ಶಿವಮೊಗ್ಗ: ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಒಟ್ಟಿಗೆ ಪಾಲ್ಗೊಂಡ ಈಶ್ವರಪ್ಪ, ರಾಘವೇಂದ್ರ..!

By Kannadaprabha News  |  First Published Apr 11, 2024, 8:49 AM IST

ಶಿವಮೊಗ್ಗದ ಆದಿಚುಂಚನಗಿರಿ ಶಾಲಾ ಮೈದಾನದಲ್ಲಿ ಯುಗಾದಿ ಪ್ರಯುಕ್ತ ಆರ್‌ಎಸ್ ಎಸ್ 'ಯುಗಾದಿ ಸಂಭ್ರಮ' ಕಾರ್ಯಕ್ರಮ ಆಯೋಜಿಸಿತ್ತು. ವೇದಿಕೆ ಮುಂಭಾಗದಲ್ಲಿ ಗಣ್ಯರಿಗಾಗಿ ಹಾಕಲಾಗಿದ್ದ ಕುರ್ಚಿಗಳಲ್ಲಿ ಇಬ್ಬರು ದೂರ, ದೂರ ಆಸೀನರಾಗಿದ್ದರು. 

ಶಿವಮೊಗ್ಗ(ಏ.11):  ಯುಗಾದಿಯ ದಿನದಂದು ಆರ್‌ಎಸ್‌ಎಸ್‌ ಆಯೋಜಿಸಿದ್ದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಗಣ ವೇಷಧಾರಿಗಳಾಗಿ ಭಾಗಿಯಾದರು. ಆದರೆ, ಎಲ್ಲಿಯೂ ಪರಸ್ಪರ ಮಾತನಾಡದೆ, ಮುಖ ನೋಡದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

ಶಿವಮೊಗ್ಗದ ಆದಿಚುಂಚನಗಿರಿ ಶಾಲಾ ಮೈದಾನದಲ್ಲಿ ಯುಗಾದಿ ಪ್ರಯುಕ್ತ ಆರ್‌ಎಸ್ ಎಸ್ 'ಯುಗಾದಿ ಸಂಭ್ರಮ' ಕಾರ್ಯಕ್ರಮ ಆಯೋಜಿಸಿತ್ತು. ವೇದಿಕೆ ಮುಂಭಾಗದಲ್ಲಿ ಗಣ್ಯರಿಗಾಗಿ ಹಾಕಲಾಗಿದ್ದ ಕುರ್ಚಿಗಳಲ್ಲಿ ಇಬ್ಬರು ದೂರ, ದೂರ ಆಸೀನರಾಗಿದ್ದರು. 

Tap to resize

Latest Videos

undefined

ಬಂಡಾಯವೆದ್ದಿರುವ ಕೆ.ಎಸ್. ಈಶ್ವರಪ್ಪ ನಮ್ಮ ಕಟ್ಟಾಳು; ಅರೆರೇ.. ನಳೀನ್ ಕುಮಾರ್ ಕಟೀಲ್ ಮಾತಿನ ಮರ್ಮವೇನು?

ಇದಕ್ಕೆ ಮುನ್ನ ಪ್ರತ್ಯೇಕವಾಗಿ ಇಬ್ಬರೂ ಕೂಡ ಬೇರೆ ಬೇರೆ ಹಿರಿಯರೊಂದಿಗೆ ಪರಸ್ಪರ ಮಾತುಕತೆ ನಡೆಸಿದರು.

click me!