ನೆಲಮಂಗಲ ಅಪಘಾತದಲ್ಲಿ ಚಂದ್ರಮ್ ಕುಟುಂಬದ ದುರಂತ ಸಾವು: ಐಟಿ ಕಂಪನಿಯಲ್ಲಿ ನೀರವ ಮೌನ!

By Kannadaprabha News  |  First Published Dec 22, 2024, 8:37 AM IST

ಚಂದ್ರಮ್ ಅವರು ತುಂಬ ಒಳ್ಳೆಯ ವ್ಯಕ್ತಿ. ಪ್ರತಿದಿನ ಕಚೇರಿಗೆ ಬರ್ತಾ ಇದ್ರು. ತುಂಬ ಫ್ರೆಂಡ್ಲಿ ವ್ಯಕ್ತಿ. ಘಟನೆಯಿಂದ ತುಂಬ ಬೇಜಾರಾಗ್ತಿದೆ. ನಿನ್ನೆ ಕೂಡ ಕಚೇರಿಗೆ ಬಂದು ಹೋಗಿದ್ರು. ಊರಿಗೆ ಹೋಗ್ತಿದ್ರು ಅನ್ಸುತ್ತೆ. ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಅಳಲು ತೋಡಿಕೊಂಡ ಐಎಎಸ್‌ಟಿ ಉದ್ಯೋಗಿ ದಿವಾಕರ್ 
 


ದಾಬಸ್‌ಪೇಟೆ(ಡಿ.22):  ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ನೆಲಮಂಗಲದ ಬಳಿ ಶನಿವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವೋಲ್ಲೋ ಕಾರು ಕಂಟೇನರ್‌ ಕೆಳಗೆ ಬಿದ್ದು ಐಟಿ ಕಂಪೆನಿ ಮಾಲೀಕ ಸೇರಿದಂತೆ ಕುಟುಂಬದ 6 ಜನ ಮೃತಪಟ್ಟಿರುವ ಘಟನೆ ಸಂಭವಿಸಿದೆ. 

ರಾಷ್ಟ್ರೀಯ ಹೆದ್ದಾರಿ 48ರ ತಿಪ್ಪಗೊಂಡನ ಹಳ್ಳಿ-ತಾಳೇಕೆರೆ ಗೇಟ್ ಮಧ್ಯೆ, ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದ ಚಂದ್ರಮ್ ಯೇಗಪ್ಪಗೋಳ(48), ಗೌರಬಾಯಿ(42), ಜಾನ್(16) ದೀಕ್ಷಾ(12) ವಿಜಯಲಕ್ಷ್ಮೀ(36) ಮೃತಪಟ್ಟ ದುರ್ದೈವಿಗಳು. ಇವರೆಲ್ಲರೂ ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆ ಯಲ್ಲಿ ವಾಸವಾಗಿದ್ದರು. ಚಂದ್ರಮ್ ಐಎಎಸ್‌ಟಿ ಸಾಫ್ಟ್‌ವೇರ್‌ ಸಲ್ಯೂಷನ್ ಕಂಪೆನಿ ನಡೆಸುತ್ತಿದ್ದರು. 

Tap to resize

Latest Videos

undefined

Nelamangala Accident: ಮುಂದಿದ್ದ ಕಾರ್‌ನಿಂದ ಹೀಗೆ ಆಯ್ತು, ನನಗೆ ತುಂಬಾ ನೋವು ಆಗ್ತಿದೆ: ಚಾಲಕ ಆರಿಫ್‌

ಉದ್ಯೋಗಿಗಳ ಚೆನ್ನಾಗಿ ನೋಡ್ಕೊಳ್ತಿದ್ರು: 

