ಬೆಂಗಳೂರು : ಸೋಂಕಿತರು, ಮೃತರ ಸಂಖ್ಯೆ ಏಕಾಏಕಿ ಭಾರೀ ಇಳಿಕೆ

By Kannadaprabha News  |  First Published Sep 29, 2020, 8:47 AM IST

ಕೊರೋನಾ ಸೋಂಕು ಅಟ್ಟಹಾಸದ ಬೆನ್ನಲ್ಲೇ ಬೆಂಗಳೂರಿಗರಿಗೆ ಇದು ಭರ್ಜರಿ ಗುಡ್ ನ್ಯೂಸ್ .. ನಗರದಲ್ಲಿ ಸೋಂಕಿನ ಪ್ರಮಾಣ ಭಾರೀ ಇಳಿಕೆಯಾಗಿದೆ


ಬೆಂಗಳೂರು (ಸೆ.29): ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಏಕಾಏಕಿ ಕೊರೋನಾ ಸೋಂಕಿತರ ಪತ್ತೆ ಹಾಗೂ ಮೃತ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಸೋಮವಾರ 2,722 ಹೊಸ ಕೊರೋನಾ ಸೋಂಕಿತರು ಪತ್ತೆಯಾದರೆ 9 ಮಂದಿ ಮೃತಪಟ್ಟವರದಿಯಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಹೊಸ ಸೋಂಕು ಪ್ರಕರಣ ಪತ್ತೆಯಾಗುತ್ತಿದ್ದವು. ಆದರೆ, ಸೋಮವಾರ ಸೋಂಕು ಪತ್ತೆ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದ್ದು, ಮೂರು ಸಾವಿರಕ್ಕಿಂತ ಕಡಿಮೆ ಸೋಂಕು ಪತ್ತೆಯಾಗಿವೆ. ಈ ಮೂಲಕ ಬೆಂಗಳೂರಿನ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 2,23,569 ತಲುಪಿದೆ.

Latest Videos

undefined

ಇನ್ನು ಸೋಮವಾರ 2,805 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರ ಸಂಖ್ಯೆ 1,76,541ಕ್ಕೆ ತಲುಪಿದೆ. ಇನ್ನು 44,182 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 252 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಶಾಸಕ, ಸಂಸದರಿಗಿರುವ ಕೊರೋನಾ ರಿಸ್ಕ್‌ ಮಕ್ಕಳಿಗಿಲ್ಲವೇ?

9 ಮಂದಿ ಸಾವು: ನಗರದಲ್ಲಿ ಸೋಮವಾರ ಒಟ್ಟು 9 ಮಂದಿ ಸೋಂಕಿತರು ಮೃತಪಟ್ಟವರದಿಯಾಗಿದ್ದು, ಈ ಮೂಲಕ ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 2,845 ಏರಿಕೆಯಾಗಿದೆ. ಕಳೆದ ಆಗಸ್ಟ್‌ 23 ರಂದು ನಗರದಲ್ಲಿ 5 ಮಂದಿ ಮೃತಪಟ್ಟಿದ್ದರು. ಅದಾದ ನಂತರ 20ಕ್ಕಿಂತ ಹೆಚ್ಚು ಮಂದಿ ಪ್ರತಿ ದಿನ ಮೃತಪಟ್ಟವರದಿಯಾಗಿತ್ತು.

ನಗರದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಸೋಂಕು ಪತ್ತೆ

ಸೋಮವಾರ ಬೆಂಗಳೂರಿನಲ್ಲಿ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸೋಂಕು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಸೋಮವಾರ 2,722 ಪ್ರಕರಣ ಪತ್ತೆಯಾಗಿವೆ. ಈಗಾಗಲೇ ಅತಿ ಹೆಚ್ಚು ಒಟ್ಟು ಕೊರೋನಾ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದ ಪೂಣೆಯಲ್ಲಿ 1,911 ಪ್ರಕರಣ ಮಾತ್ರ ಪತ್ತೆಯಾದರೆ, ನವ ದೆಹಲಿಯಲ್ಲಿ 1,984 ಪ್ರಕರಣ, ವಾಣಿಜ್ಯ ನಗರಿ ಮುಂಬೈನಲ್ಲಿ 2,053 ಪ್ರಕರಣ ಪತ್ತೆಯಾಗಿವೆ.

click me!