ಹುಷಾರ್! ಅಟಲ್ ಗೆ ಆದ ಗತಿಯೇ ಮೋದಿಗೆ: ಬಿಜೆಪಿ ಸಂಸದ!

 |  First Published Jul 29, 2018, 10:06 PM IST

ವಾಜಪೇಯಿಗೆ ಆದ ಗತಿಯೇ ಮೋದಿಗೂ ಆಗುತ್ತಾ?

ಕಾರ್ಯಕರ್ತರಿಗೆ ಬಿಜೆಪಿ ಸಂಸದ ಕೊಟ್ಟ ಎಚ್ಚರಿಕೆ ಏನು?

ದಾವಣಗೆರೆ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್

ಕರಾರುವಕ್ಕು ಪ್ರಚಾರಕ್ಕೆ ಕಾರ್ಯಕರ್ತರಿಗೆ ಸಲಹೆ 
 


ದಾವಣಗೆರೆ[ಜು.29]: ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ವಾಜಪೇಯಿ ಅವರಿಗೆ ಆದ ಗತಿಯೇ ನರೇಂದ್ರ ಮೋದಿ ಅವರಿಗೂ ಬರಲಿದೆ ಎಂದು ಕೇಂದ್ರದ ಮಾಜಿ ಸಚಿವ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಆತಂಕ ವ್ಯಕ್ತಪಡಿಸಿದರು. 

ನಗರದ ಜಿಎಂಐಟಿ ಕಾಲೇಜ್ ನಲ್ಲಿ ನಡೆದ ರಾಜ್ಯ ಮಹಿಳಾ ಮೋರ್ಚಾದ ಪ್ರಶಿಕ್ಷಣ ಶಿಬಿರದಲ್ಲಿ ಮಾತನಾಡಿದ ಅವರು,  ವಾಜಪೇಯಿ ಅವರು ದೇಶದ ಜನತೆಗೆ ಸರ್ವ ಶಿಕ್ಷಣ ಅಭಿಯಾನ, ಗ್ರಾಮ ಸಡಕ್ ಯೋಜನಂತಹ ಅನೇಕ ಯೋಜನೆ ಕೊಟ್ಟಿದ್ದರು. ಆದರೂ ಮುಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತು. ಕಾರ್ಯಕರ್ತರು ವಾಜಪೇಯಿ ಸರ್ಕಾರ ಮಾಡಿದ ಸಾಧನೆಗಳನ್ನು ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡಲಿಲ್ಲ. ಇದು ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಯಿತು ಎಂದರು.

Tap to resize

Latest Videos

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಾಧನೆಗಳನ್ನು ಜನರಿಗೆ ಮಾಹಿತಿ ನೀಡದಿದ್ದರೆ ವಾಜಪೇಯಿ ಅವರಿಗೆ ಆದ ಗತಿಯೇ ಮೋದಿಯವರು ಅನುಭವಿಸುವ ಸಾಧ್ಯತೆಯಿದೆ ಎಂದರು. 

ಎಲ್ಲ ಬಿಜೆಪಿ ಕಾರ್ಯಕರ್ತರು ಮೋದಿ ಸರ್ಕಾರದ ಸಾಧನೆ ಬಗ್ಗೆ ಜನತೆಗೆ ತಿಳಿಸಬೇಕು. ಈಗಿನಿಂದಲೇ ಎಚ್ಚೆತ್ತುಕೊಂಡು ಸರ್ಕಾರದ ಅಭಿವೃದ್ಧಿ ಸಾಧನೆಗಳನ್ನು ತಿಳಿಹೇಳಬೇಕು ಎಂದು ತಿಳಿಸಿದರು.

click me!