ಶಿವಮೊಗ್ಗ ವಿಮಾನ ನಿಲ್ದಾಣ ಲೈಸೆನ್ಸ್‌ ನವೀಕರಣವಾಗದಿದ್ರೆ ಹಾರಾಟಕ್ಕೆ ತೊಡಕು: ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನೀಡಿದ್ದ ಲೈನೆನ್ಸ್‌ ಅವಧಿಯನ್ನು ಸೆ.23ರವರೆಗೆ ಮಾತ್ರ ವಿಸ್ತರಿಸಿದ್ದು, ಈ ಲೈಸೆನ್ಸ್‌ ಅವಧಿ ನವೀಕರಣಗೊಳ್ಳದೆ ಇದ್ದರೆ ಶಿವಮೊಗ್ಗದಿಂದ ವಿಮಾನಗಳ ಹಾರಾಟಕ್ಕೆ ತೊಡಕಾಗಲಿದೆ.


ಶಿವಮೊಗ್ಗ (ಸೆ.05): ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನೀಡಿದ್ದ ಲೈನೆನ್ಸ್‌ ಅವಧಿಯನ್ನು ಸೆ.23ರವರೆಗೆ ಮಾತ್ರ ವಿಸ್ತರಿಸಿದ್ದು, ಈ ಲೈಸೆನ್ಸ್‌ ಅವಧಿ ನವೀಕರಣಗೊಳ್ಳದೆ ಇದ್ದರೆ ಶಿವಮೊಗ್ಗದಿಂದ ವಿಮಾನಗಳ ಹಾರಾಟಕ್ಕೆ ತೊಡಕಾಗಲಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಕಳೆದ ಬಾರಿ ಒಂದು ವರ್ಷದ ಅವಧಿಗೆ ಲೈಸೆನ್ಸ್‌ ನೀಡಿತ್ತು. ಈ ಅವಧಿ ಆಗಸ್ಟ್‌ 23ಕ್ಕೆ ಮುಕ್ತಾಯಗೊಂಡಿದೆ. ಒಂದು ವರ್ಷದ ಅವಧಿಗೆ ಲೈಸೆನ್ಸ್‌ ಅವಧಿ ವಿಸ್ತರಿಸಬೇಕಿದ್ದ ಡಿಜಿಸಿಎ ಈ ಬಾರಿ ಕೇವಲ 1 ತಿಂಗಳ ಅವಧಿಗೆ ಮಾತ್ರ ಲೈಸೆನ್ಸ್‌ ಅವಧಿ ವಿಸ್ತರಿಸಿದೆ. ಲೈಸೆನ್ಸ್‌ ಅವಧಿ ಪೂರ್ಣಗೊಳ್ಳುವುದಕ್ಕೆ ಇನ್ನು 20 ದಿನಗಳು ಮಾತ್ರ ಬಾಕಿ ಉಳಿದಿದೆ.

ಲೈಸೆನ್ಸ್‌ ನವೀಕರಣದ ವೇಳೆ ಕೆಲವು ಕಾರಣ ನೀಡಿ ಲೈಸೆನ್ಸ್‌ ಅವಧಿಯನ್ನು ಕೇವಲ ಒಂದು ತಿಂಗಳಿಗೆ ವಿಸ್ತರಣೆ ಮಾಡಿದೆ. ಸೆ.23ಕ್ಕೆ ಈ ಅವಧಿ ಮುಗಿಯಲಿದೆ. ವಿಮಾನ ನಿಲ್ದಾಣ ಲೈಸೆನ್ಸ್ ಈ ತಿಂಗಳ 23ಕ್ಕೆ ಕೊನೆಯಾಗುತ್ತದೆ. ಸಣ್ಣಪುಟ್ಟ ತಾಂತ್ರಿಕ ತೊಂದರೆಗಳನ್ನು ಈಗಾಗಲೇ ಸರಿ ಪಡಿಸಲಾಗಿದೆ. ನೈಟ್ ಲ್ಯಾಂಡಿಂಗ್‌ಗೂ ಅನುಮತಿ ಸಿಕ್ಕಿದೆ. ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಬೇಕಾಗಿದೆ. ಯಾವುದೇ ವಿಮಾನ ನಿಲ್ದಾಣ ಪ್ರಾರಂಭವಾದಾಗ ಈ ರೀತಿಯ ಲೈಸೆನ್ಸ್ ನವೀಕರಣಗೊಳಿಸುವುದು ಸ್ವಾಭಾವಿಕ ಕ್ರಿಯೆಯಾಗಿದೆ ಎಂದರು.

