Vijayanagara: ಮನೆ ಮಗಳಾಗಿ ವಿಜಯನಗರ ಅಭಿವೃದ್ಧಿಪಡಿಸುವೆ: ಸಚಿವೆ ಜೊಲ್ಲೆ

Kannadaprabha News   | Asianet News
Published : Feb 02, 2022, 06:51 AM IST
Vijayanagara: ಮನೆ ಮಗಳಾಗಿ ವಿಜಯನಗರ ಅಭಿವೃದ್ಧಿಪಡಿಸುವೆ: ಸಚಿವೆ ಜೊಲ್ಲೆ

ಸಾರಾಂಶ

*   ಹಂಪಿ ಪುರಂದರ ಆರಾಧನೋತ್ಸವದಲ್ಲಿ ಶಶಿಕಲಾ ಜೊಲ್ಲೆ *   ಪುರಂದರ ಮಂಟಪದಲ್ಲಿ ಪೂಜೆ *   ಸಚಿವ ಆನಂದ ಸಿಂಗ್‌ ಗೈರು  

ಹೊಸಪೇಟೆ(ಫೆ.02):  ವಿಜಯನಗರ(Vijayanagara) ಜಿಲ್ಲೆಯ ಮಗಳಾಗಿ ಅಭಿವೃದ್ಧಿಯಲ್ಲಿ ಇಡೀ ರಾಜ್ಯಕ್ಕೆ(Karnataka) ಇದನ್ನು ಮಾದರಿಯಾಗಿ ರೂಪಿಸುವೆ. ಇದಕ್ಕೆ ಜಿಲ್ಲೆಯ ಎಲ್ಲಾ ಶಾಸಕರ, ಸಂಸದರ ಸಹಕಾರ ಕೋರುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ(Shashikala Jolle) ಹೇಳಿದರು.

ಹಂಪಿಯ(Hampi) ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಶ್ರೀ ಪುರಂದರದಾಸರ ಆರಾಧನೋತ್ಸವಕ್ಕೆ(Purandaradasara Aradanostava) ಚಾಲನೆ ನೀಡಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವೆಯನ್ನಾಗಿ ಘೋಷಣೆ ಮಾಡಿದಾಗ ರೋಮಾಂಚನಗೊಂಡೆ. ಎತ್ತಣ ಮಾಮರ ಎತ್ತಣ್ಣ ಕೋಗಿಲೆ ಎಂಬಂತೇ ಬೆಳಗಾವಿಯವಳಾದ ನನಗೆ ವಿಜಯನಗರದ ಉಸ್ತುವಾರಿ ದೊರೆತಿರುವುದು ನನ್ನ ಪೂರ್ವಜನ್ಮದ ಪುಣ್ಯ. ಜಿಲ್ಲೆಗೆ ಮೊದಲ ಬಾರಿಗೆ ಬಂದಾಗ ಇಲ್ಲಿನ ಜನ ಕೊಟ್ಟ ಸ್ವಾಗತ ನೋಡಿ ನನಗೆ ತವರು ಮನೆಗೆ ಬಂದಷ್ಟುಖುಷಿಯಾಯಿತು. ಬೆಳಗಾವಿ ನನ್ನ ಗಂಡನ ಮನೆಯಾದರೆ, ವಿಜಯನಗರ ನನ್ನ ತವರು ಮನೆಯಾಗಿದೆ. ಹಾಗಾಗಿ ವಿಜಯನಗರ ಜಿಲ್ಲೆ ರೂವಾರಿ ಸಚಿವ ಆನಂದ ಸಿಂಗ್‌(Anand Singh) ಅವರ ಸಹಕಾರದೊಂದಿಗೆ ಜಿಲ್ಲೆ ಅಭಿವೃದ್ಧಿಪಡಿಸುವೆ ಎಂದು ಭರವಸೆ ವ್ಯಕ್ತಪಡಿಸಿದರು.

