
ಬಳ್ಳಾರಿ (ನ.22): ಪಠ್ಯದಲ್ಲಿ ಇರೋದನ್ನು ಪಾಠ ಮಾಡೋ ಬದಲಿಗೆ ಇಲ್ಲದ ವಿಷಯವನ್ನು ಚರ್ಚೆ ಮಾಡೋ ಮೂಲಕ ಅತಿಥಿ ಉಪನ್ಯಾಸಕನೊಬ್ಬ ಇಕ್ಕಟ್ಟಿಗೆ ಸಿಲುಕಿದ್ದಾನೆ. ಮುಸ್ಲಿಂ ಧರ್ಮ ಗುರುಗಳು ಮತ್ತು ಮಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ರೀತಿಯಲ್ಲಿ ಪಾಠ ಮಾಡೋದ್ರ ಜೊತೆ ಮುಸ್ಲಿಂ ಧಾರ್ಮಿಕ ರೀತಿ ರಿವಾಜುಗಳನ್ನು ನಿಂದಿಸಿದ್ದಾರೆಂದು ಮುಸ್ಲಿಂ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ..
ಮುಸ್ಲಿಂರ ಧಾರ್ಮಿಕ ಹಕ್ಕುಗಳ ಬಗ್ಗೆ ಮಾತನಾಡಲು ಹೋಗಿ ಎಡವಟ್ಟು: ಇಲ್ಲದೇ ವಿಚಾರ ಚರ್ಚೆ ಮಾಡೋ ಮೂಲಕ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ ಅತಿಥಿ ಉಪನ್ಯಾಸಕ... ಮುಸ್ಲಿಂರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಉಪನ್ಯಾಸಕನ ವಿರುದ್ಧವಷ್ಟೇ ಅಲ್ಲ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ. ಹೌದು, ಬಳ್ಳಾರಿಯ ಪ್ರತಿಷ್ಠಿತ ಶ್ರೀಮೇದಾ ಕಾಲೇಜಿನ ಅತಿಥಿ ಉಪನ್ಯಾಸಕ ಯು.ಎಸ್. ಗೌಡ ಭಾರತೀಯ ಸಂವಿಧಾನದ ಬಗ್ಗೆ ಪಾಠ ಮಾಡೋ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಪಾಠದಲ್ಲಿ ಇರೋದನ್ನು ಹೇಳೋದು ಬಿಟ್ಟು ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕು ಅವರ ಆಚಾರ ವಿಚಾರ ಜೀವನ ಶೈಲಿಯ ಪದ್ಧತಿ ಬಗ್ಗೆ ಕೆಟ್ಟದಾಗಿ ಬಿಂಬಿಸುವಂತೆ ಮಾತನಾಡಿದ್ದಾರೆ.
ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಯುವಕ ಆತ್ಮಹತ್ಯೆ!
ಇದಷ್ಟೇ ಅಲ್ಲದೇ ಮಹಮ್ಮದ್ ಪೈಗಂಬರ್ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಹಿಂದೆ ನಾಲ್ಕು ನಾಲ್ಕು ಮದುವೆಯಾಗ್ತಿದ್ರು. ಈಗ ಕಾಲ ಬದಲಾವಣೆ ಯಾಗಿದೆ. ಇಷ್ಟ ಬಂದ ಹಾಗೇ ನಡೆದುಕೊಳ್ಳಲು ಆಗಲ್ಲ. ಕಾನೂನು ಅದಕ್ಕೆ ಒಪ್ಪಲ್ಲವೆಂದು ಪಾಠದಲ್ಲಿಇಲ್ಲದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕೆಲ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನವಾಗದ ಹಿನ್ನಲೆ, ಪೋಷಕರನ್ನು ಕರೆದು ಕೊಂಡು ಬಂದು ಕಾಲೇಜು ಬಳಿ ಒಂದಷ್ಟು ಗಲಾಟೆ ಮಾಡಿದ್ದಾರೆ.