Latest Videos

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಅಪಘಾತಗಳಿಗೆ ಬಿತ್ತು ಬ್ರೇಕ್‌!

ರಾಜ್ಯ ಸರ್ಕಾರದ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮವು (ಕೆಎಸ್‌ಐಐಡಿಸಿ) ಶಿವಮೊಗ್ಗ ವಿಮಾನ ನಿಲ್ದಾಣ ವನ್ನು ನಿರ್ವಹಿಸುತ್ತಿದೆ. ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಪರವಾನಗಿ ನೀಡುವಾಗ ಸುರಕ್ಷತೆ ಮತ್ತು ಭದ್ರತೆ ವಿಚಾರಗಳ ಬಗ್ಗೆ ಕೆಲವು ಷರತ್ತು ವಿಧಿಸಿತ್ತು. ಕೆಎಸ್‌ಐಐಡಿಸಿ ಸಂಸ್ಥೆಯು ಈ ಷರತ್ತುಗಳನ್ನು ಪೂರ್ತಿಯಾಗಿ ಪೂರೈ ಸಿಲ್ಲ. ಇದೇ ಕಾರಣಕ್ಕೆ ಈಗ ಡಿಜಿಸಿಎ ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್‌ ಅವಧಿಯನ್ನು ಕೇವಲ ಒಂದು ತಿಂಗಳಿಗೆ ನವೀಕರಿಸಿದೆ.

ಡಿಜಿಸಿಎ ನೀಡಿದ ಕಾರಣಗಳೇನು?: ವಿಮಾನ ನಿಲ್ದಾಣದ ರನ್‌ವೇ ಸುರಕ್ಷತಾ ಪ್ರದೇಶವು ಮಾನದಂಡಕ್ಕೆ ಅನುಗುಣವಾಗಿಲ್ಲ. ರಕ್ಷಣಾ ಸಾಧನಗಳ ಖರೀದಿ ವಿಳಂಬ ವಾಗಿದೆ. ಫೈರ್‌ ಸೇಫ್ಟಿ ನೋಡಿಕೊಳ್ಳುವ ಸಿಬ್ಬಂದಿ ಕೊರತೆ ಇದೆ. ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್‌ಟಿ) ಇಲ್ಲ. ಭದ್ರತಾ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಇವುಗಳನ್ನು ಪೂರೈಸಿದರೆ ಲೈಸೆನ್ಸ್‌ ನವೀಕರಣ ಮಾಡಲಾಗುತ್ತದೆ ಎಂದು ಡಿಜಿಸಿಎ ತಿಳಿಸಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗದಲ್ಲೆ ಎಸ್‌.ಐ.ಡಿ.ಬಿ.ಐ ಬ್ಯಾಂಕ್‌ ಶಾಖೆ ತೆರೆಯಲು ಕ್ರಮ ಶಿವಮೊಗ್ಗ: ಶಿವಮೊಗ್ಗದಲ್ಲಿ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಎಸ್.ಐ.ಡಿ.ಬಿ.ಐ.(ಭಾರತಿಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್) ಬ್ಯಾಂಕ್ ಶಾಖೆಯನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗದಲ್ಲಿ ಈಗಾಗಲೇ ಮೈಕ್ರೋ ಸಣ್ಣ ಕೈಗಾರಿಕೆಗಳ ಉದ್ಯಮ ಆರಂಭವಾಗಿದೆ. ಸುಮಾರು 21 ಸಾವಿರಕ್ಕೂ ಹೆಚ್ಚು ಸಣ್ಣ ಉದ್ಯಮಗಳಿಗೆ ಸುಮಾರು 2782 ಕೋಟಿ ರು. ಬಂಡವಾಳ ಹೂಡ ಲಾಗಿದೆ. 1.17 ಲಕ್ಷ ಜನರಿಗೆ ಉದ್ಯೋಗ ದೊರೆತಿದೆ. ಇದನ್ನು ಮತ್ತು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಎಸ್.ಐ.ಡಿ.ಬಿ.ಐ. ಬ್ಯಾಂಕ್ ಶಾಖೆಯನ್ನು ಆರಂಭಿಸಲಾಗುವುದು. ಇದರಿಂದ ಹೊಸದಾಗಿ ಉದ್ಯಮ ಪ್ರಾರಂಭಿಸುವವರಿಗೆ ಹಣಕಾಸಿನ ನೆರವು ಸುಲಭವಾಗಿ ಸಿಗುತ್ತದೆ ಎಂದರು.

