ಕಂಡಕ್ಟರ್ ಟಿಕೆಟ್ ಕೊಡ್ತಿಲ್ವಾ..? ಹಾಗಾದ್ರೆ ಉಚಿತವಾಗಿ ಪ್ರಯಾಣಿಸಿ ಅಂತ ಮಂಗಳೂರಿನ ಬಸ್ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ. ಇನ್ನೂ ಕಂಡಕ್ಟರ್ ತಕರಾರು ಮಾಡಿದ್ರೆ ದೂರು ನೀಡಿ ಅಂತ ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಹೇಳಿದ್ದಾರೆ.
ಮಂಗಳೂರು(ಅ.05): ನಗರದಲ್ಲಿ ಸಂಚರಿಸುವ ನಗರ ಸಾರಿಗೆ ಸೇರಿದಂತೆ ಗ್ರಾಮಾಂತರ ಸಾರಿಗೆ ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್ ನೀಡುವುದಿಲ್ಲವೇ? ಚಿಂತೆ ಬೇಡ, ನಿರ್ವಾಹಕರು ಟಿಕೆಟ್ ನೀಡದಿದ್ದರೆ, ಪ್ರಯಾಣ ದರವನ್ನು ನೀಡದೆ ಉಚಿತವಾಗಿ ಪ್ರಯಾಣಿಸಿ ಎಂದು ನಗರ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷರು ಹೇಳಿದ್ದಾರೆ.
ಒಂದು ವೇಳೆ ಇದಕ್ಕೂ ನಿರ್ವಾಹಕ ಆಕ್ಷೇಪಿಸಿ ಪ್ರಯಾಣಿಕರಿಗೆ ಕಿರುಕುಳ ನೀಡಲು ಮುಂದಾದರೆ, ಬಸ್ ಮಾಲೀಕರ ಸಂಘದ ವಾಟ್ಸ್‌ಆ್ಯಪ್ ನಂಬರಿಗೆ ಬಸ್ ನಂಬರು ಸಹಿತ ದೂರು ನೀಡಿ, ಮುಂದೆ ನಾವು ನೋಡಿಕೊಳ್ಳುತ್ತೇವೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಹೇಳಿದ್ದಾರೆ.
ಖಡಕ್ ಎಚ್ಚರಿಕೆ:
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ನಗರದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಟಿಕೆಟ್ ನೀಡದೆ ಬೇಕಾಬಿಟ್ಟಿಹಣ ವಸೂಲಿ ಮಾಡುತ್ತಿರುವ ಬಗ್ಗೆ ಕೇಳಿಬಂದ ದೂರುಗಳಿಂದ ರೋಸಿಹೋದ ಕಮಿಷನರ್ ಡಾ.ಪಿ.ಎಸ್.ಹರ್ಷ ಅವರು ನೀಡಿದ ಎಚ್ಚರಿಕೆ ಇದು.
