ಜೆಡಿಎಸ್‌ನಲ್ಲೇ ಇದ್ದು ಪಕ್ಷ ಸಂಘಟಿಸುವೆ : ಯೋಗಾ ನಂದಕುಮಾರ್‌

By Kannadaprabha News  |  First Published Apr 12, 2023, 8:43 AM IST

ಕಳೆದ ಇಪ್ಪತ್ತು ವರ್ಷದಿಂದ ಪ್ರಾದೇಶಿಕ ತತ್ವಾದರ್ಶವನ್ನು ಮೈಗೂಡಿಸಿಕೊಂಡ ಮಾಜಿ ಶಾಸಕ ವಾಸಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ತಿಗಳ ಸಮುದಾಯದ ಪ್ರಮುಖರಾದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಯೋಗಾ ನಂದಕುಮಾರ್‌ ನಾನು ಜೆಡಿಎಸ್‌ ಪಕ್ಷದಲ್ಲೇ ಉಳಿದು ಪಕ್ಷ ಸಂಘಟನೆ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಭರವಸೆ ನೀಡಿದರು.


ಗುಬ್ಬಿ : ಕಳೆದ ಇಪ್ಪತ್ತು ವರ್ಷದಿಂದ ಪ್ರಾದೇಶಿಕ ತತ್ವಾದರ್ಶವನ್ನು ಮೈಗೂಡಿಸಿಕೊಂಡ ಮಾಜಿ ಶಾಸಕ ವಾಸಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ತಿಗಳ ಸಮುದಾಯದ ಪ್ರಮುಖರಾದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಯೋಗಾ ನಂದಕುಮಾರ್‌ ನಾನು ಜೆಡಿಎಸ್‌ ಪಕ್ಷದಲ್ಲೇ ಉಳಿದು ಪಕ್ಷ ಸಂಘಟನೆ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಭರವಸೆ ನೀಡಿದರು.

ಬಿಡದಿ ಬಳಿಯ ಫಾರಂ ಹೌಸ್‌ ಕಚೇರಿಯಲ್ಲಿ ಜೆಡಿಎಸ್‌ ನಾಯಕ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚಿಸಿ ನಂತರ ಗುಬ್ಬಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಇಪ್ಪತ್ತು ವರ್ಷದಿಂದ ಜೆಡಿಎಸ್‌ ಪಕ್ಷ ಸಂಘಟನೆ ಗುಬ್ಬಿ ಕ್ಷೇತ್ರದಲ್ಲಿ ನಡೆಸಿಕೊಂಡು ಬಂದಿದ್ದು, ವಾಸಣ್ಣ ಅವರ ಒಡನಾಟದಲ್ಲಿ ಎಲ್ಲಾ ಚುನಾವಣೆಗೆ ಕೆಲಸ ಮಾಡಿದ್ದೇನೆ. ಅವರ ಗೆಲುವಿಗೆ ನಾನು ಹಾಗೂ ನನ್ನ ಬೆಂಬಲಿಗರು ಶ್ರಮಿಸಿದ್ದೇವೆ. ಪಕ್ಷ ತೊರೆದ ಮಾಜಿ ಶಾಸಕರ ನಡೆಯನ್ನು ಹಿಂಬಾಲಿಸಲು ಮನಸ್ಸು ಒಪ್ಪದೇ ಪಕ್ಷ ನಿಷ್ಠೆಯಲ್ಲಿ ಜೆಡಿಎಸ್‌ನಲ್ಲೇ ಉಳಿದು ಪಕ್ಷದ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುವುದಾಗಿ ತಿಳಿಸಿದರು.

Tap to resize

Latest Videos

ಹಿಂದುಳಿದ ವರ್ಗಗಳ ಆಯೋಗದ ಸದಸ್ಯನಾಗಿ ನೇಮಕ ಮಾಡುವಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ವಾಸಣ್ಣ ಅವರ ಸಹಕಾರ ಇದೆ. ಅವರ ಆಪ್ತರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದ ನನಗೆ ರಾಷ್ಟ್ರೀಯ ಪಕ್ಷಗಳ ಸಿದ್ದಾಂತ ಒಪ್ಪಲಿಲ್ಲ. ಮೊದಲಿನಿಂದ ಜೆಡಿಎಸ್‌ನಲ್ಲಿ ದುಡಿದ ನನಗೆ ಜೆಡಿಎಸ್‌ನಲ್ಲೇ ಉಳಿದು ಮುಂದುವರೆಯಲು ನನ್ನ ಬೆಂಬಲಿಗರು ಸಹ ಸೂಚಿಸಿದರು. ಅದರಂತೆ ಪಕ್ಷದಲ್ಲೇ ಉಳಿದು ಚುನಾವಣೆ ಮೊದಲಿನಂತೆ ಎದುರಿಸಿ ಜೆಡಿಎಸ್‌ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.