ಈ ಬ್ಯಾಂಕ್ ಸ್ಥಾಪಿಸಲು ಅನುಮತಿ ಕೋರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡ ಲಾಗಿತ್ತು. ಮನವಿಗೆ ಸ್ಪಂದಿಸಿದ ಅವರು ಈಗಾಗಲೇ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಡಿಜಿಎಂ ಉಲಾಗಿಯನ್ ಅವರು ನಾಳೆ ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಮತ್ತು ಇಲ್ಲಿನ ಕೈಗಾರಿಕಾ ಪರಿಸ್ಥಿತಿ ಗಳ ಬಗ್ಗೆ ಅವಲೋಕನ ಮಾಡುತ್ತಾರೆ. ಖಂಡಿತಾ ಬ್ಯಾಂಕಿನ ಶಾಖೆಗೆ ಅನುಮತಿ ನೀಡುತ್ತಾರೆ ಎಂಬ ಭರವಸೆ ನನಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಾಲತೇಶ್, ರತ್ನಾಕರ ಶೆಣೈ, ಹರಿಕೃಷ್ಣ, ವಿನ್ಸೆಂಟ್ ರೋಡ್ರಿಗಸ್ ಇದ್ದರು.

7ರಿಂದ 8 ಕೋಟಿ ರೂಪಾಯಿ ಜಾಸ್ತಿ.. ಅಂತದ್ದರಲ್ಲಿ ರಜನಿಕಾಂತ್ 'ಕೂಲಿ' ಸಿನಿಮಾಗೆ ನಾಗಾರ್ಜುನ ಪಡೆದ ಸಂಭಾವನೆ ಇಷ್ಟೊಂದಾ?

ಪ್ರಮಾಣ ಮಾಡಲೂ ಸಿದ್ಧ: ಆಯನೂರು ಮಂಜುನಾಥ್ ಅವರು ನಿಮ್ಮ ಕುಟುಂಬದ ಬಗ್ಗೆ ಆರೋಪಗಳನ್ನು ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಯನೂರು ಮಂಜುನಾತ್ ಹಿರಿಯರು. ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ರೈತರಿಂದ ನಾವು ಜಮೀನು ಪಡೆದು ಒಂದೇ ಕಿಟಕಿಯ ಮೂಲಕ ಸೌಲಭ್ಯಗಳನ್ನು ಪಡೆಯಬಹುದು ಎಂಬ ಉದ್ದೇಶದಿಂದ ಕೆಐಎಡಿಬಿಗೆ ನಾವೇ ಹಸ್ತಾಂತರಿ ಸಿದ್ದೇವೆ. ಅದಕ್ಕೆ ಹಣವನ್ನು ಕೂಡ ಹೆಚ್ಚಿಗೆ ಕೊಟ್ಟಿದ್ದೇವೆ. ನಾವು ಯಾವುದೇ ಅವ್ಯವಹಾರ ಮಾಡಿಲ್ಲ. ಬೇಕಾದರೆ ಯಾವುದೇ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧ. ಅವರೂ ಮಾಡಲಿ ಎಂದರು.

click me!