ಮೋದಿಯದ್ದು ಹಿಟ್ಲರ್ ಆಡಳಿತ: ಸಿದ್ದರಾಮಯ್ಯ ವಾಗ್ದಾಳಿ
ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ನಿರ್ವಾಹಕರು ಟಿಕೆಟ್ ನೀಡದೆ ಪ್ರಯಾಣ ದರ ಪಡೆಯುವಂತಿಲ್ಲ. ಈ ಬಗ್ಗೆ ಸಾಕಷ್ಟುಬಾರಿ ಬಸ್ ಮಾಲೀಕರ ಸಂಘಟನೆ ಮೂಲಕ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಆದರೂ ಕೆಲವು ಬಸ್‌ಗಳ ನಿರ್ವಾಹಕರು ಟಿಕೆಟ್ ನೀಡದೆ ಪ್ರಯಾಣಿಕರಿಗೆ ತೊಂದರೆ ನೀಡುತ್ತಿರುವ ವಿಚಾರ ಸಾಕಷ್ಟುಬಾರಿ ಫೋನ್ ಇನ್‌ನಲ್ಲಿ ಪ್ರಸ್ತಾಪಗೊಂಡಿದೆ. ಇದಕ್ಕೆ ಇತಿಶ್ರೀ ಹಾಕಬೇಕು ಎಂದು ಸೂಚಿಸಿದ ಕಮಿಷನರ್ ಡಾ.ಹರ್ಷ, ಸಾರ್ವಜನಿಕ ಪ್ರಯಾಣಿಕರು ಕೂಡಾ ಟಿಕೆಟ್ ಪಡೆದೇ ಹಣವನ್ನು ನೀಡಬೇಕು. ಒಂದು ವೇಳೆ ನಿರ್ವಾಹಕರು ಟಿಕೆಟ್ ನೀಡದಿದ್ದರೆ ಅಥವಾ ಈ ಬಗ್ಗೆ ತಗಾದೆ ಎತ್ತಿದರೆ 7996999977 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ದೂರು ನೀಡಿ. ಈ ಬಗ್ಗೆ ಸಂಘದ ಮುಖ್ಯಸ್ಥರು ಸಂಬಂಧಪಟ್ಟನಿರ್ವಾಹಕರು ಹಾಗೂ ಬಸ್‌ನ ಮಾಲೀಕರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೆ. ಅದಕ್ಕೂ ಬೆಲೆ ನೀಡದಿದ್ದರೆ, ಬಸ್ ಸಂಘಟನೆಗಳು, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೇರಿ ಜಂಟಿಯಾಗಿ ಕಾರ್ಯಾಚರಣೆ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸಾಂಪ್ರದಾಯಿಕ ವರ್ಸಸ್ ಪ್ರವಾಸೋದ್ಯಮ ದಸರಾ
ಡಿಸಿಪಿಗಳಾದ ಅರುಣಾಂಗ್ಶು ಗಿರಿ, ಲಕ್ಷ್ಮೇ ಗಣೇಶ್, ಸಂಚಾರಿ ಎಸಿಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ರಾದ ವಿನಯ ಗಾಂವ್ಕರ್, ಎಸ್‌ಐಗಳಾದ ಅಮಾನುಲ್ಲಾ, ಗೋಪಾಲಕೃಷ್ಣ ಭಟ್ ಇದ್ದರು.
ಅಪಘಾತ ಸಾವಿಗೆ ಅವೈಜ್ಞಾನಿಕ ರಸ್ತೆ ಕಾಮಗಾರಿ: ಕೇಸ್ ದಾಖಲು!
ಮಂಗಳೂರು ನಗರ ವ್ಯಾಪ್ತಿಯ ರಸ್ತೆಯೊಂದು ಅಸಮರ್ಪಕವಾಗಿದ್ದ ಕಾರಣ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಘಟನೆಗೆ ಸಂಬಂಧಿಸಿ ಮಂಗಳೂರು ಪೊಲೀಸರು ರಸ್ತೆ ಕಾಮಗಾರಿ ನಡೆಸಿದವರ ವಿರುದ್ಧ ಕೇಸು ದಾಖಲಿಸಿಕೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಪತ್ರಕರ್ತರಿಗೆ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆಗೆ ಕಿಟ್!