ಮುಸ್ಲಿಂಮರು ಹಿಂದೆ ನಾಲ್ಕು ನಾಲ್ಕು ಮದುವೆಯಾಗ್ತಿದ್ರು ಈಗ ನಡೆಯೋದಿಲ್ಲ: ಇನ್ನೂ ವಿವಾದ ಜೋರಾಗುತ್ತಿದ್ದಂತೆ ಉಪನ್ಯಾಸಕ ಕ್ಷಮೆ ಕೇಳಿ ಹೋಗಿದ್ದಾನೆ ಎನ್ನಲಾಗ್ತಿದೆ. ಆದರೆ ಕ್ಷಮೆ ಕೇಳಿದ್ರೇ ನಡೆಯೋದಿಲ್ಲ ವಿವಾದಾತ್ಮಕ ರೀತಿಯಲ್ಲಿ ಮಾತನಾಡಿದ ಅತಿಥಿ ಉಪನ್ಯಾಸಕನನ್ನು ಬಂಧಿಸಬೇಕೆಂದು ಒತ್ತಾಯಿಸಿ ಎಸ್ಪಿ ಕಚೇರಿ ಬಳಿ ಬಂದು ಕೆಲ ಯುವಕರು ವಾಗ್ವಾದ ಮಾಡಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ತಿಳಿಗೊಳಿಸಿದ ಎಸ್ಪಿ ರಂಜಿತ್ ಕುಮಾರ ಬಂಡಾರು ಕ್ರಮದ ಭರವಸೆ ನೀಡಿ ಕಳುಹಿಸಿದ್ದಾರೆ. ಆದರೆ ವಿದ್ಯಾರ್ಥಿಗಳ ಜೊತೆಗೆ ಕೆಲ ಯುವಕರು ಮಾತ್ರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಬಂಧನವಾಗೋವರೆಗೂ ಬಿಡೋದಿಲ್ಲ ಎನ್ನುತ್ತಿದ್ದಾರೆ. ಅಲ್ಲದೇ ಇದು ನಿನ್ನೆಯದಲ್ಲ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಮುಸ್ಲಿಂ ವಿದ್ಯಾರ್ಥಿಗಳು ಇರೋ ಬೇಂಜ್ ಮೇಲೆ ಜೈಶ್ರೀರಾಮ ಮತ್ತು ಹಿಂದೂ ಎನ್ನುವ ಪದ ಬರೆಯುವ ಮೂಲಕ ಶಾಂತಿಯುತವಾಗಿದ್ದವರನ್ನು ಕೆಣಕುವ ಪ್ರಯತ್ನ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.
ಎಚ್‌ಡಿಕೆ ಹೇಳಿದಂತೆ ಕೀಳುಮಟ್ಟಕ್ಕೆ ಇಳಿದಿದ್ರೆ ರಾಜಕೀಯ ನಿವೃತ್ತಿ: ಡಿ.ಕೆ.ಶಿವಕುಮಾರ್
ಬುದ್ಧಿ ಹೇಳೋ ಉಪನ್ಯಾಸಕರೇ ಹೀಗೆ ಮಾಡಿದ್ರೇ ಹೇಗೆ?: ವಿದ್ಯಾರ್ಥಿಗಳಿಗೆ ತಿಳಿಸಿ ಬುದ್ದಿ ಕಲಿಸೋ ಮೂಲಕ ಸರಿ ದಾರಿಗೆ ತರಬೇಕಾದ ಉಪನ್ಯಾಸಕನೇ ಇಂದು ವಿವಾದದಲ್ಲಿ ಸಿಲುಕಿದ್ದಾನೆ. ಸದಾಕಾಲವೂ ಸೌಹಾರ್ದತೆಯಿಂದ ಇರೋ ಬಳ್ಳಾರಿಯಲ್ಲಿ ಈ ರೀತಿಯ ಒಂದು ಘಟನೆ ಇಡೀ ವಾತಾವರಣವನ್ನು ಕಲುಷಿತ ಮಾಡಿರೋದಂತು ಸುಳ್ಳಲ್ಲ.