ಯದಲ್ಲೇ ನಡೆದ ಅತಿ ದೊಡ್ಡ ಭೂ ಹಗರಣದ ತನಿಖಾ ವರದಿ: ಕಾಫಿನಾಡ ಕಡೂರು ಹಾಗೂ ಮೂಡಿಗೆರೆ ತಾಲೂಕಿನಲ್ಲಿ ನಡೆದ ಲ್ಯಾಂಡ್ ಸ್ಕ್ಯಾಮ್ ಇಡೀ ರಾಜ್ಯವನ್ನೇ ಅಲ್ಲೋಲ-ಕಲ್ಲೋಲ ಮಾಡಿತ್ತು. ಯಾಕಂದ್ರೆ, ಬೇಲಿಯೇ ಎದ್ದು ಹೊಲಮೇಯ್ದಂತೆ ಕಾನೂನು ಪರಿಪಾಲಕಾರದ ತಹಶೀಲ್ದಾರ್ಗಳೇ ಸರ್ಕಾರಿ ಹಾಗೂ ಮೀಸಲು ಅರಣ್ಯವನ್ನ ಜಾತ್ರೆ ಮಾಡಿದ್ರು. ಕೇಳುದ್ರೆ ಜಮೀನು ಇರೋರ್ಗೂ ಜಮೀನು. ಕೇಳುದ್ರೆ ಸಬ್ ಇನ್ಸ್ಪೆಕ್ಟರ್ ಅವರಿಗೂ ಜಮೀನು. ಬೇಕು ಅಂದ್ರೆ 30 ವರ್ಷದ ಹಿಂದೆಯೇ ಸತ್ತ ವ್ಯಕ್ತಿಯ ಹೆಸರಿಗೂ ಜಮೀನು ಮಂಜೂರು. ಹೇಳೋಕೆ ಒಂದೋ... ಎರಡೋ.... ಮೂಡಿಗೆರೆ ಹಾಗೂ ಕಡೂರು ತಹಶೀಲ್ದಾರ್ ಸರ್ಕಾರಿ ಜಮೀನನ್ನ ಹಂಚೋ ಜಾತ್ರೆ ಮಾಡಿದ್ರು.
GST ಹೊಡೆತ, ಸಬ್ಸಿಡಿ ಕಡಿತ: ಸಂಕಷ್ಟದಲ್ಲಿರುವ ಚರ್ಮ ಕುಶಲಕರ್ಮಿಗಳಿಗೆ ಬೇಕಿದೆ ಸರ್ಕಾರದ ನೆರವು
ಪ್ರಕರಣ ದಾಖಲಾಗಿ, ಬಂಧನವಾಗಿ ಇಬ್ಬರು ತಹಶೀಲ್ದಾರ್ ಸೇರಿ ಐದಾರು ಜನ ಬಿಡುಗಡೆಯಾಗಿದ್ದಾರೆ. ವಿಷಯ ಬೆಳಕಿಗೆ ಬಂದು ಸರ್ಕಾರ 9 ತಹಶೀಲ್ದಾರ್, 6 ಉಪತಹಶೀಲ್ದಾರ್ ನೇತೃತ್ವದ 15 ಜನ ಅಧಿಕಾರಿಗಳ ತಂಡ ರಚಿಸಿ ತನಿಖೆಗೆ ಆದೇಶಿಸಿತ್ತು. ತನಿಖೆ ನಡೆಸಿದ ಅಧಿಕಾರಿಗಳು ಸರ್ಕಾರಕ್ಕೆ ಎರಡು ತಾಲೂಕಿನ 5500 ಎಕರೆ ಜಮೀನಿನ ಸಂಬಂಧ 10 ಸಾವಿರ ಪುಟಗಳ ವರದಿ ನೀಡಿತ್ತು. ಆದ್ರೆ, ಸರ್ಕಾರದಿಂದ ನೋ ಆ್ಯಕ್ಷನ್... ರಿಯಾಕ್ಷನ್.... ತನಿಖೆಯ ಹಾದಿ ಹಳ್ಳ ಹಿಡೀತು ಅನ್ಸತ್ತೆ ಅಂತ ಭಾವಿಸಿದ್ರು. ಆದ್ರೆ, ಕೋರ್ಟ್ ಪ್ರಕರಣ ಸಂಬಂಧ ಸ್ವಯಂ ಪ್ರೇರಿಪಿತವಾಗಿ ಪ್ರಕರಣ ದಾಖಲಿಸಿಕೊಂಡು ಎಲ್ಲರಿಗೂ ನೋಟೀಸ್ ನೀಡಿ. ತನಿಖೆಯ ವರದಿ ನೀಡುವಂತೆ ಕೇಳಿರೋದು ಹೋರಾಟಗಾರರಿಗೆ ತಾತ್ಕಾಲಿಕ ಖುಷಿ ತಂದಿದೆ.