ಐಎಎಸ್‌ಟಿ ಉದ್ಯೋಗಿ ದಿವಾಕರ್ ಮಾತನಾಡಿ, ಚಂದ್ರಮ್ ಅವರು ತುಂಬ ಒಳ್ಳೆಯ ವ್ಯಕ್ತಿ. ಪ್ರತಿದಿನ ಕಚೇರಿಗೆ ಬರ್ತಾ ಇದ್ರು. ತುಂಬ ಫ್ರೆಂಡ್ಲಿ ವ್ಯಕ್ತಿ. ಘಟನೆಯಿಂದ ತುಂಬ ಬೇಜಾರಾಗ್ತಿದೆ. ನಿನ್ನೆ ಕೂಡ ಕಚೇರಿಗೆ ಬಂದು ಹೋಗಿದ್ರು. ಊರಿಗೆ ಹೋಗ್ತಿದ್ರು ಅನ್ಸುತ್ತೆ. ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಅಳಲು ತೋಡಿಕೊಂಡರು. "ತಾಳೇಕೆರೆ ಸಮೀಪ ಸಂಭವಿಸಿರುವ ರಸ್ತೆ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲೂ ಸೆರೆಯಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಕಂಟೇನರ್‌ ಚಾಲಕ ಆರಿಫ್ ನೆಲಮಂಗಲದಲ್ಲಿ ಅಪಘಾತದ ವಿವರ ನೀಡಿದ್ದಾರೆ. 

ದಾಬಸ್‌ಪೇಟೆಯಿಂದ 'ಬೆಂಗಳೂರಿನ ಬೈಪಾಸ್ ಕಡೆಗೆ ಬರುತ್ತಿದ್ದೆ. ಈ ವೇಳೆ ನನ್ನ ಎದುರುಗಡೆ ನಾನು ಗಾಡಿ ನೋಡಿ ನಿಧಾನವಾಗಿ ಬ್ರೇಕ್ ಹಾಕುತ್ತಲೇ ಹೋದೆ. ನನ್ನ ಎದುರಿಗೆ ಇದ್ದ ಕಾರಿನವರು ದಿಢೀರ್ ಬ್ರೇಕ್ ಹಾಕಿದರು. ನನ್ನ ಮುಂದಿದ್ದ ಕಾರಿಗೆ ಗುದ್ದಬಾರದು. ಅವನನ್ನು ಸೇಫ್ ಮಾಡಲು ಹೋಗಿ, ಸ್ಟೇರಿಂಗ್ ಬಲಗಡೆಗೆ ಎಳೆದುಕೊಂಡೆ. ಈ ವೇಳೆ ಇನ್ನೊಂದು ಕಡೆಯಿಂದಲೂ ದೊಡ್ಡ ಕ್ಯಾಂಟರ್‌ ಬರುವುದನ್ನು ನೋಡಿದೆ. ಟ್ರಕ್‌ಗೆ ಗುದ್ದಬಾರದು ಎಂದು ಮತ್ತೊಮ್ಮೆ ಸ್ಟೇರಿಂಗ್ ಲೆಪ್ಪಗೆ ಎಳೆದುಕೊಂಡೆ. ಈ ವೇಳೆ ಲಾರಿ ಡಿವೈಡ ರ್‌ ದಾಟಿ ಮುಂದಿನ ರಸ್ತೆಗೆ ಪಲ್ಟಿ ಹೊಡೆಯಿತು. ಕಾರಿನ ಮೇಲೆ ನನ್ನ ಲಾರಿ ಪಲ್ಟಿಯಾಗಿತ್ತು. ನಾನು ಕಾರನ್ನ ಬಚಾವ್ ಮಾಡಲು ಹೋದೆ. ಮುಂದೆ ಡಿವೈಡರ್ ಮೇಲೆ ಹತ್ತಿ ಲಾರಿ ಪಲ್ಟಿ ಆಯ್ತು, ಮುಂದೆ ಕಾರ್ ಮತ್ತೆ ಕಂಟೇನರ್ ಇತ್ತು. ಕಂಟೇನರ್ ಟಚ್ ಆಗಿ ನನ್ನ ಲಾರಿ ಪಲ್ಟಿ ಹೊಡೆದಿದೆ. 6 ಮಂದಿ ಮೃತಪಟ್ಟಿರುವುದು ನನಗೆ ಗೊತ್ತಿಲ್ಲ ಎಂದು ನೋವು ತೋಡಿಕೊಂಡರು. 

