'ಯಡಿಯೂರಪ್ಪ ಅವರಂಥವರನ್ನು ಬಹಳಷ್ಟು ಕಂಡಿದ್ದೇನೆ, ಇದು ಬಹಳ ಕಾಲ ನಡೆಯಲ್ಲ'

By Kannadaprabha News  |  First Published Sep 13, 2019, 2:02 PM IST

ಯಡಿಯೂರಪ್ಪ ಅವರು ಜೆಡಿಎಸ್‌ ವಿರುದ್ಧ ದ್ವೇಷ ರಾಜಕಾರಣ ಆರಂಭಿಸಿದ್ದು, ಇದು ಬಹಳಷ್ಟುದಿನ ನಡೆಯುವುದಿಲ್ಲ. ಯಡಿಯೂರಪ್ಪ ಅಂತಹವರನ್ನು ಬಹಳಷ್ಟುಮಂದಿಯನ್ನು ಕಂಡಿದ್ದೇನೆ ಎಂದು ಜೆಡಿಎಸ್‌ ಮುಖಂಡರಾದ ಮಾಜಿ ಸಚಿವ ಎಚ್‌.ಡಿ. ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.


ಹಾಸನ(ಸೆ.13): ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜೆಡಿಎಸ್‌ ವಿರುದ್ಧ ದ್ವೇಷ ರಾಜಕಾರಣ ಆರಂಭಿಸಿದ್ದು, ಇದು ಬಹಳಷ್ಟುದಿನ ನಡೆಯುವುದಿಲ್ಲ. ಯಡಿಯೂರಪ್ಪ ಅಂತಹವರನ್ನು ಬಹಳಷ್ಟುಮಂದಿಯನ್ನು ಕಂಡಿದ್ದೇನೆ ಎಂದು ಜೆಡಿಎಸ್‌ ಮುಖಂಡರಾದ ಮಾಜಿ ಸಚಿವ ಎಚ್‌.ಡಿ. ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಹಾಸನ: ಹಾಲು ಒಕ್ಕೂಟದ ಕೋಟಿ ಲಾಭದ ಹಣ ರೈತರಿಗೆ

Latest Videos

undefined

ಕುಮಾರಸ್ವಾಮಿ ಸಿಎಂ ಆಗಿದ್ರೆ ಕೆಎಂಎಫ್‌ ಅಧ್ಯಕ್ಷನಾಗುವುದು ಕಷ್ಟ ಆಗ್ತಿರ್ಲಿಲ್ಲ:

ಗುರುವಾರ ಹಾಸನ ಹಾಲು ಒಕ್ಕೂಟದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕಾಲಚಕ್ರ ಉರುಳುತ್ತಲೇ ಇರುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. 14 ತಿಂಗಳು ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೆಎಂಎಫ್‌ ಅಧ್ಯಕ್ಷನಾಗುವುದು ಕಷ್ಟಆಗುತ್ತಿರಲಿಲ್ಲ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಲ್ಲೇ ಕೆಎಂಎಫ್‌ ನಿರ್ದೇಶಕರಾಗಿದ್ದ ಬೆಂಗಳೂರು ಮತ್ತು ರಾಮನಗರ ಒಕ್ಕೂಟಗಳ ನಿರ್ದೇಶಕರನ್ನು ವಜಾ ಮಾಡಿದರು ಎಂದು ಟೀಕಿಸಿದರು.

'ಜಿಟಿಡಿ ಬಿಜೆಪಿಗೆ ಅಸ್ಪೃಶ್ಯರಲ್ಲ: BJPಗೆ ಬಂದ್ರೆ ಒಳ್ಳೇದು'..!

ಈ ಹಿಂದೆ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ವಿಧಾನಸಭೆ ಅಧಿವೇಶನದಲ್ಲಿ ನನಗೆ ಸರ್ಕಾರ ಆದೇಶ ಮತ್ತಿತರ ಕಡತಗಳ ಬಗ್ಗೆ ಮಾಹಿತಿಯೇ ತಿಳಿಸುವುದಿಲ್ಲ ಎಂದು ಯಡಿಯೂರಪ್ಪನವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆಗ ನಾನು, ಸರ್ಕಾರಿ ಆಡಳಿತದ ಕೀ ನನ್ನತ್ರ ಇದೆ. ನನ್ನನ್ನು ಕೇಳಿ ಎಂದು ಹೇಳಿದ್ದೆ ಎಂದರು.

ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡ್ತಿದ್ದಾರೆ:

ಯಡಿಯೂರಪ್ಪ ಸಹಿ ಹಾಕಿದ ನಂತರ ನನ್ನ ಬಳಿಗೆ ಬರುತ್ತವೆ. ಅವರನ್ನು (ಯಡಿಯೂರಪ್ಪನವರನ್ನು) ಹೇಗೆ ನಿಭಾಯಿಸಬೇಕೆಂಬುದು ಗೊತ್ತಿದ್ದೆ. ಅಧಿಕಾರಕ್ಕೆ ಬಂದ ತಕ್ಷಣ ಟೀಕೆ. ಆರೋಪ ಮಾಡುವುದು ಸರಿಯಲ್ಲ ಎಂದು ನಿರ್ಧರಿಸಲಾಗಿತ್ತು. ಆದರೆ ಯಡಿಯೂರಪ್ಪನವರು ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಬಹಿರಂಗವಾಗಿ ಹೇಳುತ್ತಲೇ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

click me!