ಧಾರವಾಡ: ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ನೂತನ ಡಿಸಿ ಕಾರು ಅಪಘಾತ

By Girish Goudar  |  First Published Apr 19, 2022, 8:37 AM IST

*   ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದ ಘಟನೆ
*   ಡಿಸಿಯಾಗಿ ಬಡ್ತಿ ಹೊಂದಿದ್ದ ವಿಜಯ ಮಹಾಂತೇಶ ದಾನಮ್ಮನ್ನವರ
*   ಕಾರು ಚಾಲಕ ಬಸವರಾಜ ಹೇಳಿದ್ದೇನು?
 


ಧಾರವಾಡ(ಏ.19):  ವಿಜಯಪುರಕ್ಕೆ(Vijayapura) ಜಿಲ್ಲಾಧಿಕಾರಿಯಾಗಿ ಹೊರಟಿದ್ದ ಐಎಎಸ್(IAS) ಅಧಿಕಾರಿಯ ಕಾರು ಇಂದು(ಮಂಗಳವಾರ) ಬೆಳಗಿನ ಜಾವ 4 ಗಂಟೆಗೆ ಪಲ್ಟಿಯಾದ ಘಟನೆ ಧಾರವಾಡD(Dharwad) ತಾಲೂಕಿನ ಯರಿಕೊಪ್ಪ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ‌.

ಯರಿಕೊಪ್ಪ ಕ್ರಾಸ್ ಬಳಿ ಲಾರಿ ತಪ್ಪಿಸಲು ಹೋಗಿ ಚಾಲಕ ಬಸವರಾಜ ಸಮಯ ಪ್ರಜ್ಞೆಯಿಂದ ಕಾರು ಕಂದಕಕ್ಕೆ ಉರುಳಿಸಿದ್ದಾನೆ. ಇದರಿಂದ ಐಎಎಸ್ ಅಧಿಕಾರಿ ವಿಜಯ ಮಹಾಂತೇಶ ದಾನಮ್ಮನ್ನವರ(Vijaya Mahantesh Danammanavar) ಹಾಗೂ ಕಾರು ಚಾಲಕ ಬಸವರಾಜಗೆ ಸಣ್ಣಪುಟ್ಟ ಗಾಯಗಳಾಗಿವೆ. 

Tap to resize

Latest Videos

ದಾವಣಗೆರೆಯಲ್ಲಿ(Davanagere) ಐಎಎಸ್ ಅಧಿಕಾರಿ ವಿಜಯ ಮಹಾಂತೇಶ ದಾನಮ್ಮನ್ನವರ ನಿನ್ನೆಯಷ್ಡೆ ಡಿಸಿಯಾಗಿ ಬಡ್ತಿ ಹೊಂದಿದ್ದರು. ಇಂದು(ಮಂಗಳವಾರ) ಅಧಿಕಾರ ಸ್ವಿಕರಿಸಿಲು ವಿಜಯಪುರಕ್ಕೆ ಹೊರಟಿರುವಾಗ ದುರ್ಘಟನೆ ಸಂಭವಿಸಿದೆ. 

Flight Accident ಬೆಂಗಳೂರಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ, ಮಹಿಳಾ ಪೈಲೆಟ್ ಆಸ್ಪತ್ರೆ ದಾಖಲು!

ಇನ್ನು ಕಾರಿನಲ್ಲಿ ವಿಜಯ ಮಹಾಂತೇಶ ದಾನಮ್ಮನವರ, ಪತ್ನಿ ಶ್ವೇತಾ, ಮಕ್ಕಳಾದ ತನ್ವಿ, ವಿಹಾನ್ ಹಾಗೂ ಪ್ರವಿಣಕುಮಾರ ಪ್ರಯಾಣಿಸುತ್ತಿದ್ದರು ಅಂತ ತಿಳಿದು ಬಂದಿದೆ. ಕಾರು ಕಂದಕಕ್ಕೆ ಉರುಳಿದ ಪರಿಣಾಮ ಎಲ್ಲರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ಎಲ್ಲರನ್ನೂ ಧಾರವಾಡ ನಗರದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೋಲಿಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಕಾರು ಚಾಲಕ ಬಸವರಾಜ ಹೇಳಿದ್ದೇನು?

ಕಾರು ಚಾಲಕ ನಾನು ಬೆಳಗಿನ ಜಾವ ಎರಿಕೊಪ್ಪ ಕ್ರಾಸ್ ದಾಟಬೇಕಿತ್ತು ಕಾರ ಚಾಲಕ ಏಕಾಏಕಿ ನನ್ನ ಎದುರಿಗೆ ಬಂದಿದ್ದರಿಂದ ನನಗೆ ಸಡನ್ ಆಗಿ ತೋಚದೆ ನಾನು ರಸ್ತೆಯ ಬಲಭಾಗಕ್ಕೆ ಕಾರನ್ನ ಹೊಡೆದ ಕಂದಕಕ್ಕೆ ಉರುಳಿದೆ..ಆದರೆ ನಾನು ಬಲಗಡೆ ಕಾರ ಹಿಡೆಯದಿದ್ದರೆ ಎಲ್ಲರೂ ಸ್ಥಳದಲ್ಲಿ ಸಾವನ್ನಪ್ಪಬೇಕಿತ್ತು, ನಾವು ಎಲ್ಲರೂ ಬದುಕಿ ಬಂದಿದ್ದೆ ಪವಾಡ ಎಂದು ಚಾಲಕ ಬಸವರಾಜ ಪ್ರತ್ಯಕ್ಷ ದರ್ಶಿ ಹೇಳಿದ್ದಾರೆ.

click me!