ಕಾವೂರು- ಕೆಂಜಾರು ರೈಲ್ವೆ ಕ್ರಾಸ್ ಬಳಿ ಇತ್ತೀಚೆಗೆ ನಡೆದ ಅಪಘಾತವೊಂದರಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈಗಿನ ಹೊಸ ಮೋಟಾರು ವಾಹನ ಕಾಯ್ದೆಯಡಿ ನಗರದ ಅಸಮರ್ಪಕ ರಸ್ತೆ ಕಾಮಗಾರಿಯಿಂದ ರಸ್ತೆ ಅಪಘಾತದಲ್ಲಿ ಸಾವು ನೋವುಗಳಿಗೆ ಕಾರಣವಾದರೆ ಪ್ರಕರಣ ದಾಖಲಿಸಬಹುದಾಗಿದೆ. ರೈಲ್ವೆ ಇಲಾಖೆಯ ಕಮಾನು ತುದಿಯೊಂದು ರಸ್ತೆಯಲ್ಲೇ ಹಾಕಲಾಗಿದ್ದು, ಅದಕ್ಕೆ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದರು. ಈ ರಸ್ತೆ ತಿರುವಿನಲ್ಲಿ ಸೂಕ್ತ ಸೂಚನಾ ಫಲಕಗಳೂ ಇರಲಿಲ್ಲ. ಈ ಬಗ್ಗೆ ತಜ್ಞರ ಜೊತೆ ಸಮಾಲೋಚನೆ ನಡೆಸಿ ನ್ಯಾಯಾಲಯ ನಿರ್ಧಾರ ಕೈಗೊಳ್ಳಲಿದೆ. ಈ ಕಾಯ್ದೆಯಲ್ಲಿ ಒಂದು ಲಕ್ಷ ರು.ವರೆಗೆ ತಂಡ ವಿಧಿಸುವ ಅವಕಾಶ ನ್ಯಾಯಾಲಯಕ್ಕಿದೆ ಎಂದು ಪೊಲೀಸ್ ಆಯುಕ್ತ ಡಾ. ಹರ್ಷ ತಿಳಿಸಿದರು.
ಠಾಣೆಗಳ ಸುತ್ತ ಹಣ್ಣು ಹಂಪಲು ಗಿಡ!
ಫೋನ್ ಇನ್ ಕಾರ್ಯಕ್ರಮದಲ್ಲಿ ಸುಂದರ್ ಸಾಲ್ಯಾನ್ ಎಂಬವರು ಕರೆ ಮಾಡಿ, ಮಂಗಳಾ ಕ್ರೀಡಾಂಗಣದ ಸುತ್ತಮುತ್ತ ಹಣ್ಣು ಹಂಪಲಿನ ಗಿಡಗಳನ್ನು ನೆಡುವ ಮೂಲಕ ಹಸುರೀಕರಣಗೊಳಿಸಬೇಕು ಎಂದು ಸಲಹೆ ನೀಡಿದರು.
ವಿದ್ಯುತ್ ದೀಪಾಲಂಕಾರದಲ್ಲಿ ಜಗಮಗಿಸುತ್ತಿದೆ KRS
ಈ ಬಗ್ಗೆ ಆಸಕ್ತಿ ತೋರಿಸಿದ ಆಯುಕ್ತ ಡಾ. ಹರ್ಷ, ಬೆಂಗಳೂರಿನಲ್ಲಿ ನನ್ನ ಮನೆಯ ಆವರಣದಲ್ಲಿ ಸಿಂಗಾಪುರ ಚೆರಿ ಹಣ್ಣಿನ ಗಿಡ ನೆಡಲಾಗಿದೆ. ಆ ಮರವೊಂದರಲ್ಲೇ ಈಗ 35 ವಿಧದ ಹಕ್ಕಿಗಳು ಬರಲಾರಂಭಿಸಿವೆ ಎಂದರು. ಪೊಲೀಸ್ ಠಾಣೆಗಳ ಸುತ್ತಲೂ ಹಸುರೀಕರಣದಡಿ ಹಣ್ಣು ಹಂಪಲುಗಳ ಗಿಡಗಳಿಗೆ ಒತ್ತು ನೀಡುವ ಮೂಲಕ ಸಾಕಷ್ಟುವಿಧದ ಪಕ್ಷಿಗಳಿಗೆ ಆಶ್ರಯದ ಜೊತೆಗೆ ಆಹಾರವನ್ನು ಒದಗಿಸಲು ಸಾಧ್ಯವಾಗಲಿದೆ. ಮಹಾನಗರ ಪಾಲಿಕೆ ಈ ಮೂಲಕ ಈ ಕಾರ್ಯಕ್ಕೆ ಸಲಹೆ ನೀಡಲಾಗುವುದು. ಸ್ಮಾರ್ಟ್‌ಸಿಟಿ ಯೋಜನೆಯಡಿ ಈ ಕಾರ್ಯವನ್ನು ಕೈಗೊಳ್ಳಬಹುದು ಎಂದು ಅವರು ಹೇಳಿದರು.