ಕ್ಷೇತ್ರದ ಜನತೆ ನನ್ನಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ, ಅವರ ಕೆಲಸ ಮಾಡಿಕೊಡಬೇಕಾದ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಟಿ. ನರಸೀಪುರ : ಕ್ಷೇತ್ರದ ಜನತೆ ನನ್ನಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ, ಅವರ ಕೆಲಸ ಮಾಡಿಕೊಡಬೇಕಾದ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ತಾಲೂಕಿನ ವ್ಯಾಸರಾಜಪುರ ಗ್ರಾಮದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
undefined
ತಾಲೂಕು ಮಟ್ಟದ ಅಧಿಕಾರಿಗಳು ಜನರ ಸಮಸ್ಯೆಗಳನ್ನು ತಾಲೂಕು ಮಟ್ಟದಲ್ಲೇ ಬಗೆಹರಿಸುವ ಮೂಲಕ ನನ್ನ ಬಳಿಗೆ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸಲು ಮೊದಲ ಆದ್ಯತೆ ನೀಡಬೇಕು. ಜನ ಸಂಪರ್ಕ ಸಭೆಯಲ್ಲಿ ಇಲಾಖಾವಾರು ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ಜನರ ಕಷ್ಟ ಸುಖಕ್ಕೆ ಸ್ಪಂದಿಸಬೇಕು. ನಿರ್ಲಕ್ಷ್ಯ ಧೋರಣೆ ತೋರುವ ಅಧಿಕಾರಿಗಳಿಗೆ ಯಾವುದೇ ಮುಲಾಜಿಲ್ಲದೇ ಷೋಕಾಸ್ ನೋಟೀಸ್ ನೀಡುವಂತೆ ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ಅವರಿಗೆ ಸೂಚಿಸಿದರು.
ಜನರು ನನ್ನ ಮೇಲೆ ವಿಶ್ವಾಸ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ನೀವು ಜನರ ಕೆಲಸ ಮಾಡುತ್ತೀರಾ ಎಂದು ನಾನು ನಿಮ್ಮನ್ನಿಲ್ಲಿಗೆ ತಂದು ಹಾಕಿದ್ದೇನೆ. ಜನರ ಕೆಲಸ ಮಾಡದೇ ನೀವು ಕಳ್ಳರಾದರೆ, ನಾನೂ ಕಳ್ಳನಾಗಬೇಕಾಗುತ್ತದೆ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಸೇರಿ ಜನತೆಯ ಸಮಸ್ಯೆ ಆಲಿಸಿ ಕೆಲಸ ಮಾಡಬೇಕಿದೆ ಎಂದರು.
ಅಧಿಕಾರಿಗಳು ಬಡವರ, ಕಾನೂನು ಪರವಾದ ಕೆಲಸ ಮಾಡಬೇಕು. ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುವ ಮೂಲಕ ಆಡಳಿತದಲ್ಲಿ ವಿಶ್ವಾಸ ಬರುವಂತೆ ಮಾಡಬೇಕು. ಸಿದ್ದರಾಮಯ್ಯ, ಮಹದೇವಪ್ಪ ಎಂದರೆ ಸಾಮಾನ್ಯ ಜನರು ಇಷ್ಟ ಪಡುತ್ತಾರೆ. ಹಾಗೆಯೇ ನಾವು ಜನಗಳನ್ನು ಹೆಚ್ಚು ಪ್ರೀತಿಸುತ್ತೇವೆ. ಆದರೆ ಇಷ್ಟ ಕಷ್ಟ ಸಾಲದು, ನಾವು ಕೂಡ ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕಲ್ಲವೇ ಎಂದು ಅವರು ಪ್ರಶ್ನಿಸಿದರು.
