* ಹೊಳೆನರಸೀಪುರ ಕಾಲೇಜಿನ ಪ್ರಸ್ತಾವ ತಿರಸ್ಕರಿಸಿದ್ದಕ್ಕೆ ಕಿಡಿ
* ಯಾವುದೇ ಕಾರಣ ನೀಡದೆ ಪ್ರಸ್ತಾಪ ತಿರಸ್ಕರಿಸಿದ ಉನ್ನತ ಶಿಕ್ಷಣ ಸಚಿವ
* ಬಿಜೆಪಿ ಸರ್ಕಾರ ಖಾಸಗಿಯವರ ಗುಲಾಮಗಿರಿಯಲ್ಲಿದೆ
ಹಾಸನ(ಜ.15): ರಾಜ್ಯ ಸರ್ಕಾರ(Government of Karnnataka) ಖಾಸಗಿ ಶಾಲೆಗಳ ಹಿಡಿತದಲ್ಲಿದೆ. ಹಾಗಾಗಿಯೇ ಅವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಅನುದಾನ ಕೊರತೆ ಮಾಡಲಾಗುತ್ತಿದೆ. ಸರ್ಕಾರದ ಈ ಧೋರಣೆ ಖಂಡಿಸಿ ಜ.17ರಂದು ಏಕಾಂಗಿ ಧರಣಿ ಮಾಡುವುದಾಗಿ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ(HD Revanna) ಎಚ್ಚರಿಸಿದರು.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಹೊಳೆನರಸೀಪುರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸದಾಗಿ ಎರಡು ವಿಭಾಗಗಳನ್ನು ಮಂಜೂರು ಮಾಡುವಂತೆ ಸಲ್ಲಿಸಿದ್ದ ಪ್ರಸ್ತಾವ ತಿರಸ್ಕರಿಸಿರುವುದನ್ನು ಖಂಡಿಸಿ ಜ.17ರಂದು ಮುಖ್ಯಮಂತ್ರಿ ಮನೆ ಮುಂದೆ ಏಕಾಂಗಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಕಾಲೇಜಿಗೆ ಅಗತ್ಯವಾದ ಕಟ್ಟಡ ಹಾಗೂ ಮೂಲಸೌಕರ್ಯ ಕಲ್ಪಿಸಿ, ಹೊಸದಾಗಿ ಎಂಎಸ್ಸಿ ಸೈಕಾಲಜಿ ಹಾಗೂ ಫುಡ್ ಆ್ಯಂಡ್ ನ್ಯೂಟ್ರಿಷಿಯನ್ ವಿಭಾಗ ತೆರೆಯಲು ಅನುಮೋದನೆ ಸಲ್ಲಿಸಲಾಗಿತ್ತು. ಇದಕ್ಕೆ ಮೈಸೂರು ವಿವಿ ಹಾಗೂ ಸರ್ಕಾರದ ಕಾರ್ಯದರ್ಶಿ ಅನುಮೋದನೆ ನೀಡಿದ್ದರೂ, ಉನ್ನತ ಶಿಕ್ಷಣ ಸಚಿವರು ಯಾವುದೇ ಕಾರಣ ನೀಡದೆ ಪ್ರಸ್ತಾಪ ತಿರಸ್ಕರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Anti conversion Bill : ಕಾಂಗ್ರೆಸ್ - ಬಿಜೆಪಿ ನಡುವೆ ಮ್ಯಾಚ್ ಫಿಕ್ಸಿಂಗ್ : ರೇವಣ್ಣ
ಇದೇ ವಿಚಾರವಾಗಿ ಸಿಎಂ ಮನೆ ಎದುರು ಧರಣಿ ನಡೆಸಲಾಗುವುದು. ಈ ಸಮಯದಲ್ಲಿ ಬೇಕಾದರೆ ನನ್ನನ್ನು ಅರೆಸ್ಟ್ ಮಾಡಿಸಲಿ. ನಾನು ಜಾಮೀನು(Bail) ಪಡೆಯಲೂ ಹೋಗುವುದಿಲ್ಲ. ಜೈಲಿನಲ್ಲೇ(Jail) ಇರುತ್ತೇನೆ. ಬಿಜೆಪಿ ಸರ್ಕಾರವು(BJP Government) ಖಾಸಗಿಯವರ ಗುಲಾಮಗಿರಿಯಲ್ಲಿದೆ. ರಾಜ್ಯ ಸರ್ಕಾರ ಏನಾದರೂ ಪಾಪರ್ ಚೀಟಿ ತೆಗೆದುಕೊಂಡರೆ ನಾನೇ ಆ ಕಾಲೇಜಿಗೆ ಮೂಲಸೌಕರ್ಯ ಒದಗಿಸಲು ಮುಂದಾಗುತ್ತೇನೆ ಎಂದು ಗುಡುಗಿದರು.
