Crime News: ಸೆಕ್ಯುರಿಟಿ ಗಾರ್ಡ್‌ ಕಟ್ಟಿಹಾಕಿ ಮಳಗಿ ಸಹಕಾರಿ ಸಂಘ ದರೋಡೆಗೆ ಯತ್ನ

Published : Sep 02, 2022, 08:26 AM ISTUpdated : Sep 02, 2022, 08:27 AM IST
Crime News: ಸೆಕ್ಯುರಿಟಿ ಗಾರ್ಡ್‌ ಕಟ್ಟಿಹಾಕಿ ಮಳಗಿ ಸಹಕಾರಿ ಸಂಘ ದರೋಡೆಗೆ ಯತ್ನ

ಸಾರಾಂಶ

 ಸೆಕ್ಯುರಿಟಿ ಗಾರ್ಡ್‌ ಕಟ್ಟಿಹಾಕಿ ಮಳಗಿ ಸಹಕಾರಿ ಸಂಘ ದರೋಡೆಗೆ ಯತ್ನ ಮಳಗಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಸೆಕ್ಯುರಿಟಿ ಗಾರ್ಡ್‌ ಕಟ್ಟಿಹಾಕಿ ದರೋಡೆಗೆ ಯತ್ನಿಸಿದ ಘಟನೆ

ಮುಂಡಗೋಡ (ಸೆ.2) : ಇಲ್ಲಿನ ಮಳಗಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಸೆಕ್ಯುರಿಟಿ ಗಾರ್ಡ್‌ನನ್ನು ಕಟ್ಟಿಹಾಕಿ ದರೋಡೆಗೆ ಯತ್ನಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಬುಧವಾರ ರಾತ್ರಿ 10 ಗಂಟೆ  ಸುಮಾರಿಗೆ ಸಹಕಾರಿ ಸಂಘದ ಸೆಕ್ಯುರಿಟಿ ಗಾರ್ಡ್‌ ಮಹಾದೇವಪ್ಪ ತಳವಾರ ಅವರ ಬಾಯಿಗೆ ಬಟ್ಟೆಯಿಂದ ಬಿಗಿದಿದ್ದಾರೆ. ಬಳಿಕ ಹಗ್ಗದಿಂದ ಕಟ್ಟಿಹಾಕಿದ್ದಾರೆ. ಅಕ್ರಮವಾಗಿ ಸಹಕಾರಿ ಸಂಘದ ಒಳಪ್ರವೇಶಿಸಿದ ದುಷ್ಕರ್ಮಿಗಳು ರಾತ್ರಿ ಇಡೀ ಒಳಗೇ ಇದ್ದರು. ಈ ವೇಳೆ ಗ್ಯಾಸ್‌ ವೆಲ್ಡಿಂಗ್‌ ಕಟ್ಟರ್‌ ಬಳಸಿ ಮೂರು ಹಳೆಯ ಲಾಕರ್‌ಗಳನ್ನು ಕೊರೆದಿದ್ದಾರೆ. ಆದರೆ ಲಾಕರ್‌ನಲ್ಲಿ ದುಷ್ಕರ್ಮಿಗಳಿಗೆ ಏನೂ ಸಿಕ್ಕಿಲ್ಲ.

ಭಟ್ಕಳ: ಬ್ರೆಡ್ ತರಲು ಅಂಗಡಿಗೆ ಹೋದ ಬಾಲಕ ಕಿಡ್ನ್ಯಾಪ್, ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಆನಂತರ ನಗ-ನಾಣ್ಯ ಇದ್ದ ಹೊಂದಿದ್ದ ಬೃಹತ್‌ ಲಾಕರ್‌ನ್ನು ಕೊರೆದು ತೆಗೆಯಲು ಪ್ರಯತ್ನಿಸಿ ವಿಫಲವಾಗಿದ್ದಾರೆ. ಬೆಳಗ್ಗಿನಜಾವ ದರೋಡೆಕೋರರು ಬರಿಗೈಯಲ್ಲಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್‌ ನಗದು ಚಿನ್ನಾಭರಣಗಳೆಲ್ಲ ಹೊಸ ಲಾಕರ್‌ನಲಿದ್ದ ಕಾರಣ ಯಾವುದೇ ನಗ-ನಾಣ್ಯ ದರೋಡೆಯಾಗಿಲ್ಲ. ಮೂವರು ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬದರಿನಾಥ ಮತ್ತು ಮುಂಡಗೋಡ ಪೊಲೀಸರು ಪರಿಶೀಲಿಸಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಪತ್ತೆ ಕಾರ್ಯ ನಡೆದಿದೆ.ಪುತ್ತೂರು: ಚಲಿಸುತ್ತಿದ್ದ ರೈಲಿನಲ್ಲಿ ಲಕ್ಷಾಂತರ ರು. ಮೌಲ್ಯದ ನಗದು, ಚಿನ್ನಾಭರಣ ದರೋಡೆ

