ಒಂದೇ ತಿಂಗಳಲ್ಲಿ ಶರತ್ ಎತ್ತಂಗಡಿ :ಮೈಸೂರು ನೂತನ DCಯಾಗಿ ರೋಹಿಣಿ ಸಿಂಧೂರಿ :

By Kannadaprabha NewsFirst Published Sep 29, 2020, 10:44 AM IST
Highlights

ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಲಾಗಿದ್ದು, ಅಲ್ಲಿನ ಜಿಲ್ಲಾಧಿಕಾರಿ ಶರತ್ ಅವರನ್ನು ಒಂದೇ ತಿಂಗಳಿಗೆ ಎತ್ತಂಗಡಿ ಮಾಡಲಾಗಿದೆ.

ಮೈಸೂರು (ಸೆ.29): ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರಾಗಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಆರು ಮಂದಿ ಐಎಎಸ್‌ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. 

ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. 

ಅಭಿರಾಮ್ ಶಂಕರ್ ವರ್ಗಾವಣೆ ಬಳಿಕ ಮೈಸೂರು ಜಿಲ್ಲಾಧಿಕಾರಿಯಾಗಿ ಶರತ್ ಅವರನ್ನು ನೇಮಕ ಮಾಡಲಾಗಿತ್ತು. ಆಗಸ್ಟ್ 29 ರಂದು ಶರತ್ ಅಧಿಕಾರ ವಹಿಸಿಕೊಂಡಿದ್ದರು. 

ದಕ್ಷ, ಪ್ರಾಮಾಣಿಕ, ಖಡಕ್ ಅಧಿಕಾರಿ, ಲವಿಂಗ್ ಅಮ್ಮ ರೋಹಿಣಿ ಸಿಂಧೂರಿ

ಆದರೆ ಇದೀಗ ಒಂದೇ ತಿಂಗಳಲ್ಲಿ ಶರತ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಅವರಿಗೆ ಯಾವುದೇಜಾಗ ತೋರಿಸಿಲ್ಲ.

6 ಅಧಿಕಾರಿಗಳ ವರ್ಗ

ಬಿಬಿಎಂಪಿ ವಿಶೇಷ ಆಯುಕ್ತರನ್ನಾಗಿ (ಆಡಳಿತ) ಜೆ.ಮಂಜುನಾಥ್‌, ಬೆಂಗಳೂರು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಪಿ.ರಾಜೇಂದ್ರ ಚೋಳನ್‌, ಬಿಬಿಎಂಪಿ ವಿಶೇಷ ಅಧಿಕಾರಿಯಾಗಿ (ಎಸ್ಟೇಟ್ಸ್‌) ಹೆಪ್ಸಿಬಾ ರಾಣಿ ಕೊರ್ಲಪಟಿ, ಕೋಲಾರ ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ಎಂ.ಆರ್‌.ರವಿಕುಮಾರ್‌ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪಿ.ಶಿವಶಂಕರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

click me!