ನಿಮ್ಮ ಮನೆ ಅಂದರೆ ಯಾವುದು? ಅವರ ಮನೆ ಹೇಗಿದೆ ಅಂತ ಯಾರಿಗೆ ಗೊತ್ತು ? ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅಂದರೆ ಕಾಂಗ್ರೆಸ್‌ನಲ್ಲಿ ಅಂದ ಹಾಗೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ
ವಿಜಯಪುರ(ಏ.11): ಕಾಂಗ್ರೆಸ್ ಮನೆಯಲ್ಲಿ ಇರುವವರು ಅರ್ಧ ಪಾಕಿಸ್ತಾನ ಏಜೆಂಟರಿದ್ದಾರೆ. ಕಾಂಗ್ರೆಸ್ಸಿಗರು ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಸಮರ್ಥಿಸಿಕೊಂಡಿದ್ದರು. ಅದಕ್ಕೆ ಹೇಳಿದ್ದು ಕಾಂಗ್ರೆಸ್‌ನಲ್ಲಿ ಅರ್ಧ ಪಾಕಿಸ್ತಾನ ಇದೆ ಅಂತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ತಮ್ಮ ವಿರುದ್ಧ ಸಚಿವ ದಿನೇಶ ಗುಂಡೂರಾವ್ ಅವರ ಪತ್ನಿ ಟಬು ಅವರಿಂದ ಎಫ್ ಐಆರ್ ದಾಖಲಿಸಿದ ವಿಚಾರಕ್ಕೆ ನಗರದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ನಿಮ್ಮ ಮನೆ ಅಂದರೆ ಯಾವುದು? ಅವರ ಮನೆ ಹೇಗಿದೆ ಅಂತ ಯಾರಿಗೆ ಗೊತ್ತು ? ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅಂದರೆ ಕಾಂಗ್ರೆಸ್‌ನಲ್ಲಿ ಅಂದ ಹಾಗೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಗುಂಡೂರಾವ್ ಮನೆಯಲ್ಲಿದೆ ಅರ್ಧ ಪಾಕಿಸ್ತಾನ ' ಯತ್ನಾಳ್ ವಿರುದ್ಧ ತಿರುಗಿಬಿದ್ದ ಟಬು ರಾವ್
ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು
ನೋಡಿದರೆ ಏನು ಮಾಡೋದು? ನಾನು ಯಾವುದೇ ಸ್ತ್ರೀಲಿಂಗ, ಪುಲ್ಲಿಂಗ ಎಂಬ ಪದ ಬಳಸಿಲ್ಲ. ಅದನ್ನು ಅವರಿಗೆ ಅಂದಿರುವುದಾಗಿ ತಿಳಿದುಕೊಂಡ್ರೆ ಯತ್ನಾಳ್ ಏನು ಮಾಡೋಕ್ಕಾಗಲ್ಲ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಪ್ರಣಾಳಿಕೆ ವಿಚಾರಕ್ಕೆ ಲೇವಡಿ ಮಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯೇ ಒಂದು ದುರಂತ. 370 ಕಲಂ ಮತ್ತೆ ಜಾರಿಗೆ ತರುತ್ತೇವೆ ಅಂತಾರೆ. ಅಂದರೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗಅಂತಇವರುಭಾವಿಸಿಲ್ಲ. ಅಲ್ಪಸಂಖ್ಯಾತರಿಗಾಗಿ ವಿಶೇಷ ಕಾನೂನು ಮಾಡುತ್ತೇವೆ ಅಂತಾರೆ. ಮುಸ್ಲಿಂ ಅವರ ಪರವಾಗಿ ವಿಶೇಷ ಕಾನೂನು ಮಾಡುತ್ತಾರೆ ಅಂದರೆ 5 ವರ್ಷದಲ್ಲಿ ಪಾಕಿಸ್ತಾನ ಮಾಡುತ್ತಾರೆ ಅಂತ ಅರ್ಥ. ಇವರಿಗೆ ಮಾನ ಮರ್ಯಾದೆ ಇದೆಯಾ? ಒಂದಾದದ್ರೂ ಹಿಂದೂಗಳ ಪರವಾಗಿ ಏನಾದರೂ ಮಾಡಿದ್ದೀರಾ? ಅಯೋಧ್ಯೆ ರಾಮನಿಗೆ ವಿರೋಧ ಮಾಡಿದ ನಾಲಾಯಕರು ಕಾಂಗ್ರೆಸ್ಸಿಗರು ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳಿಗೆ ಉಳಿಗಾಲವಿಲ್ಲ: ಯತ್ನಾಳ್
ಈಶ್ವರಪ್ಪಪರ ಬ್ಯಾಟಿಂಗ್: ಈಶ್ವರಪ್ಪ ಮೋದಿ ಫೋಟೋ ಹಾಕಿದ್ದಕ್ಕೆ
ದೂರು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳ, ಪ್ರಧಾನಿ ಮೋದಿ ಫೋಟೋ ಹಾಕಲು ಯಾರದ್ದೂ ತಕರಾರು ಇಲ್ಲ. ಅವರು ಇಡೀ ಜಗತ್ತಿನ ಲೀಡರ್‌ಇದ್ದಾರೆ. ನಾನು ಮೋದಿ ಫ್ಯಾನ್ ಇದ್ದೇನೆ ಎಂದರೆ ಏನೂ ಮಾಡಕಾಗಲ್ಲ, ಮೋದಿ ಫೋಟೋ ಹಾಕಲು ನಾನು ವಿರೋಧ ಮಾಡಲ್ಲ ಎಂದು ಈಶ್ವರಪ್ಪ ಪರ ಯತ್ನಾಳ ಬ್ಯಾಟ್ ಬೀಸಿದರು.
ಸಿದ್ದರಾಮಯ್ಯ ಕೇವಲ ಚಾಮರಾಜನಗರ, ಮೈಸೂರಲ್ಲಿ ಮಾತ್ರ ಓಡಾಡುತ್ತಿದ್ದಾರೆ. ಅವರಿಗೆ ಗೊತ್ತಾಗಿದೆ ಅವರಿಗೆ ನಾವು ಅಲ್ಲಿಯೇ ಔಟ್ ಆಗುತ್ತೇವೆ ಅಂತ. ನಮ್ಮ ವಿಶ್ವನಾಥ ಅವರು ಹೇಳಿದ್ದು ಸರಿ ಇದೆ. ರಾಜ್ಯಕ್ಕೆ ಮೈಸೂರು ಮಹಾರಾಜರ ಕೊಡುಗೆ ಅಪಾರವಾಗಿದೆ. ಏಷ್ಯಾದಲ್ಲೇ ಮೊದಲು ವಿದ್ಯುತ್ ತಂದಿದ್ದು ಮೈಸೂರು ಮಹಾರಾಜರೇ. ಕಾರಣ ಅವರು ಅವಿರೋಧವಾಗಿ ಆಯ್ಕೆ ಆಗಿ ಬರಬೇಕು. ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಿಲ್ಕ್ ಸೇರಿದಂತೆ ಮಹಾರಾಜರ ಅನೇಕ ಕೊಡುಗೆಗಳು ಇವೆ ಎಂದಿದ್ದಾರೆ ಎಂದರು.