ಬೇಸರ ವ್ಯಕ್ತಪಡಿಸಿದ ವೋಲ್ವೋ ಕಂಪನಿ: 

ಬೆಂಗಳೂರು ಮಾರ್ಟಿಯಲ್ ವೋಲ್ವೋ ಕಾರ್ಸ್ ಶೋ ರೂಮ್‌ನಲ್ಲಿ ಅವರು ವೋಲ್ವೋ ಎಕ್ಸ್‌ಇ 90 ಕಾರು ಖರೀದಿ ಮಾಡಿದ್ದರು. ಇದರ ವಿಡಿಯೋವನ್ನು ಮಾರ್ಟಿಯಲ್ ವೋಲ್ವೋ ಕಾರ್ಸ್ ನವೆಂಬರ್ 5ರಂದು ತನ್ನ ಇನ್ಸಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋಗೆ ಸಾಕಷ್ಟು ಮಂದಿ ಆರ್‌ಐಪಿ ಎಂದು ಕಾಮೆಂಟ್ ಮಾಡಿದ್ದಾರೆ. ಇಷ್ಟು ಸಂಭ್ರಮದಲ್ಲಿ ಕಾರು ಖರೀದಿಸಿದ್ದ ನಿಮ್ಮ ಕುಟುಂಬದ ಸಾವು ಈ ರೀತಿ ಆಗಿದ್ದಕ್ಕೆ ಬೇಸರವಿದೆ ಎಂದು ಬರೆದಿದ್ದಾರೆ. 

ವೋಲ್ವೋ ಕಾರಿನ ಮೇಲೆ ಕಂಟೇನರ್ ಮಗುಚಿದ ಪ್ರಕರಣ: ಕಾರಿನಲ್ಲಿ ಜಾಗ ಸಿಗದೆ ಬಚಾವ್ ಆದ ವೀಣಾ

ತಪ್ಪಿತಸ್ಥರ ವಿರುದ್ಧ ಕ್ರಮ: 

ಘಟನಾ ಸ್ಥಳಕ್ಕೆ ಭೇಟಿ ಬಳಿಕ ಕೇಂದ್ರ ವಲಯ ಐಜಿಪಿ ಲಾಬೂ ರಾಮ್ ಮಾತನಾಡಿ, ವೋಲ್ವೋ ಕಾರಿನಲ್ಲಿ ತೆರಳುತ್ತಿದ್ದ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅಪಘಾತದ ಸಂಬಂಧ ಇಡೀ ಪ್ರಕರಣದ ತನಿಖೆ ನಡೆಸಲು ಪೊಲೀಸ್ ಇಲಾಖೆ ವಿಶೇಷ ತನಿಖಾಧಿಕಾರಿಯಾಗಿ ನೆಲಮಂಗಲ ಉಪವಿಭಾಗದ ಉಪ ಅಧೀಕ್ಷಕ ಜಗದೀಶ್ ಅವರನ್ನು ನೇಮಕ ಮಾಡಿದೆ.

ಶುಕ್ರವಾರ ರಾತ್ರಿ ಮೀಟಿಂಗ್ ಮಾಡಿದ್ದ ಚಂದ್ರಮ್ 

ಇತ್ತೀಚೆಗೆ ಚಂದ್ರಮ್ ಅವರು ಹೊಸ ಆಫೀಸ್ ತೆರೆಯುವ ಸಿದ್ಧತೆಯಲ್ಲಿದ್ದರು. ಶುಕ್ರವಾರ ರಾತ್ರಿ ಸಿಬ್ಬಂದಿ ಜೊತೆ ಮೀಟಿಂಗ್ ಮಾಡಿದ್ದ ಚಂದ್ರಮ್ ಅವರು, ಕೆಲ ದಿನಗಳು ನಾನು ಬರೋದಿಲ್ಲ ಎಂದು ಹೇಳಿ ಹೋಗಿದ್ದರು. ಆದರೆ ಯಾವತ್ತೂ ವಾಪಸ್ ಬರದೇ ಇರುವ ಲೋಕಕ್ಕೆ ಹೋಗುತ್ತಾರೆಂದು ಭಾವಿಸಲಿಲ್ಲ ಎಂದು ಕಂಪನಿಯ ಸಿಬ್ಬಂದಿಯೊಬ್ಬರು ತಿಳಿಸಿದರು.

click me!