ಮನೆಗಳ್ಳರ ಬಂಧನ: .8.75 ಲಕ್ಷ ಮೌಲ್ಯದ ಚಿನ್ನ ವಶ

 ಹುಮನಾಬಾದ್ ಪಟ್ಟಣದ ಹೌಸಿಂಗ್‌ ಬೋರ್ಡ್‌ ಕಾಲೋನಿಯ ನಿರ್ಮಲಾಬಾಯಿ ಧುಮಾಳೆ ಎಂಬುವರ ಮನೆಗೆ ಜು.19ರಂದು ಮೂರು ಜನ ಸುಲಿಗೆಕೋರರು ನುಗ್ಗಿ ಚಾಕುವಿನಿಂದ ಹೆದರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದವರನ್ನು ಪತ್ತೆ ಹಚ್ಚುವಲ್ಲಿ ಹುಮನಾಬಾದ್‌ ಪೊಲೀಸರು ಯಶಸ್ವಿಯಾಗಿದ್ದಾರೆ. ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದ ವಿಠೋಬಾ ಧರಿ, ಸಂಜೀವಕುಮಾರ ಗಡಿಗೌಡಗಾಂವ ಹಾಗೂ ಶೇಖ ಆಸೀಫ ಮುಲ್ಲಾನೋರ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡೂ ಮೋಟಾರ್‌ ಸೈಕಲ್‌ ಹಾಗೂ ಸುಮಾರು 8.75 ಲಕ್ಷ ರು. ಬೆಲೆ ಬಾಳುವ ಬಂಗಾರದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿ​ಕಾರಿ ಡಿ.ಕಿಶೋರಬಾಬು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಎಸ್‌ಪಿ ಮಹೇಶ ಮೇಘಣ್ಣನವರ, ಹುಮನಾಬಾದ್‌ ಎಎಸ್‌ಪಿ ಶಿವಾಂಶು ರಜಪೂತ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಶರಣಬಸಪ್ಪ ಕೋಡ್ಲಾ, ಪಿಎಸ್‌ಐ ಮಂಜನಗೌಡ ಪಾಟೀಲ್‌, ಸಂಚಾರಿ ಪಿಎಸ್‌ಐ ಬಸವರಾಜ ಹೇರೂರ ಅಪರಾಧ ವಿಭಾಗ ಪಿಎಸ್‌ಐ ಸುರೇಶ ಹಜ್ಜರ್ಗೆ ಸೇರಿದಂತೆ ಸಿಬ್ಬಂದಿ ರಮೇಶ, ಭಗವಾನ ಬಿರಾದರ, ವಿಜಯಕುಮಾರ ಮೇಟಿ, ಮಲ್ಲು ಮಳ್ಳಿ, ಶಿವು ಶೀತಾಳಗೇರಾ, ಸೂರ್ಯಕಾಂತ, ಇಕೇಶ, ಬಾಲಾಜಿ, ಬಾಬುರಾವ, ಷÜಣ್ಮುಕಯ್ಯಾ, ಆಕಾಶ ಸಿಂಧೆ, ರಾಘವೇಂದ್ರರೆಡ್ಡಿ, ನವೀನ ಮತ್ತು ಇರ್ಫಾನ್‌, ಆರೀಫ ಅವರ ತಂಡ ಕಳ್ಳರನ್ನು ಬಂಧಿ​ಸುವಲ್ಲಿ ಯಶಸ್ವಿಯಾಗಿದೆ.

PREV
Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: Aadi Lakshmi Purana Serial - ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