ಅನಕ್ಷರಸ್ಥರಿಗೆ ಶಿಕ್ಷಣ ನೀಡಿದರೆ ನಿವೇಶನ ಉಚಿತ : ಶಾಸಕ ನಾರಾಯಣಸ್ವಾಮಿ

By Kannadaprabha NewsFirst Published Sep 13, 2019, 1:50 PM IST
Highlights

ಕಾಂಗ್ರೆಸ್ ಶಾಸಕರೋರ್ವರು ತಮ್ಮ ಕ್ಷೇತ್ರದ ಜನತೆಗೆ ಬಂಪರ್ ಆಫರ್ ನೀಡಿದ್ದಾರೆ. ಉಚಿತ ನಿವೇಶನ ನೀಡುವುದಾಗಿ ತಿಳಿಸಿದ್ದಾರೆ.

ಬಂಗಾರಪೇಟೆ [ಸೆ.13]:  ಗ್ರಾಮೀಣ ಭಾಗದಲ್ಲಿ 6 ತಿಂಗಳು ಕಾಲ ನಿರಂತರವಾಗಿ ರಾತ್ರಿಯ ವೇಳೆ ಅನಕ್ಷರಸ್ಥರಿಗೆ ಶಿಕ್ಷಣ ಕಲಿಸಿಕೊಡುವರೋ ಅಂತಹ ಬೋಧಕರಿಗೆ ಉಚಿತವಾಗಿ ನಿವೇಶನ ಭಾಗ್ಯ ಕಲ್ಪಿಸಿಕೊಡಲಾಗುವುದು ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಭರವಸೆ ನೀಡಿದರು.

ಅವರು ತಾಪಂ ಸಭಾಂಗಣದಲ್ಲಿ 54ನೇ ವಿಶ್ವ ಸಾಕ್ಷರತ ದಿನಾಚರಣೆ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಅನಕ್ಷರತೆ ಹೆಚ್ಚಾಗಿರುವುದರಿಂದ ಅವರಲ್ಲಿ ಅಕ್ಷರ ಜ್ಞಾನ ಮೂಡಿಸಿ ಸ್ವಾವಲಂಭಿ ಜೀವನ ಸಾಗಿಸಲು ಉತ್ತೇಜಿಸಬೇಕೆಂದು ಹೇಳಿದರು.

6 ತಿಂಗಳು ರಾತ್ರಿ ಪಾಠ ಮಾಡಿ

ಅನಕ್ಷರಸ್ಥರನ್ನು ವಿದ್ಯಾವಂತರನ್ನಾಗಿ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದನ್ನು ಬಳಸಿಕೊಂಡು ಗ್ರಾಮಗಳಲ್ಲಿ ರಾತ್ರಿಯ ವೇಳೆ ಅಕ್ಷರ ಕಲಿಯಬೇಕು. ಈ ರೀತಿ ನಿರಂತರವಾಗಿ 6ತಿಂಗಳುಗಳ ಕಾಲ ಪಾಠ ಹೇಳಿಕೊಡುವ ಬೋಧಕರಿಗೆ ಗ್ರಾಮಗಳಲ್ಲೇ ಉಚಿತ ನಿವೇಶನ ಜೊತೆಗೆ ಪಶು ಸಂಗೋಪನಾ ಇಲಾಖೆಯಿಂದ ಹೈನುಗಾರಿಕೆ ನಡೆಸಲು ಹಸು ಸಹ ಕೊಡಲಾಗುವುದು ಎಂದು ಭರವಸೆ ನೀಡಿದರು. ಬೋಧಕರಿಗೆ ಸರ್ಕಾರ ನೀಡುತ್ತಿರುವ ವೇತನ ಸಾಲದು. ಅದನ್ನು ಕನಿಷ್ಟ5 ಸಾವಿರಕ್ಕೆ ಹೆಚ್ಚಳ ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು

ಬಿಇಒ ಬಿ.ಪಿ.ಕೆಂಪಯ್ಯ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣವಿಲ್ಲದಿದ್ದರೆ ಸಮಾಜದಲ್ಲಿ ಬದುಕಲು ಕಷ್ಟಕರವಾಗಿದೆ. ಅಕ್ಷರ ಜ್ಞಾನವಿದ್ದರೆ ಪ್ರಪಂಚದಲ್ಲಿ ಎಲ್ಲಿಬೇಕಾದರೂ ಬದುಕಬಹುದು. ಸಾಕ್ಷರತ ಪ್ರಮಾಣದಲ್ಲಿ ಈಗಾಗಲೇ ಸರ್ಕಾರದ ಗುರಿಯನ್ನು ಮುಟ್ಟುವ ಹಂತದಲ್ಲಿ ತಾಲೂಕು ಮುನ್ನಡೆಯತ್ತ ಸಾಗಿದೆ. ಶೇ 100 ಗುರಿ ಮುಟ್ಟಲು ಎಲ್ಲರ ಸಹಕಾರ ಬೇಕಾಗಿದೆ. ಸರ್ಕಾರ ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಎಲ್ಲಾ ನೆರವನ್ನೂ ನೀಡಿದೆ. ಆದರೂ ಪೋಷಕರು ವಿದ್ಯೆಯ ಮಹತ್ವವನ್ನು ತಿಳಿಯದೆ ಕೂಲಿ ಕೆಲಸಕ್ಕೆ ಕಳುಹಿಸುವ ಪ್ರವೃತ್ತಿ ಇನ್ನೂ ಜೀವಂತವಾಗಿರುವುದು ವಿಷಾದನೀಯ ಎಂದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ಮಮತಾ ರಮೇಶ್‌, ಇಒ ವೆಂಕಟೇಶಪ್ಪ, ಅಕ್ಷರದಾಸೋಹ ಅಧಿಕಾರಿ ಶಶಿಕಲಾ, ಸಿಡಿಪಿಒ ಇಲಾಖೆ ಜೋತಿ, ಎಚ್‌.ಕೆ.ನಾರಾಯಣಸ್ವಾಮಿ, ಫೋಕಸ್‌ ಸಂಸ್ಥೆ ಅಧ್ಯಕ್ಷ ಎ.ಹರೀಶ್‌ ಮತ್ತಿತರರು ಇದ್ದರು.

click me!