ಒಬ್ಬ ರೈತನಿಗೆ ಪ್ರೋತ್ಸಾಹ ನೀಡಿದರೆ, 100 ಮಂದಿಗೆ ಉದ್ಯೋಗ ನೀಡುತ್ತಾನೆ. ಆ ಶಕ್ತಿ ರೈತನಿಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ನಗರದ ಜೆ.ಕೆ. ಮೈದಾನದ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ ನಡೆದ ರೈತ ದಸರಾ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದರು.
ಮೈಸೂರು (ಅ.21): ಒಬ್ಬ ರೈತನಿಗೆ ಪ್ರೋತ್ಸಾಹ ನೀಡಿದರೆ, 100 ಮಂದಿಗೆ ಉದ್ಯೋಗ ನೀಡುತ್ತಾನೆ. ಆ ಶಕ್ತಿ ರೈತನಿಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ನಗರದ ಜೆ.ಕೆ. ಮೈದಾನದ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ ನಡೆದ ರೈತ ದಸರಾ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿ, ಒಬ್ಬ ವ್ಯಕ್ತಿಗೆ ಸರ್ಕಾರ ಕೆಲಸ ಕೊಟ್ಟರೆ ಅವನು ತನ್ನ ಕುಟುಂಬವನ್ನು ಮಾತ್ರ ಮುನ್ನಡೆಸುತ್ತಾನೆ. ಅದೇ ಒಬ್ಬ ರೈತನಿಗೆ ಪ್ರೋತ್ಸಾಹ ಕೊಟ್ಟರೆ, ರೈತ ತನ್ನ ಕುಟುಂಬದ ಜೊತೆಗೆ 50 ಮಂದಿ ಕೆಲಸ ನೀಡುವಂತನಾಗುತ್ತಾನೆ ಎಂದು ಹೇಳಿದರು.
ಬರಗಾಲ, ಆರ್ಥಿಕ ಸಮಸ್ಯೆ, ನೀರಿನ ಸಮಸ್ಯೆ ಸೇರಿದಂತೆ ಯಾವುದೇ ತೊಂದರೆ ರೈತರಿಗೆ ಬಂದರೂ ರಾಜ್ಯ ಸರ್ಕಾರ ಸದಾ ರೈತರ ಜೊತೆಯಿದ್ದು ಪ್ರೋತ್ಸಾಹಿಸುವಂತಹ ಕೆಲಸ ಮಾಡಿಕೊಂಡು ಬರುತ್ತಿದೆ. ಈ ಬಾರಿ ಬರಗಾಲದಿಂದ ರೈತರಿಗೆ ವಿದ್ಯುತ್ ಸಮಸ್ಯೆ ಉಂಟಾಗಬಾರದದು ಎಂಬ ಕಾರಣಕ್ಕೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ರೈತರಿಗೆ ಸಹಾಯ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ರೈತರು ತಂತ್ರಜ್ಞಾನದಲ್ಲಿ ಮುಂದಿದ್ದಾರೆ. ದೇಶದಲ್ಲಿ ಶೆ.80 ಅಧಿಕ ಮಂದಿ ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಅದಕ್ಕೆ ಪ್ರಾಮುಖ್ಯತೆ ನೀಡುತ್ತಿಲ್ಲ. ರೈತರಿಗೆ ಯಾವುದೇ ಸಹಕಾರ ಬೇಕಾದರೂ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಭರವಸೆ ನೀಡಿದ್ದಾರೆ ಎಂದರು.
undefined
ತಪ್ಪು ಮಾಡಿದವರು ಅನುಭವಿಸಲೇಬೇಕು: ಡಿಕೆಶಿ ವಿರುದ್ಧ ಖೂಬಾ ಪರೋಕ್ಷ ವಾಗ್ದಾಳಿ
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್, ಶಾಸಕರಾದ ಕೆ. ಹರೀಶ್, ರಮೇಶ್ ಬಂಡಿಸಿದ್ದೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪ, ನಗರ ಪಾಲಿಕೆ ಸದಸ್ಯೆ ಪ್ರಮೀಳ ಭರತ್, ರೈತ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿ ಡಾ.ಎಂ. ಕೃಷ್ಣಂರಾಜು, ಕಾರ್ಯಾಧ್ಯಕ್ಷ ಡಾ.ಬಿ.ಎಸ್. ಚಂದ್ರಶೇಖರ್, ಸದಸ್ಯ ಕಾರ್ಯದರ್ಶಿ ಡಾ. ನಾಗರಾಜು, ಅಧ್ಯಕ್ಷ ಕೆ.ಪಿ. ಯೋಗೇಶ್, ಉಪಾಧ್ಯಕ್ಷರಾದ ಕೆ.ಎಸ್. ಮಾಲೇಗೌಡ, ಹೊನ್ನನಾಯಕ ಮೊದಲಾದವರು ಇದ್ದರು.
ಕಲೆಕ್ಷನ್‌ನಲ್ಲೂ ಸಿದ್ದು, ಡಿಕೆಶಿ ನಡುವೆ ತೀವ್ರ ಸ್ಪರ್ಧೆ: ಸದಾನಂದಗೌಡ
ರೋಗಮುಕ್ತ ಆಗಲು ಸಿರಿಧಾನ್ಯ ಸೇವಿಸಬೇಕು: ಸಮಾಜ ರೋಗಮುಕ್ತ ಆಗಬೇಕಾದರೆ ಸಿರಿಧಾನ್ಯಗಳನ್ನು ಸೇವಿಸಬೇಕು ಎಂದು ಸಿರಿಧಾನ್ಯ ತಜ್ಞ ಡಾ. ಖಾದರ್ ಸಲಹೆ ನೀಡಿದರು. ರೈತ ದಸರಾದಲ್ಲಿ ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಬಳಗೆ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದ ಅವರು, ಕಾರ್ಪೋರೆಟ್ ಕಂಪನಿಗಳು ನಮ್ಮ ಅಡುಗೆ ಮನೆಗೆ ಬೀಗ ಹಾಕಿಸುತ್ತಿದ್ದಾರೆ. ಆಹಾರದ ವೈಜ್ಞಾನಿಕ ವ್ಯವಸ್ಥೆಯನ್ನು ಕಾರ್ಪೋರೇಟ್ ಕಂಪನಿಗಳು ನಿರ್ಮೂಲನೆ ಮಾಡುತ್ತಿವೆ. ಹೋಟೆಲ್ ಊಟ ಮಾಡುತ್ತಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು. ಸಿರಿಧಾನ್ಯವನ್ನು ಸೇವಿಸುತ್ತಾ ಬಂದರೆ ದೇಹದ ಕಲ್ಮಶಗಳು ಹೊರಬಂದು ಸದೃಢ ಆರೋಗ್ಯವಂತ ವ್ಯಕ್ತಿಯನ್ನಾಗಿ ಮಾಡುತ್ತದೆ. ಸಿರಿಧಾನ್ಯ ಯಾವುದೇ ಕಾರಣಕ್ಕೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲ್ಲ. ಸಿರಿಧಾನ್ಯಗಳನ್ನು ಮನುಷ್ಯ ಸಾವಿರಾರು ವರ್ಷಗಳಿಂದ ಸೇವಿಸುತ್ತಾ ಬಂದಿದ್ದಾನೆ ಎಂದು ಅವರು ಹೇಳಿದರು.