
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.13): ರಾಜ್ಯದಲ್ಲೇ ಅತಿ ದೊಡ್ಡ ಭೂ ಹಗರಣ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿತ್ತು. ಅಕ್ರಮ ಭೂ ಮಂಜೂರಾತಿ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ 8 ಜನ ತಹಸಿಲ್ದಾರರ್ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿತ್ತು. ತನಿಖೆ ನಡೆದು ವರ್ಷ ಕಳೆದರೂ ತಪ್ಪಿತಸ್ಥರ ವಿರುದ್ಧ ಈವರೆಗೂ ಕ್ರಮತೆಗೆದುಕೊಳ್ಳದೇ ಸರ್ಕಾರ ಮೀನಾಮೇಷ ಎನ್ನಸುತ್ತಿದೆ.
ಮೂಡಿಗೆರೆ, ಕಡೂರು ತಾಲೂಕಿನಲ್ಲಿ ನಡೆದ ಭೂ ಅಕ್ರಮ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಕಡೂರು ಅಕ್ರಮ ಭೂಮಂಜೂರಾತಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖಾ ತಂಡ ರಚಿಸಿದ್ದ ತಂಡವು ಸುಮಾರು 10,500 ಪುಟಗಳ ತನಿಖಾ ವರದಿಯನ್ನು ಸರ್ಕಾರಕ್ಕೆ ,ಕಂದಾಯ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ನೀಡಿದೆ. ಮೂಡಿಗೆರೆ ಮತ್ತು ಕಡೂರಿನಲ್ಲಿ ಕಂದಾಯ ಭೂಮಿಯನ್ನು ಅಧಿಕಾರಿಗಳು ಜನರಿಗೆ ಮಂಜೂರು ಮಾಡಿ ಖಾತೆ ಮಾಡಿಸಿದರು. ಸಾವಿರಾರು ಎಕ್ರೆ ಸರ್ಕಾರಿ ಭೂಮಿಯನ್ನು ಹಣ, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅಧಿಕಾರಿಗಳು ಮಂಜೂರಾತಿ ಮಾಡಿದರು.
ಜಾನುವಾರಿಗೆ ಕಂಟಕವಾಗ್ತಿರೊ ಪ್ಲಾಸ್ಟಿಕ್: ವರ್ಷದಿಂದ ವರ್ಷಕ್ಕೆ ಸಾವಿನ ಪ್ರಮಾಣ ಹೆಚ್ಚಳ
ಈ ಅಕ್ರಮ ಹೊರ ಬಂದ ಕೊಡಲೇ ಸರ್ಕಾರ 8 ಜನ ಹಿರಿಯ ತಹಸಿಲ್ದಾರ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿತ್ತು. ತನಿಖಾ ಕಡೂರು, ಮೂಡಿಗೆರೆಯಲ್ಲಿ ತನಿಖೆ ನಡೆಸಿ 10,500 ಪುಟಗಳ ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಿತ್ತು.ಒಂದು ವರ್ಷ ಕಳೆದರೂ ಈವರೆಗೂ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿಗಳ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ರಮ ಭೂಮಂಜೂರು ಮಾಡಿರುವ ಬಗ್ಗೆ ಉಪವಿಭಾಗಾಧಿಕಾರಿಗಳ ನ್ಯಾಯಲಯಗಳಲ್ಲಿ ಸ್ವಯಂ ದೂರು (ಸುಮೋಟೋ) ಪ್ರಕರಣ ದಾಖಲಿಸಿ ವಿಚಾರಣೆ ಮಾಡಿದ್ದರೂ ಇದೂವರೆಗೂ ಯಾವ ಅಧಿಕಾರಿಗಳ, ಸಿಬ್ಬಂದಿ ಮೇಲೂ ಶಿಸ್ತುಕ್ರಮ ಆಗಿಲ್ಲ