Belagavi: ಸಚಿವೆ ಜೊಲ್ಲೆ ತವರು ಜಿಲ್ಲೆಯಲ್ಲಿ ಭ್ರಷ್ಟಾಚಾರ ಬಟಾಬಯಲು: ಇಬ್ಬರ ಬಂಧನ

ಗಣರಾಜ್ಯೋತ್ಸವದಲ್ಲಿ ಜ. 26ರಂದು ಧ್ವಜಾರೋಣ ನೆರವೇರಿಸಬೇಕಿತ್ತು. ಅನಾರೋಗ್ಯದ ಹಿನ್ನೆಲೆ ನಾನು ಬರಲಿಲ್ಲ. ಆದರೆ, ಮನಸ್ಸು ಮಾತ್ರ ಇತ್ತ ಕಡೆಯೇ ಇತ್ತು. ಗಣರಾಜ್ಯೋತ್ಸವಕ್ಕೆ ಬಾರದೆ ಇರುವುದಕ್ಕೆ ಕ್ಷಮೆಯಾಚಿಸುವೆ ಎಂದರು.
ರಾಜ್ಯದ 31ನೇ ಜಿಲ್ಲೆಯಾಗಿ ಅ. 2ರಂದು ಉದಯವಾದ ವಿಜಯನಗರದ ಹಿಂದೆ ಸಚಿವ ಆನಂದ ಸಿಂಗ್‌ ಅವರ ಹೋರಾಟ ಇದೆ. ಬಳ್ಳಾರಿಯಿಂದ(Ballari) ಬೇರ್ಪಟ್ಟಈ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಿದೆ. ರೈತರ ಸಂಕಷ್ಟಗಳಿಗೆ ಧ್ವನಿಯಾಗುವೆ. ಹಂಪಿಯ ಸ್ಮಾರಕಗಳನ್ನು ಸಂರಕ್ಷಿಸುವ ಕಾರ್ಯವನ್ನೂ ಮಾಡುವೆ. ಎಲ್ಲಾ ಶಾಸಕರು, ಸಂಸದರ ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ ಜಿಲ್ಲೆ ಅಭಿವೃದ್ಧಿಪಡಿಸುವುದರತ್ತ ಹೆಜ್ಜೆ ಹಾಕುವೆ. ಅಲ್ಲದೇ ದಾಸಶ್ರೇಷ್ಠ ಪುರಂದರದಾಸರು ಹೇಳಿದಂತೆ ಪ್ರಾಮಾಣಿಕವಾಗಿ ಎಲ್ಲರೂ ಜನಸೇವೆ ಮಾಡಬೇಕು. ಈ ಮೂಲಕ ಮನುಕುಲಕ್ಕೆ ಅನುಕರಣೀಯವಾಗಿ ಬೆಳೆಯಬೇಕು ಎಂದರು.

ತೆಕ್ಕಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಮಾನಕಾರಿ ಶ್ರೀನಿವಾಸಚಾರ್ಯ ಅವರು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ವರ ರಂಗಣ್ಣನವರ ಪ್ರಾಸ್ತಾವಿಕ ಮಾತನಾಡಿದರು.

ಕಮಲಾಪುರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸೈಯದ್‌ ಅಮಾನುಲ್ಲಾ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ., ಜಿಪಂ ಸಿಇಒ ಬೋಯರ್‌ ಹರ್ಷಲ್‌ ನಾರಾಯಣರಾವ್‌, ಗ್ರಾಪಂ ಸದಸ್ಯರಾದ ಸ್ವಾತಿ ಸಿಂಗ್‌, ಹನುಮಂತಪ್ಪ, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಧಾರ್ಮಿಕ ದತ್ತಿ ಇಲಾಖೆ ಮಂಡಳಿ ಸದಸ್ಯೆ ವಿಜಯಲಕ್ಷ್ಮಿ, ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ದಾಸ ಸಾಹಿತ್ಯ ಪ್ರಾಜೆಕ್ಟ್ನ ವಿಶೇಷ ಸಹಾಯಕ ಅಧಿಕಾರಿ ಸುಳಾದಿ ಹನುಮೇಶ ಆಚಾರ್ಯ, ತಹಸೀಲ್ದಾರ ವಿಶ್ವನಾಥ, ಪಪಂ ಮುಖ್ಯಾಧಿಕಾರಿ ನಾಗೇಶ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಚಿದಾನಂದ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶರಾವ್‌ ಮತ್ತಿತರರು ಇದ್ದರು.

ಸವದತ್ತಿ ಯಲ್ಲಮ್ಮ ದೇಗುಳ ಅಭಿವೃದ್ಧಿಗೆ ಮುಜರಾಯಿ ಸಚಿವೆ ಆದೇಶ

ಪುರಂದರ ಮಂಟಪದಲ್ಲಿ ಪೂಜೆ:

ಪುರಂದರದಾಸರ ಆರಾಧಾನೋತ್ಸವ ನಿಮಿತ್ತ ಬೆಳಗ್ಗೆ ಹಂಪಿಯ ನದಿ ತೀರದಲ್ಲಿರುವ ಪುರಂದರ ಮಂಟಪದಲ್ಲಿ ಪುರಂದರದಾಸರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಪರ ಜಿಲ್ಲಾಧಿಕಾರಿ ಮಹೇಶಬಾಬು ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಪುರಂದರದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಲಾಯಿತು. ಹಂಪಿಯಲ್ಲಿ ಪುರಂದರದಾಸರ ಆರಾಧನೋತ್ಸವದ ನಿಮಿತ್ತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕಾರ್ಯಕ್ರಮಕ್ಕೂ ಮುನ್ನ ಸಚಿವೆ ಶಶಿಕಲಾ ಜೊಲ್ಲೆ ಅವರು ವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದರು.

ಸಚಿವ ಆನಂದ್‌ ಸಿಂಗ್‌ ಗೈರು!

ಹಂಪಿಯಲ್ಲಿ ನಡೆದ ಶ್ರೀಪುರಂದರದಾಸರ ಆರಾಧನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಾಗಿದ್ದ ಕ್ಷೇತ್ರದ ಶಾಸಕರು ಹಾಗೂ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಗೈರು ಹಾಜರಿ ಎದ್ದುಕಾಣುತ್ತಿತ್ತು. ವಿಜಯನಗರ ಜಿಲ್ಲೆಯ ರೂವಾರಿಯೂ ಆಗಿರುವ ಅವರನ್ನು ಕೊಪ್ಪಳ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಕೂಡ ಮುನಿಸಿಕೊಂಡಿದ್ದಾರೆ. ಹಾಗಾಗಿ ಅವರ ಬೆಂಬಲಿಗರೂ ಕಾರ್ಯಕ್ರಮದಿಂದ ದೂರ ಉಳಿದಿದ್ದರು.
 

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC