ಆಲಸ್ಯ ಮೇಲ್ನೋಟಕ್ಕೆ ಹಿತ ಅನಿಸಿದರೂ ಅನೇಕ ಅಹಿತ ಉಂಟು ಮಾಡುತ್ತದೆ. ಅನ್ಯಾಯದ ಹಣದಿಂದಲೂ ಅನಾರೋಗ್ಯ ಬರುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಶ್ರೀ ಹೇಳಿದರು. ಅವರು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸಂಕಲ್ಪಿಸಿದ 32ನೇ ಚಾತುರ್ಮಾಸ್ಯದಲ್ಲಿ ಮೆಣಸಿ ಸೀಮೆ ಭಕ್ತರು ಸಲ್ಲಿಸಿದ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಶಿರಸಿ (ಸೆ.2) : ಆಲಸ್ಯ ಮೇಲ್ನೋಟಕ್ಕೆ ಹಿತ ಅನಿಸಿದರೂ ಅನೇಕ ಅಹಿತ ಉಂಟು ಮಾಡುತ್ತದೆ. ಅನ್ಯಾಯದ ಹಣದಿಂದಲೂ ಅನಾರೋಗ್ಯ ಬರುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಶ್ರೀ ಹೇಳಿದರು. ಅವರು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸಂಕಲ್ಪಿಸಿದ 32ನೇ ಚಾತುರ್ಮಾಸ್ಯದಲ್ಲಿ ಮೆಣಸಿ ಸೀಮೆ ಭಕ್ತರು ಸಲ್ಲಿಸಿದ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
\ಶಿರಸಿ: ಬೇಡ್ತಿ ನದಿ ನೀರು ಜೋಡಣೆ ಅವೈಜ್ಞಾನಿಕ, ಸ್ವರ್ಣವಲ್ಲೀ ಶ್ರೀ
undefined
ಈಚೆಗಿನ ದಿನಗಳಲ್ಲಿ ಎಲ್ಲ ಕಡೆ ಅನಾರೋಗ್ಯದ ವಾತಾವರಣ ಇದೆ. ಅನಾರೋಗ್ಯದ ವಾತಾವರಣ ಎಲ್ಲ ಕಡೆ ವ್ಯಾಪಕವಾಗುತ್ತಿದೆ. ಇದರ ನಿಯಂತ್ರಣಕ್ಕೆ ನಾವೇನು ಮಾಡಬೇಕು ಎಂಬುದನ್ನೂ ಚಿಂತಿಸಬೇಕಾಗಿದೆ. ಇದರ ನಿಯಂತ್ರಣಕ್ಕೆ ಅನೇಕ ವಿಷಯಗಳು ಇವೆ. ಮಳೆಗಾಲದ ದಿನಗಳಲ್ಲಿ ಸತತ ಮಳೆ ಸುರಿದರೂ ಅನಾರೋಗ್ಯದ ವಾತಾವರಣ ಬರುತ್ತದೆ ಎಂದರು. ನಮ್ಮ ನಿಷ್ಕಿ್ರಯತೆ, ಆಲಸ್ಯವೂ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆಲಸ್ಯ ಮೇಲ್ನೋಟಕ್ಕೆ ಹಿತ ಅನಿಸಿದರೂ ಅನೇಕ ಅಹಿತ ಉಂಟು ಮಾಡುತ್ತದೆ ಎಂದರು.
ಸ್ವಸ್ಥ ಬದುಕಿಗೆ ಅರ್ಥ ಶುದ್ಧಿ ಕೂಡ ಮಹತ್ವದ್ದಿದೆ. ಹಣದ ಸಂಪಾದನೆ ಧರ್ಮ, ನ್ಯಾಯ ಮೀರಿ ಹೋಗುತ್ತದೆ ಎಂದಾರರೆ ಅದು ಕೂಡ ಅಪಾಯವಾಗಿದೆ. ಅಧರ್ಮ, ಅನ್ಯಾಯ ಗೊತ್ತಿದ್ದರೂ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಮನಸ್ಸು ಅನ್ಯಾಯ ಸಮರ್ಥಿಸಿಕೊಳ್ಳುವ ಸ್ಥಿತಿಯೂ ಬರಬಹುದು ಎಂದರು. ಇದು ಸರಿಯಲ್ಲ. ಶಾಸ್ತ್ರವೂ ಇದನ್ನೇ ಹೇಳುತ್ತದೆ, ನಾವೂ ಅನೇಕ ಕಂಡಿದ್ದೇವೆ. ಯಾರು ಅನ್ಯಾಯ, ಅಧರ್ಮ ದಾರಿಯಲ್ಲಿ ಹಣ ಸಂಪಾದನೆ ಮಾಡುವರೋ ಹಣದಿಂದಲೂ ಅನಾರೋಗ್ಯ ಬರುತ್ತದೆ ಎಂದು ವಿಶ್ಲೇಷಣೆ ಮಾಡಿದರು.
