'ಟಿಕೆಟ್‌ ಸಿಕ್ಕಿದ್ರೆ BJPಯಿಂದ, ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ'..!

By Kannadaprabha NewsFirst Published Jan 17, 2020, 8:32 AM IST
Highlights

ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಟಿಕೆಟ್‌ ನೀಡಿದರೆ ಬಿಜೆಪಿಯಿಂದ ಇಲ್ಲವಾದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಸ್ಪರ್ಧಾ ವಿಜೇತ ಐಎಎಸ್‌, ಕೆಎಎಸ್‌ ಕೆರಿಯರ್‌ ಅಕಾಡೆಮಿ ನಿರ್ದೇಶಕ ಡಾ.ಕೆ.ಎಂ.ಸುರೇಶ್‌ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ(ಜ.17): ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಟಿಕೆಟ್‌ ನೀಡಿದರೆ ಬಿಜೆಪಿಯಿಂದ ಇಲ್ಲವಾದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಸ್ಪರ್ಧಾ ವಿಜೇತ ಐಎಎಸ್‌, ಕೆಎಎಸ್‌ ಕೆರಿಯರ್‌ ಅಕಾಡೆಮಿ ನಿರ್ದೇಶಕ ಡಾ.ಕೆ.ಎಂ. ಸುರೇಶ್‌ ತಿಳಿಸಿದ್ದಾರೆ

ಶಿಕ್ಷಣ ಕ್ಷೇತ್ರದಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಉಪನ್ಯಾಸಕನಾಗಿ, ಸಂಶೋಧಕನಾಗಿ ಮತ್ತು ಪ್ರಾಂಶುಪಾಲನಾಗಿ ಕಾರ್ಯನಿರ್ವಹಿಸಿದ್ದೇನೆ. ಬೆಂಗಳೂರಿನ ವಿಜಯನಗರದಲ್ಲಿ ಸ್ಪರ್ಧಾ ವಿಜೇತ ಸಂಸ್ಥೆ ಸ್ಥಾಪಿಸಿ, ಎಲ್ಲ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಹುದ್ದೆಗಳಿಗೆ ಅನುಕೂಲವಾಗುವಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಗಾರ ನಡೆಸಲಾಗುತ್ತಿದೆ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

ಶಂಕುಸ್ಥಾಪನೆಯಾಗದ ಕಾಮಗಾರಿಗೇ ಬಿಲ್‌..! ಬಯಲಾಯ್ತು ಅಧಿಕಾರಿಗಳ ವಂಚನೆ

ಖಾಸಗಿ ಶಾಲೆಯಷ್ಟೇ ಸರ್ಕಾರಿ ಶಾಲೆಗಳ ಗುಣಮಟ್ಟಹೆಚ್ಚಿಸುವುದು, ಕೆಎಎಸ್‌ ಪ್ರತಿ ವರ್ಷ ನೇಮಕಾತಿಗೆ ಮತ್ತು ಕೆಎಎಸ್‌ ಮುಖ್ಯ ಪರೀಕ್ಷೆಗೆ ಶಿಕ್ಷಣ ಐಚ್ಛಿಕ ವಿಷಯವಾಗಿ ಸೇರ್ಪಡೆಗೆ ಪ್ರಯತ್ನಿಸುವುದು, ಪದವಿ ತರಗತಿಗಳಲ್ಲಿ ಕೌಶಲ್ಯ ಆಧರಿತ ವಿಷಯಗಳ ಸೇರ್ಪಡೆಗೆ ಪ್ರಾಮಾಣಿಕ ಪ್ರಯತ್ನ ಶ್ರಮಿಸಲಾಗುವುದು ಎಂದು ಹೇಳಿದ್ದಾರೆ.

ಗುಂಡ್ಲುಪೇಟೆಯಲ್ಲಿ ಅಡಗಿದ್ದಾರಾ ಉಗ್ರರು, ತರಬೇತಿಗೆ ಸ್ಥಳೀಯರ ಬಳಕೆ..?

click me!