ಸಹಕಾರ ಕ್ಷೇತ್ರದಲ್ಲಿ ರಾಜಕೀಯವೇ ಹೆಚ್ಚಾಗಿದೆ : ಸಚಿವ ಕೆ. ವೆಂಕಟೇಶ್ ಬೇಸರ

By Kannadaprabha News  |  First Published Nov 20, 2023, 7:48 AM IST

ಸಹಕಾರ ಕ್ಷೇತ್ರದಲ್ಲಿ ಸಹಕಾರಕ್ಕಿಂತ ರಾಜಕೀಯವೇ ಹೆಚ್ಚಾಗಿದೆ ಎಂದು ರೇಷ್ಮೆ ಮತ್ತು ಪಶುಸಂಗೋಪನ ಸಚಿವ ಕೆ. ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.


 ಪಿರಿಯಾಪಟ್ಟಣ :  ಸಹಕಾರ ಕ್ಷೇತ್ರದಲ್ಲಿ ಸಹಕಾರಕ್ಕಿಂತ ರಾಜಕೀಯವೇ ಹೆಚ್ಚಾಗಿದೆ ಎಂದು ರೇಷ್ಮೆ ಮತ್ತು ಪಶುಸಂಗೋಪನ ಸಚಿವ ಕೆ. ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಚಿಟ್ಟೆನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಸಹಕಾರ ಸಪ್ತಹದ 70ನೇ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಸಹಕಾರಕ್ಕಿಂತ ಶೇ. 100 ರಷ್ಟು ರಾಜಕೀಯವೇ ಇರುತ್ತದೆ. ಕ್ಷೇತ್ರ ಹುಟ್ಟಿಕೊಂಡಿದ್ದು ಜನರ ಏಳಿಗೆಗಾಗಿ ಸ್ವಾವಲಂಬಿ ಭಾರತದ ಕನಸಿನಿಂದ ಹುಟ್ಟಿಕೊಂಡಿತ್ತು. ಜನರ ಆರ್ಥಿಕ ಮಟ್ಟ ಹೆಚ್ಚಾಗಲಿ ಎಂಬ ಉದ್ದೇಶದಿಂದ ಜನರ ಬಗ್ಗೆ ಹೆಚ್ಚು ಭಯ, ಭಕ್ತಿ, ಕಾಳಜಿ ಬದ್ಧತೆ ಇಟ್ಟುಕೊಂಡು ಮಾಡಬೇಕಾಗುತ್ತದೆ ಎಂದರು.

Tap to resize

Latest Videos

undefined

ಆದರೆ ಯಾವ ಕೆಲಸವೂ ಇಲ್ಲ. ದಿನ ಕಳೆದಂತೆ ಈ ಸಹಕಾರ ಕ್ಷೇತ್ರ ಹಲವು ರೀತಿಯ ರೂಪ ಪಡೆದುಕೊಂಡಿತು. ತಮ್ಮದೇ ರೀತಿ ಕೆಲಸ ಮಾಡಿ ಮನಸ್ಸಿಗೆ ನೋವುಂಟು ಮಾಡುತ್ತಾರೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ ಜನರ ಒಳಿತು ಬೇಕು. ಅದಕ್ಕಾಗಿ ಇದನ್ನು ಉಪಯೋಗಿಸಿಕೊಳ್ಳಬೇಕು. ರಾಜಕೀಯ ಮುಖಂಡರು ತಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಬೇಡ ಜನರಿಗೆ ಒಳಿತು ಮಾಡಬೇಕೆ ಹೊರತು ರಾಜಕೀಯ ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಸ್ವಾರ್ಥಕೋಸ್ಕರ ಸಹಕಾರ ಕ್ಷೇತ್ರ ಬಳಸಿಕೊಳ್ಳುವುದು ತರವಲ್ಲ. ಜನರಿಗೆ ಸರ್ಕಾರಿ ಸವಲತ್ತು ತಲುಪಬೇಕು ಆ ಜವಾಬ್ದಾರಿಯನ್ನು ಅಧಿಕಾರಿಗಳು ಕೂಡ ಮಾಡಬೇಕು. ಆದರೆ ಸಹಕಾರಿ ಕ್ಷೇತ್ರ ಕುಲಗೆಟ್ಟು ಹೋಗಿದೆ. ಮಹಿಳೆಯರು ಪುರುಷರಿಗಿಂತ ಮುಂದೆ ಬರಲು ಪ್ರಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. 5 ಲಕ್ಷದವರೆಗೆ ಜಿರೋ ಪರ್ಸೆಂಟ್ ಬಡ್ಡಿದರದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಲ ನೀಡುತ್ತಿದ್ದರು. ಕೆಲವು ಜನರು ಹೆಚ್ಚು ಹಣದ ಆಸೆಗಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದು ಎಲ್ಲಾ ರೆಸ್ಟೋರೆಂಟ್‌ ತುಂಬಿ ತುಳುಕುತ್ತಿದೆ ಎಂದರು.