ಯಾವುದೇ ಪಾಪ, ಪುಣ್ಯ ಉತ್ಪಟವಾದಾಗ ಫಲ ಕೂಡ ಬೇಗ ಕೊಡುತ್ತದೆ. ನಮ್ಮ ಒಳಗಿನ ಭಾವ ತೀವ್ರತೆಯಿಂದ ಅದು ತೀಕ್ಷ$್ಣವಾಗುತ್ತದೆ. ಪಾಪದ ಫಲ ದುಃಖ, ಪುಣ್ಯದ ಫಲ ನೆಮ್ಮದಿ ಎಂದ ಶ್ರೀಗಳು, ಕೊರೋನಾ ಹೊಸ ಜೀವನ ಶೈಲಿ ಕಲಿಸಿದೆ. ವ್ಯಾಯಾಮ, ವಿಶ್ರಾಮಗಳ ಸಮತೋಲನ ಕಂಡುಕೊಳ್ಳಬೇಕು ಎಂದರು. ಆಹಾರ ನಿಯಮ, ನಿದ್ದೆಯ ನಿಯಮ ಪಾಲಿಸಬೇಕು. ಆಹಾರ ಪಾಲನೆ ಮಾಡದವನು ಎಷ್ಟುಬುದ್ಧಿವಂತ ಆದರೂ ಅನಾರೋಗ್ಯ ಬರುತ್ತದೆ. ಆಹಾರ ಪದ್ಧತಿ ಎಡವಟ್ಟು ಸರಿ ಮಾಡಿಕೊಳ್ಳಬೇಕು. ಆರೋಗ್ಯ ರಕ್ಷಿಸಿಕೊಳ್ಳಲು ಬೇಗ ಮಲಗಿ ಬೇಗ ಏಳಬೇಕು. ತಡೆದು ಮಲಗಿ, ಬೇಗ ಏಳುವುದು ಸರಿಯಲ್ಲ. ತಡೆದು ಮಲಗಿ, ತಡೆದು ಏಳುವುದೂ ಸರಿಯಲ್ಲ ಎಂದರು.
ಉತ್ತರಕನ್ನಡ: ಐತಿಹಾಸಿಕ ಬನವಾಸಿಯ ಮಧುಕೇಶ್ವರ ದೇವರ ನವರಥಕ್ಕೆ ಮುನ್ನುಡಿ
ಸೀಮಾ ಪ್ರಮುಖರಾದ ರಮಾಕಾಂತ ಹೆಗಡೆ ಮಂಡೆಮನೆ, ರಾಜಾರಾಮ ಹೆಗಡೆ ಸೊಣಗಿಮನೆ, ದಿನೇಶ ಹೆಗಡೆ ಮಣ್ಮನೆ, ಜಯಲಕ್ಷ್ಮೀ ಹೆಗಡೆ, ರಾಜೇಶ್ವರಿ ಭಟ್ಟಧೋರಣಗಿರಿ ಇತರರು ಇದ್ದರು.
ಗ್ರಹಸ್ಥನಿಗೂ ಬ್ರಹ್ಮಚರ್ಯವಿದೆ. ಈಚೆಗೆ ಇದಕ್ಕೆ ಲೋಪ ಆಗುತ್ತಿದೆ. ನಗರದಲ್ಲಿದ್ದ ಈ ಲೋಪ ಹಳ್ಳಿಗಳಿಗೂ ಬಂದಿದೆ. ಬ್ರಹ್ಮಚರ್ಯ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
ಸ್ವರ್ಣವಲ್ಲೀ ಶ್ರೀ