ಪ್ರಿಯಕರನೊಂದಿಗೆ ಪಲ್ಲಂಗದಲ್ಲಿ ಪತ್ನಿ, ದಾವಣಗೆರೆ ಪತಿ ಮಾಡಿದ್ದೇನು?

By Web Desk  |  First Published Sep 17, 2018, 10:27 PM IST

ಪತಿ ಕೆಲಸದ ನಿಮಿತ್ತ ಪತಿ ಹೊರಗೆ ಹೋಗಿದ್ದಾಗ ಪತ್ನಿ ತನ್ನ ಪ್ರಿಯಕರನ ಜತೆ ಮಂಚ ಏರಿದ್ದಳು. ಅದು ಹೇಗೋ ಅನುಮಾನ ಬಂದು ಸ್ಥಳಕ್ಕೆ ಬಂದ ಪತಿಗೆ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಮುಂದೆ ಆಗಿದ್ದೆಲ್ಲ ದೊಡ್ಡ ಕತೆ.. ಇದು ದಾವಣಗೆರೆಯ ಪ್ರಕರಣ..


ದಾವಣಗೆರೆ[ಸೆ.17] ಪತ್ನಿಯೊಬ್ಬಳು ಪ್ರಿಯಕರನೊಂದಿಗೆ ಇದ್ದಾಗ ಪತಿರಾಯನಿಗೆ ಸಿಕ್ಕುಬಿದ್ದು ರಾದ್ಧಾಂತವಾದ ಘಟನೆ ದಾವಣಗೆರೆ ಕೆಟಿಜೆ ನಗರದಲ್ಲಿ ನಡೆದಿದೆ. ಪತ್ನಿಯ ಅಕ್ರಮ ಸಂಬಂಧ ಬಗ್ಗೆ ಅನುಮಾನವಿದ್ದ ಹಿನ್ನೆಲೆ ಪತಿ ಪೊಲೀಸರನ್ನು ಕರೆದುಕೊಂಡು ರೆಡ್ ಹ್ಯಾಂಡ್ ಗಿ ಪ್ರಿಯಕರನನ್ನು ಹಿಡಿದು ಥಳಿಸಿದ್ದಾನೆ.

ಪತ್ನಿ ಮತ್ತು ಪ್ರಿಯಕರ ಇಬ್ಬರೂ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ರೂಮಿನ ಬಾಗಿಲಿಗೆ ಚಿಲಕ ಹಾಕಿದ ಪತಿರಾಯ ಪೊಲೀಸರನ್ನು ಕರೆತಂದಿದ್ದಾ‌ನೆ.ದಾವಣಗೆರೆಯ ಡಾಂಘೆ ಪಾರ್ಕ್ ಎದುರಿನ ಭಗತ್ ಸಿಂಗ್ ನಗರದಲ್ಲಿ ಹನುಮಂತ ಎಂಬ ವ್ಯಕ್ತಿ ಪೂರ್ಣಿಮಾ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಪೂರ್ಣಿಮಾ ಗಿರೀಶ್  ಸತಿಪತಿಯರಾಗಿದ್ದು
ಪೂರ್ಣಿಮಾ ಹನುಮಂತನ ಜೊತೆ  ಸಂಬಂಧ ಹೊಂದಿದ್ದಳು. 

Tap to resize

Latest Videos

ಗೀರಿಶ್ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದ,  ಪತ್ನಿ ಪೂರ್ಣಿಮಾ ಹರ್ಬಲ್ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು.ಹಲವು ದಿನಗಳಿಂದ ಗಿರೀಶ್ ತನ್ನ ಪತ್ನಿ ಪೂರ್ಣಿಮಾ ಅಕ್ರಮ ಸಂಬಂಧ ಬಗ್ಗೆ ಗಲಾಟೆ ನಡೆಯುತ್ತಿತ್ತು. ಇಂದು ಇಬ್ಬರು ಮನೆಯಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದ ಗಿರೀಶ್ ಸ್ಥಳಕ್ಕೆ  ಕೆ.ಟಿ.ಜೆ ನಗರ ಪೋಲಿಸ್ ರನ್ನು ಕರೆತಂದು  ಠಾಣೆಗೆ ದೂರುನೀಡಿದ್ದಾನೆ. ಇಬ್ಬರ ಹೇಳಿಕೆ ದಾಖಲಿಸಲಿರುವ ಪೋಲಿಸರು ವಿಚಾರಣೆ ನಡೆಸಿದ್ದಾರೆ.

click me!