ಕೋರ್ಟ್ ನಿಂದ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲು: ಸರ್ಕಾರ ಸರ್ಕಾರಿ ಜಮೀನಿನ ಮೇಲೆ ಸವಾರಿ ಮಾಡಿದ ಅಧಿಕಾರಿಗಳ ವಿರುದ್ಧ 4(1) ನೋಟಿಫಿಕೇಶನ್ ಮೂಲಕ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿತ್ತು. ಅಲ್ಲಿಗೆ ಹೋರಾಟಗಾರರಿಗೆ ಪ್ರಕರಣ ಹಳ್ಳ ಹಡೀತು ಅಂತ ಕನ್ಫರ್ಮ್ ಆಗಿತ್ತು. ಯಾಕಂದ್ರೆ, ಸರ್ಕಾರ 4(1) ನೋಟಿಫಿಕೇಶನ್ ಮೂಲಕ ತನಿಖೆಗೆ ಮುಂದಾದ್ರೆ ಆ ತನಿಖೆ ಮುಗಿಯುವಷ್ಟರಲ್ಲಿ ಮೂರ್ನಾಲ್ಕು ವರ್ಷಗಳೇ ಕಳೆದು ಹೋಗುತ್ತೆ. ಅಲ್ಲಿಗೆ ಸರ್ಕಾರದ ಅವಧಿಯೂ ಮುಗಿಯಲು ಬಂದಿರುತ್ತೆ. ಜನನೂ ಮರೆತಿರುತ್ತಾರೆ ಅಂತ ಹೋರಾಟಗಾರರು ಸರ್ಕಾರಿ ಜಮೀನು ಉಳಿದು ಹೋರಾಟಕ್ಕೆ ನ್ಯಾಯ ಸಿಗುವ ಆಸೆ ಕೈಬಿಡುವ ಮಟ್ಟಕ್ಕೆ ಹೋಗಿದ್ರು. ಆದ್ರೀಗ, ಕೋರ್ಟ್ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡು ತನಿಖೆಯ ವರದಿ ಕೇಳಿರೋದು ಹೋರಾಟಗಾರರಿಗೆ ನ್ಯಾಯ ಸಿಗುವ ಲಕ್ಷಣಗಳು ಕಾಣುತ್ತಿವೆ.
ಎಚ್‌ಡಿಕೆ ಹೇಳಿದಂತೆ ಕೀಳುಮಟ್ಟಕ್ಕೆ ಇಳಿದಿದ್ರೆ ರಾಜಕೀಯ ನಿವೃತ್ತಿ: ಡಿ.ಕೆ.ಶಿವಕುಮಾರ್
ಆದ್ರೆ, ಹೋರಾಟಗಾರರು ಸರ್ಕಾರಿ ಅಧಿಕಾರಿಗಳಿಗೆ ಯಾವ ಶಿಕ್ಷೆಯಾಗುತ್ತೋ ಅದೇ ಶಿಕ್ಷೆ ಹತ್ತಾರು ಎಕರೆ ಜಮೀನು ಇದ್ರು ಕೂಡ ಮತ್ತೆ ಅಕ್ರಮವಾಗಿ ಜಮೀನು ಮಂಜೂರು ಮಾಡಿಸಿಕೊಂಡವರಿಗೂ ಆಗಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಾರೆ, ಸರ್ಕಾರಿ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆ ಆಗದಿದ್ರೆ ಅವರು ತಮ್ಮ ಸರ್ವೀಸ್ ಉದ್ದಕ್ಕೂ ಇದೇ ಕೆಲಸ ಮಾಡುತ್ತಾರೆ. ಆಗ, ಸರ್ಕಾರಿ ಜಾಗವೇ ಇಲ್ಲದಂತಾಗುತ್ತೆ. ಬಡವರು ಬಡವರಾಗೇ ಸಾಯ್ತಾರೆ. ಉಳ್ಳವರು 10-20-30 ಎಕರೆ ಜೊತೆ ಮತ್ತಷ್ಟು ಎಕರೆ ಜಮೀನು ಮಾಡಿ ಸರ್ಕಾರ ಹಾಗೂ ಬಡವರಿಗೂ ಮೋಸ ಮಾಡ್ತಾರೆ. ಆಗಾಬಾರದು ಅಂದ್ರೆ ಸರ್ಕಾರ ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರ ಏನ್ ಮಾಡುತ್ತೋ ಕಾದುನೋಡ್ಬೇಕು.