2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರೋದು ಪಕ್ಕಾ: ದೇವೇಗೌಡ
ಚಿಂಚೋಳಿ: ಕೇಂದ್ರ ಬಿಜೆಪಿ ಸರ್ಕಾರದಲ್ಲಿ(BJP Government) ಆಡಳಿತ ವ್ಯವಸ್ಥೆ ಕುಸಿಯುತ್ತಿದೆ. ಪ್ರಾದೇಶಿಕ ಪಕ್ಷಗಳಿಂದಲೇ(Regional Parties) ಆಡಳಿತ ಸುಧಾರಣೆ ಬದಲಾಯಿಸಲು ಸಾಧ್ಯವಿದೆ. 2023 ರಾಜ್ಯದಲ್ಲಿ(Karnataka) ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್(JDS) ಅಧಿಕಾರಕ್ಕೆ ಬರುವುದು ಖಚಿತ. ಅದಕ್ಕಾಗಿ ಪಕ್ಷದ ಸಂಘಟನೆ ಅತಿ ಮುಖ್ಯವಾಗಿದೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು(HD Devegowda) ಹೇಳಿದ್ದಾರೆ.
Family Politics in Karnataka : ಕುಟುಂಬ ರಾಜಕೀಯ ಅಂತ್ಯಕ್ಕೆ ಮಸೂದೆ ತನ್ನಿ: ರೇವಣ್ಣ
ಜ.04 ರಂದು ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಚಿಂಚೋಳಿ-ಕಾಳಗಿ ತಾಲೂಕಿನ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು(JDS Activists Conference) ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್(Congress) ಮತ್ತು ಬಿಜೆಪಿ ಸರ್ಕಾರದಲ್ಲಿ ಎಲ್ಲ ಸಮಾಜಕ್ಕೆ ನ್ಯಾಯ ಸಿಗುತ್ತಿಲ್ಲ. ಅಲೆಮಾರಿ ಸಮಾಜಕ್ಕೂ ದೇಶದ ರಾಜಕೀಯ(Politics) ವ್ಯವಸ್ಥೆಯಲ್ಲಿ ಸೌಲಭ್ಯಗಳು ದೊರಕುತ್ತಿಲ್ಲ. ರಾಷ್ಟ್ರೀಯ ಪಕ್ಷಗಳು(National Parties) ಬರೀ ಕಥೆ ಹೇಳಿಕೊಳ್ಳುತ್ತಿವೆ. ಸಾಮಾನ್ಯ ಜನರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಬಿಜೆಪಿ ತಾನೂ ಮಾಡಿದ್ದೇ ಸರಿ ಎಂದು ಹೇಳಿಕೊಳ್ಳುತ್ತಿದೆ. ಜೆಡಿಎಸ್ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಮಾಡುತ್ತಿವೆ. ಪ್ರಾದೇಶಿಕ ಪಕ್ಷ ಉಳಿಸುವುದಕ್ಕಾಗಿ ಹೋರಾಟ ನಡೆಸಲಾಗುತ್ತಿದೆ ಮತ್ತು ಅಧಿಕಾರಕ್ಕೆ ತರುವುದು ನನ್ನ ಗುರಿಯಾಗಿದೆ ಎಂದರು.
ಕೇರಳ(Kerala), ತಮಿಳುನಾಡು(Tamil Nadu), ತೆಲಂಗಾಣ(Telangana), ಆಂಧ್ರಪ್ರದೇಶ(Andhra Pradesh), ಕೋಲ್ಕತ್ತಾ(Kolkata) ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಉತ್ತಮ ಆಡಳಿತ ನಡೆಯುತ್ತಿವೆ. ನಮ್ಮ ರಾಜ್ಯದಲ್ಲಿಯೂ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಎಂದು ಜನರ ಬಯಕೆ ಇದೆ. ಮುಂದಿನ 2023 ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ಅಧಿಕಾರಕ್ಕೆ ತರಲು ಪಕ್ಷದ ಸಂಘಟನೆ ಅತಿ ಮುಖ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಸಮ್ಮಿಶ್ರ ಸರ್ಕಾರದಲ್ಲಿ(Coalition Government) ಅನೇಕ ಯೋಜನೆಗಳು ಜಾರಿಗೆ ತಂದಿದ್ದಾರೆ. ಬಡವರು, ರೈತರು, ದೀನ ದಲಿತರು, ಅಲ್ಪಸಂಖ್ಯಾತರ ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಶ್ರಮಿಸಲಾಗುತ್ತಿದೆ ಎಂದರು.