ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಂಕಷ್ಟಬಂದಾಗ ಅವರೊಂದಿಗೆ ನಾನಿರುತ್ತೇನೆ ಎಂದು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಹೇಳಿದ್ದಾರೆ.
ಚಾಮರಾಜನಗರ(ಫೆ.09): ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಂಕಷ್ಟಬಂದಾಗ ಅವರೊಂದಿಗೆ ನಾನಿರುತ್ತೇನೆ ಎಂದು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಾನು ಬಿಜೆಪಿನೂ ಅಲ್ಲ ಯಾವುದೇ ಪಕ್ಷವೂ ಅಲ್ಲ. ನಾನೊಬ್ಬ ಸ್ವತಂತ್ರ ಶಾಸಕ, ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿರುವುದರಿಂದ ಸುಭದ್ರ ಸರ್ಕಾರಕ್ಕೆ ನನ್ನ ಬೆಂಬಲ ಇದ್ದೇ ಇದೆ. ಬಿಎಸ್ಪಿ ಮುಗಿದ ಅಧ್ಯಾಯ, ನಾನು ಬರುತ್ತೇನೆ ಎಂದರೂ ನನ್ನ ತಡೆಯುವ ಷಡ್ಯಂತ್ರ ಬಿಎಸ್‌ಪಿಯಲ್ಲಿ ನಡೆಯುತ್ತದೆ. ವಿನಾಕಾರಣ ನನ್ನನ್ನು ಹೊರಗೆ ಹಾಕಿದ್ದಾರೆ, ಅವರು ಪಕ್ಷಕ್ಕೆ ಆಹ್ವಾನಿಸಿದರೂ ನಾನು ಹೋಗುವುದಿಲ್ಲ ಎಂದಿದ್ದಾರೆ.
ಬಿಜೆಪಿ ವಶದಲ್ಲಿದ್ದ ಬ್ಯಾಂಕ್ ಕೈ ವಶಕ್ಕೆ: ಬಿಜೆಪಿ ಮುಖಭಂಗ
ಚಾಮರಾಜನಗರ ದ್ವಿಶತಮಾನ ಕಾರ್ಯಕ್ರಮದಲ್ಲಿ ತದನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುವಾಗ ಮೈಸೂರಿನ ರಾಜವಂಶಸ್ತ ಯದುವೀರ್ ಸಾರ್ವಜನಿಕ ಜೀವನಕ್ಕೆ ಬರಬೇಕು ಎಂದು ತಮ್ಮ ಮನದಿಂಗಿತ ವ್ಯಕ್ತಪಡಿಸಿದರು. ಪರ್ಯಾಯ ರಾಜಕಾರಣ ಪರ್ವಕಾಲದಲ್ಲಿ ನಾವಿದ್ದು ಮಾನವೀಯ ಗುಣವುಳ್ಳ, ಸಾಮಾಜಿಕ ಕಳಕಳಿಯಿರುವ ಯದುವೀರ್ ರಾಜಕೀಯಕ್ಕೆ ಬರಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.