ಕೆಲವು ಮಂದಿ ಸಹಕಾರ ಕ್ಷೇತ್ರವನ್ನು ತಮ್ಮ ಮನೆಯ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಸಾಲ ಪಡೆಯುವವರು ತಮ್ಮ ಇತಿಮಿತಿಯಲ್ಲಿ ಸಾಲ ಪಡೆಯಬೇಕು. ರಾಜ್ಯದಲ್ಲಿ ಬರಗಾಲವಿದ್ದು ಸಾಲ ಮುಂದುವರಿಸಲು ಪರಿಶೀಲಿಸುವುದಾಗಿ ಅವರು ಹೇಳಿದರು.

ಸಹಕಾರಿ ಮುಖಂಡ ಬಿ.ಎಸ್. ರಾಮಚಂದ್ರ ಮಾತನಾಡಿ, ಮಹಿಳಾ ಸಂಘಗಳಿಗೆ ಸಾಲ ನೀಡಿ ಪ್ರವೇಟ್ ಫೈನಾನ್ಸ್‌ ಅವರು ಮಹಿಳೆಯರಿಗೆ ವಾರಕ್ಕೊಮ್ಮೆ ಹಣ ನೀಡಿ ಕಂತು ಸಾಲಕಟ್ಟಿ ಎಂದು ಜನರಿಗೆ ಹಿಂಸೆ ನೀಡುತ್ತಿದ್ದು ಮನೆಗಳಿಗೆ ತೆರಳಿ ಅವರಿಗೆ ಮಾನಹಾನಿ ಮಾಡುತ್ತಿದ್ದಾರೆ ಎಂದು ದೂರಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್‌.ವಿ. ರಾಜೀವ್‌ ಮಾತನಾಡಿ, ಐದು ಟ್ರಿಲಿಯನ್ ವ್ಯವಹಾರ ಶೂನ್ಯ ಬಡ್ಡಿ ದರದಲ್ಲಿ ನಡೆಸುತ್ತಿರುವ ಈ ಸಹಕಾರಿ ಕ್ಷೇತ್ರ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಅದೇ ರೀತಿ ಸಮಾನಾಂತರ ಬೆಳವಣಿಗೆಗೆ ಸಹಕಾರಿಯಾಗಿದೆ. ಸಹಕಾರ ಸಂಘಗಳಲ್ಲಿ ಸಾಲ ಹೆಚ್ಚಾಗಿ ಮಾಡದೆ ರೈತರು ಉಳಿತಾಯದ ಕಡೆ ಹೆಚ್ಚು ಗಮನ ಕೊಡಬೇಕು. ರೈತರು ಬೆಳೆಯುವ ಬೆಳೆಯು ರಾಸಾಯನಿಕ ಗೊಬ್ಬರ ಮುಕ್ತ ವ್ಯವಸಾಯವಾಗಿರಬೇಕು ಎಂದರು.

ಈ ವೇಳೆ ಮುಖಂಡ ಬಿ.ಎಸ್. ರಾಮಚಂದ್ರ. ಜಿಲ್ಲಾ ಹಾಪ್ ಕಾಮ್ಸ್‌ ನಿರ್ದೇಶಕಿ ನಳಿನಿ, ಗ್ರಾಪಂ ಅಧ್ಯಕ್ಷೆ ರೂಪಾ, ಮೈಮುಲ್ ಎಂಡಿ ವಿಜಯ್. ಕುಮಾರ್, ಸಿಡಿಒ ಜಿತೇಂದ್ರ. ಆರ್.ಎಚ್. ಪವಿತ್ರಾ, ಮೈಮಲ್ ವ್ಯವಸ್ಥಾಪಕ ದಿವಾಕರ್. ಹೆಚ್ಚುವರಿ ವ್ಯವಸ್ಥಾಪಕ ನಿಶ್ಚಿತ್, ಅರುಣ್ ಮೊದಲಾದವರು ಇದ್ದರು.

click me!