ಕಾಡು ಪ್ರಾಣಿಗಳ ಬೇಟೆಗೆ ಹೊಂಚು ಹಾಕಿ ಕುಳಿತಿದ್ದ 6 ಮಂದಿ ಅರೆಸ್ಟ್ ಆಗಿದ್ದಾರೆ.
ರಾಮನಗರ[ಅ.05]: ವನ್ಯ ಜೀವಿ ಬೇಟೆಗೆ ಹೊಂಚು ಹಾಕಿ ಕುಳಿತಿದ್ದ 6 ಮಂದಿ ಬೇಟೆಗಾರರನ್ನು ಅರಣ್ಯಾಧಿಕಾರಿಗಳು ಬಂಧಿಸಿ ಜೈಲಿಗಟ್ಟಿರುವ ಪ್ರಕರಣ ತಾಲೂಕಿನ ಕಸಬಾ ಹೋಬಳಿ, ಅರೇಹಳ್ಳಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕೇಗೌಡನದೊಡ್ಡಿ ಗ್ರಾಮದ ಪುಟ್ಟಮಾದ, ಶೇಖರ್ , ಈರ, ಕೆಂಚ, ತಮ್ಮಯ್ಯ, ರಾಮಗಿರಿ ಕಾಲೋನಿಯ ಕಬ್ಬಾಳ ಬಂಧಿತ ಆರೋಪಿಗಳು. ಬಂಧಿತರಿಂದ ಆರು ದ್ವಿಚಕ್ರ ವಾಹನ, ಎರಡು ಒಂಟಿ ನಾಳ ಬಂದೂಕು ಸಮೇತ ಬಂಧಿಸಲಾಗಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಬಂದೂಕು ಹಿಡಿದು ಆರು ಬೈಕ್‌ಗಳಲ್ಲಿ ಅರಣ್ಯ ಪ್ರವೇಶಿಸಿ ಬೇಟೆಯಾಡಲು ಹೊಂಚುಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಆರೋಪಿಗಳ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಡಿಸಿಎಫ್ ದೇವರಾಜು, ಎಸಿಎಫ್ ಎಂ.ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಧಾಳೇಶ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಉಪ ವಲಯ ಅರಣ್ಯಾಧಿಕಾರಿ ವಾಸು, ಕೆ. ರಾಜು, ಅರಣ್ಯ ರಕ್ಷಕರಾದ ಶ್ರೀನಿವಾಸ್, ರವಿ, ನಾರಾಯಣ, ಪ್ರಕಾಶ್, ಮಂಜುನಾಥ್, ಚಂದ್ರು ಇದ್ದರು.