ಕ್ಷೇತ್ರದ ಅಭಿವೃದ್ಧಿ ಹಾಗು ಜನರ ಕೆಲಸ ಮಾಡಿಕೊಡುವುದು ನನ್ನ ಕೆಲಸ. ಹಾಗೆಯೇ ರಾಜಕೀಯವಾಗಿ ಗಟ್ಟಿಯಾಗಿ ಜನಪರವಾಗಿ ಹೋರಾಡುವುದು ನಿಮ್ಮ ಕೆಲಸ. ಸರ್ಕಾರದ ಯಾವ ಯೋಜನೆಗಳಿವೆಯೋ ಅವುಗಳೆಲ್ಲವನ್ನು ಜನರಿಗೆ ಮಾಡಿಕೊಡುವ ಕೆಲಸ ಮಾಡುತ್ತೇನೆ. ನಾನು ಅಧಿಕಾರದಲ್ಲಿ
ಇರುವವರೆಗೆ ಬಡವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಅಧಿಕಾರಿಗಳಿಗೆ ತಾಕೀತು
ತಲಕಾಡಿನಮುಡುಕುತೊರೆ ಸಮೀಪ ಬಾಬು ಜಗಜೀವನರಾಂ ಭವನದ ಕಾಮಗಾರಿ ಸ್ಥಗಿತಗೊಂಡಿದೆ, ವಾಲ್ಮೀಕಿ ಭವನ ಹಾಗು ಬುದ್ದ ವಿಹಾರದ ಅಸಸ್ ಮೆಂಟ್ ವರದಿ ನೀಡುವಂತೆ ಎಇಇ ಸತೀಶ್ ಚಂದ್ರ ಅವರಿಗೆ ಸೂಚಿಸಿದರು.
ಜಾಗ ಗುರುತಿಸಿ
ಕ್ಷೇತ್ರಕ್ಕೆ ಮಂಜೂರಾಗಿದ್ದ ಪಾಲಿಟೆಕ್ನಿಕ್ ಅನಿವಾರ್ಯ ಕಾರಣದಿಂದ ವಾಪಸ್ ಹೋಗಿತ್ತು. ಈಗ ಮತ್ತೆ ಕಾಲೇಜನ್ನು ತರಲಾಗಿದೆ. ಹೊರಳಹಳ್ಳಿ ಫಾರಂ ಬಳಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ ಸಂಬಂಧ ಮುಂದಿನ ವಾರವೇ ಭೂಮಿಪೂಜೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ 8 ಕೋಟಿ ಹಣ ಮೀಸಲಿರಿಸಲಾಗಿದೆ. ಅಲ್ಲದೆ ಇದೇ ಸ್ಥಳದಲ್ಲೇ ತಾಲೂಕು ಕ್ರೀಡಾಂಗಣ ಮಾಡಬೇಕಿದೆ. ಬಸ್ ಡಿಪೋಗೆ ಬೇಡಿಕೆ ಬಂದಿದೆ. ಇವೆಲ್ಲಕ್ಕೂ ಅನುದಾನ ನೀಡಲು ಸರ್ಕಾರ ಸಿದ್ದವಿದ್ದು ಜಾಗ ಗುರುತಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘ ಹಾಲು ಉತ್ಪಾದನೆ ಜೊತೆಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹೈನುಗಾರಿಕೆಯಿಂದ ಜನರ ಆರ್ಥಿಕ ಪರಿಸ್ಥಿತಿ ಪ್ರಗತಿ ಹೊಂದಲಿದೆ ಎಂದರು.
ಕೆಡಿಪಿ ಸದಸ್ಯ ಸುನೀಲ್ ಬೋಸ್, ತಾಪಂ ಮಾಜಿ ಅಧ್ಯಕ್ಷ ಶಿವಸ್ವಾಮಿ, ಜಿಪಂ ಮಾಜಿ ಸದಸ್ಯ ಹೊನ್ನನಾಯಕ, ಹುಣಸೂರು ಬಸವಣ್ಣ, ಗದ್ದೆಮೋಳೆ ಸಿದ್ದರಾಜು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ. ವಜ್ರೇಗೌಡ,
ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಎಂ. ಮಧುಕುಮಾರ್, ಡೈರಿ ಅಧ್ಯಕ್ಷ ಟಿ. ರಂಗಸ್ವಾಮಿ, ಉಪಾಧ್ಯಕ್ಷ ಎಂ. ಮುದ್ದಯ್ಯ, ನಿರ್ದೇಶಕರಾದ ಸಿದ್ದಪ್ಪಾಜಿ, ಪುಟ್ಟಸ್ವಾಮಿ, ಚೋಟಯ್ಯ, ಮಲ್ಲನಾಯಕ, ನಾಗರಾಜು, ನಂಜುಂಡೇಗೌಡ, ಸಿದ್ದೇಗೌಡ, ಬಸವಯ್ಯ, ಮಾರನಾಯಕ, ದೇವಮ್ಮ, ಸಾವಿತ್ರಮ್ಮ, ಕಾರ್ಯದರ್ಶಿ ಅಂದಾನಿಗೌಡ, ಮಾರ್ಗ ವಿಸ್ತರಣಾಧಿಕಾರಿ ಆರ್. ಪ್ರಮೋದ್ ಇದ್ದರು.