ಸರ್ಕಾರಕ್ಕೆ ರೈತ ಸಂಘ ಒತ್ತಾಯ: ಮೂಡಿಗೆರೆ ಮತ್ತು ಕಡೂರು ತಾಲ್ಲೂಕುಗಳಲ್ಲಿ ನಡೆದಿರುವ ಅಕ್ರಮ ಭೂಮಂಜೂರಾತಿ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿ ಸಿಬ್ಬಂದಿಅಮಾನತ್ತು ಮಾಡುವಂತೆ ರಾಜ್ಯ ರೈತ ಸಂಘ ಆಗ್ರಹಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ರೈತ ಸಂಘದ ಮುಖಂಡ ಗುರುಶಾಂತಪ್ಪ ನೆಪ ಮಾತ್ರಕ್ಕೆ ಮೂಡಿಗೆರೆ ಮತ್ತು ಕಡೂರು ತಾಲ್ಲೂಕುಗಳ ಒಂದಿಬ್ಬರು ತಹಶೀಲ್ದಾರ್ ಗಳನ್ನು ಸರ್ಕಾರಿ ಭೂಮಿ ಮಂಜೂರು ಮಾಡಿರುವ ಪ್ರಕರಣಕ್ಕೆ ಅಮಾನತ್ತು ಮಾಡಿದ್ದಾರೆ ಎಂದಿದ್ದಾರೆ. ಕಡೂರು ತಾಲ್ಲೂಕಿನಲ್ಲಿ ಅಕ್ರಮ ಭೂ ಮಂಜೂರಾತಿ ಪ್ರಕರಣವು ಬೆಳಕಿಗೆ ಬಂದಿದ್ದು, ಅದರಲ್ಲಿ ಕೇವಲ 2 ಲಾಗಿನ್ಗಳನ್ನು ಅಂದಿನ ತನಿಖಾಧಿಕಾರಿ ಉಪ ವಿಭಾಗಾಧಿಕಾರಿ ನಾಗರಾಜ್ ತನಿಖೆ ಮಾಡಿ ಪತ್ತೆ ಹಚ್ಚಿದ್ದರು.
ಶರಣಾದ ನಕ್ಸಲರ ಬೇಡಿಕೆ ಈಡೇರಿಕೆಗೆ ವರದಿ ತಯಾರಿಗೆ ಮುಂದಾಗಿರುವ ಚಿಕ್ಕಮಗಳೂರು ಜಿಲ್ಲಾಡಳಿತ
ಇನ್ನುಳಿದ ಲಾಗಿನ್ಗಳು ತೆರೆಯದೆ ಹಾಗೇ ಬಿಟ್ಟಿದ್ದರು. ತರೀಕೆರೆ ಉಪವಿಭಾಗಾಧಿಕಾರಿಗಳು ನಡೆಸಿದ ತನಿಕೆಯಲ್ಲಿ ಉಮೇಶ ರವರ ಎರಡು ಲಾಗಿನ್ ನಲ್ಲಿ ಒಟ್ಟು 326 ಪ್ರಕರಣ ಬೆಳಕಿಗೆ ಬಂದಿವೆ. ಉಮೇಶರವರ ಮುಂಬಡ್ತಿಯನ್ನು ತಡೆದು ಸೇವೆಯಿಂದ ಅಮಾನತ್ತು ಇಲ್ಲ ವಜಾ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇದೂವರೆಗೂ ಯಾವುದೇ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಿಲ್ಲ ಎಂದು ಟೀಕಿಸಿ ಈ ಘಟನೆಗೆ ಸಂಬಂಧಪಟ್ಟಂತೆ ಕರ್ನಾಟಕ ಲೋಕಾಯುಕ್ತರು ಕೇಸು ದಾಖಲಿಸಿ ಬಗ್ಗೆಯು ತನಿಖೆ ನಡೆಯುತ್ತಿದ್ದು ,ಆರೋಪ ಹೊತ್ತಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಶಿಸ್ತುಕ್ರಮ ಜರುಗಿಸಿ ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.