'ಬಿಎಸ್‌ವೈ ಶತ್ರು ಆಗಿದ್ರೂ ಅವರು ಪಕ್ಷದಲ್ಲಿರದಿದ್ರೆ ರಾಜ್ಯದಲ್ಲಿ ಬಿಜೆಪಿ ಇರಲ್ಲ'..!

Published : Sep 30, 2019, 03:22 PM IST
'ಬಿಎಸ್‌ವೈ ಶತ್ರು ಆಗಿದ್ರೂ ಅವರು ಪಕ್ಷದಲ್ಲಿರದಿದ್ರೆ ರಾಜ್ಯದಲ್ಲಿ ಬಿಜೆಪಿ ಇರಲ್ಲ'..!

ಸಾರಾಂಶ

ಯಡಿಯೂರಪ್ಪ ಅವರು ನನ್ನ ಮೊದಲ ಶತ್ರು. ಆದ್ರೆ ಅವರಿಲ್ಲಾಂದ್ರೆ ರಾಜ್ಯದಲ್ಲಿ ಬಿಜೆಪಿ ಇರಲ್ಲ ಎಂದು ಕನ್ನಡ ಚಳುವಳಿ ನಾಯಕ ವಾಟಾಳ್‌ನಾಗರಾಜ್ ಹೇಳಿದ್ದಾರೆ. ಆದರೂ ನಾನು ಬಿಎಸ್‌ವೈ ಪರವಿಲ್ಲ ಎಂದಿದ್ದಾರೆ.

ಚಾಮರಾಜನಗರ(ಸೆ.30): ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ಲ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಮೊದಲ ಶತ್ರು. ಆದರೂ ಅವರ ರಾಜಕೀಯ ಹಂಗಿನಲ್ಲಿ ರಾಜ್ಯದ ಎಂಪಿ, ಎಂಎಲ್‌ಎ ಗೆದ್ದಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಬಿಜೆಪಿಯಲ್ಲಿ ಇಲ್ಲ ಎಂದಲ್ಲಿ, ರಾಜ್ಯದಲ್ಲಿ ಬಿಜೆಪಿ ಇರಲ್ಲ ಎಂದು ಕನ್ನಡ ಚಳುವಳಿ ನಾಯಕ ವಾಟಾಳ್‌ನಾಗರಾಜ್ ಹೇಳಿದ್ದಾರೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್‌ಪೋಸ್ಟ್‌ನಲ್ಲಿ ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧಿಸುವಂತೆ ಕೋರಿ ಕೇರಳ ಪ್ರತಿಭಟಿಸುತ್ತಿರುವುದನ್ನು ವಿರೋಧಿಸಿದ್ದಾರೆ. ಈ ಸಂದರ್ಭ ಮಾತನಾಡಿ, ನಾನು ಬಿಎಸ್‌ವೈ ಪರವಿಲ್ಲ ಎಂದು ಹೇಳಿದ್ದಾರೆ.

ದಸರೆಯಲ್ಲಿ ಮೋದಿ, ಬಿಎಸ್‌ವೈ ಗುಣಗಾನ ಮಾಡಿದ ಜಿಟಿಡಿ

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಾಟಾಳ್, ಜಗದೀಶ ಶೆಟ್ಟರ್, ಸದಾನಂದಗೌಡ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಮಂತ್ರಿ ಏನಾದರೂ ಆಗಿದ್ದರೆ, ಬಿಎಸ್‌ವೈ ಹಂಗಿನಿಂದಲೇ ಎಂದು ವಾದಿಸಿದ್ದಾರೆ.

ನಾನು ಮುಖ್ಯಮಂತ್ರಿ ಯಡಿಯೂರಪ್ಪ ಆತ್ಮೀಯ ಸ್ನೇಹಿತರು. ಅವರು ಜೈಲಿಗೆ ಹೋದಾಗ, ಆಸ್ಪತ್ರೆಯಲ್ಲಿದ್ದಾಗ ಭೇಟಿ ಮಾಡಿದ್ದೇ. ಆದರೆ ಮುಖ್ಯಮಂತ್ರಿಯಾದ ಮೇಲೆ ಭೇಟಿಯಾಗಿಲ್ಲ ಎಂದಿದ್ದಾರೆ.

ಬಳ್ಳಾರಿ ಜಿಲ್ಲೆ ಎಂದಿಗೂ ಎರಡು ಭಾಗ ಆಗಬಾರದು. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚರಿತ್ರೆ ನೋಡಲಿ. ಬಳ್ಳಾರಿ ವಿಭಜನೆಗಾರರಿಗೆ ಇತಿಹಾಸ ಗೊತ್ತಿಲ್ಲ ಎಂದರು. ಔರಾದ್ಕರ್ ವರದಿ ಜಾರಿಗಾಗಿ ಹೋರಾಟ ಮಾಡಿರುವೆ. ಸಮ್ಮಿಶ್ರ ಸರ್ಕಾರದಲ್ಲಿ ಜಾರಿಗೆ ಬರುವ ಹಂತಕ್ಕೆ ಬಂತು. ಸರ್ಕಾರ ಬಿದ್ದೋಯ್ತು ಈ ಸರ್ಕಾರ ವರದಿಯ ಪುಟ ಎಣಿಸುತ್ತಿದೆ ಎಂದು ವ್ಯಂಗವಾಡಿದ್ದಾರೆ.

ಹಗಲು ಹೆದ್ದಾರಿ ಮುಚ್ತೀವಿ: ವಾಟಾಳ್ ಎಚ್ಚರಿಕೆ

PREV
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!