ತಾಲೂಕಿನ ನಿಟ್ಟೂರು ಹೋಬಳಿ ಹಾಗೂ ಅಳಿಲುಘಟ್ಟಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ನಿರಂತರ ಒಡನಾಟ ಇರುವ ನನ್ನ ಸ್ನೇಹಿತರು, ಬೆಂಬಲಿಗರ ಜೊತೆ ಇಡೀ ಗುಬ್ಬಿ ಕ್ಷೇತ್ರದ ಪ್ರವಾಸ ನಡೆಸುತ್ತೇನೆ. ಅಹಿಂದ ಮತಗಳ ಜೊತೆ ಎಲ್ಲಾ ಜಾತಿ ಜನಾಂಗ ಮತಗಳ ಕ್ರೋಢೀಕರಿಸುವ ಕೆಲಸ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್‌ ಅಭ್ಯರ್ಥಿ ಬಿ.ಎಸ್‌.ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್‌, ಪಟ್ಟಣ ಪಂಚಾಯತ್‌ ಮಾಜಿ ಅಧ್ಯಕ್ಷ ಸುರೇಶಗೌಡ, ತಾಪಂ ಮಾಜಿ ಅಧ್ಯಕ್ಷೆ ಸಿದ್ದಗಂಗಮ್ಮ, ಮುಖಂಡರಾದ ಬಸವರಾಜು ಹೊರಟಿ, ಶಿವಲಿಂಗಯ್ಯ ಹಾಗೂ ಒಕ್ಕಲಿಗರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಕರಿಯಪ್ಪ ಇತರರು ಇದ್ದರು.

ಪ್ರಾಣಿಕೆಗೆ ಸಭೆ

ಬೆಂಗಳೂರು (ಏ.11) : ವಿಧಾನಸಭೆ ಚುನಾವಣೆಗೆ ಜಾತ್ಯತೀತ ಜನತಾದಳದ ಪ್ರಣಾಳಿಕೆ ಸಿದ್ಧಪಡಿಸುವ ಸಂಬಂಧ ಪ್ರಣಾಳಿಕೆ ರಚನಾ ಸಮಿತಿ ಸಭೆ ನಡೆದಿದೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ವಿಧಾನಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌(BM Farooq) ಅಧ್ಯಕ್ಷತೆಯ ಸಮಿತಿ ಸಭೆ ನಡೆಸಿತು. ಸಮಿತಿಯ ಸದಸ್ಯರಾದ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ(Bandeppa Kashempur), ಮಾಜಿ ಸಂಸದ ಕುಪೇಂದ್ರ ರೆಡ್ಡಿ(Kupendra reddy), ವಿಧಾನಪರಿಷತ್‌ ಸದಸ್ಯ ಕೆ.ಎನ್‌.ತಿಪ್ಪೇಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಪ್ರಣಾಳಿಕೆಯ ಕರಡು ಪ್ರತಿಯನ್ನು ಪರಾಮರ್ಶೆ ನಡೆಸಿತು. ಅಲ್ಲದೆ, ಪಕ್ಷದ ವತಿಯಿಂದ ಜನತೆಗೆ ನೀಡಲು ಉದ್ದೇಶಿಸಿರುವ ಜೆಡಿಎಸ್‌ ಪರಿಹಾರ ಪತ್ರದ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಪಂಚರತ್ನ ಯೋಜನೆ ಜಾರಿಯಾದರೆ ರಾಜ್ಯ ಸ್ವರ್ಗ ಸದೃಶ್ಯವಾಗಲಿದೆ: ಎಚ್‌.ಡಿ.ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆ(Pancharatna rathayatre scheme)ಗಳು ಮತ್ತು ಅವರು ಪಂಚರತ್ನ ರಥಯಾತ್ರೆ ವೇಳೆ ಘೋಷಣೆ ಮಾಡಿರುವ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಅಡಕಗೊಳಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳ ಕನಸಿನ ಕಾರ್ಯಕ್ರಮಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಲು ಸಭೆಯಲ್ಲಿ ನಿರ್ಣಯಿಸಲಾಯಿತು. ಪಂಚರತ್ನ ಯೋಜನೆಗಳಾದ ಆರೋಗ್ಯ, ಶಿಕ್ಷಣ, ಕೃಷಿ, ನೀರಾವರಿ, ವಸತಿ, ಉದ್ಯೋಗ ಕಾರ್ಯಕ್ರಮಗಳ ಬಗ್ಗೆ ಮತ್ತು ಅವುಗಳನ್ನು ಜಾರಿಗೊಳಿಸಲು ಅಗತ್ಯವಾದ ಆರ್ಥಿಕ ಸಂಪನ್ಮೂಲಗಳ ಬಗ್ಗೆಯೂ ಸಮಿತಿ ಅವಲೋಕನ ಮಾಡಿತು.

Belagavi Politics: ಕೈ ಟಿಕೆಟ್‌ ವಂಚಿತ ಸೌರಭ್‌ ಚೋಪ್ರಾಗೆ ಜೆಡಿಎಸ್‌ ಗಾಳ

ಶೀಘ್ರವೇ ಪ್ರಣಾಳಿಕೆಗೆ ಅಂತಿಮ ಸ್ಪರ್ಶ ನೀಡಲಾಗುವುದು. ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ಪ್ರಣಾಳಿಕ ಬಿಡುಗಡೆ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಫಾರೂಕ್‌ ಹೇಳಿದ್ದಾರೆ.

click me!