ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆ ಬಗ್ಗೆ ನನಗೆ ನೋಟೀಸ್‌ ಬಂದಿಲ್ಲ : ಮುಖಂಡ

By Kannadaprabha News  |  First Published Apr 6, 2023, 6:32 AM IST

ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ನನಗೆ ಯಾವುದೇ ರೀತಿಯ ನೋಟೀಸ್‌ ಆಗಲಿ ಮಾಹಿತಿ ಆಗಲಿ ಇಲ್ಲ ಎಂದು ಕಾಂಗ್ರೆಸ್‌ ಮುಖಂಡ ಜಿಎಸ್‌ ಪ್ರಸನ್ನ ಕುಮಾರ್‌ ಮಾಹಿತಿ ನೀಡಿದರು.


  ಗುಬ್ಬಿ :  ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ನನಗೆ ಯಾವುದೇ ರೀತಿಯ ನೋಟೀಸ್‌ ಆಗಲಿ ಮಾಹಿತಿ ಆಗಲಿ ಇಲ್ಲ ಎಂದು ಕಾಂಗ್ರೆಸ್‌ ಮುಖಂಡ ಜಿಎಸ್‌ ಪ್ರಸನ್ನ ಕುಮಾರ್‌ ಮಾಹಿತಿ ನೀಡಿದರು.

ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ನಾವು ಸಹ ಇಂದಿನಿಂದ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ಆರಂಭಿಸಿದ್ದೇವೆ ಇದುವರೆಗೂ ಯಾರಿಗೂ ಸಹ ಕಾಂಗ್ರೆಸ್‌ ಅಭ್ಯರ್ಥಿ ಯನ್ನು ಘೋಷಣೆ ಮಾಡಿಲ್ಲ ಹಾಗಾಗಿ ನಮ್ಮ ಪಕ್ಷದ ಸಂಘಟನೆ ಮಾಡುತ್ತಿದ್ದೇವೆ.

Tap to resize

Latest Videos

ಕಾಂಗ್ರೆಸ್‌ ಜನರಿಗೆ ಮತ್ತೆ ಮೋಸ ಮಾಡಲು ಹೊರಟಿದೆ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಸಾಮಾಜಿಕ ಜಾಲತಾಣದಲ್ಲಿ ಪಕ್ಷದಿಂದ ತೆಗೆದು ಹಾಕಿದ್ದೇವೆ ಎಂಬ ವದಂತಿ ಹರಡಿದೆ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಪರಮೇಶ್ವರ್‌ ಅವರು ಬಂದಮೇಲೆ ಸ್ಪಷ್ಟನೆ ಸಿಗಲಿದೆ. ಇನ್ನೂ ಎರಡು ಲಕ್ಷ ಕಟ್ಟಿಅರ್ಜಿಯನ್ನೇ ಹಾಕದಂತಹ ವರಿಗೆ ಮನ್ನಣೆ ನೀಡುತ್ತೀರಾ ಎಂದರೆ ಅದಕ್ಕೆ ಕಾಂಗ್ರೆಸ್‌ ಪಕ್ಷದ ಬಗ್ಗೆ ಜನರೇ ಬೇಸರ ವ್ಯಕ್ತ ಪಡಿಸುತ್ತಾರೆ. ನನ್ನನ್ನು ತೆಗೆದು ಹಾಕಲು ದೊಡ್ಡ ಪಿತೂರಿ ನಡೆಯುತ್ತಿದೆ ನಾನು ಮತ್ತು ಹೊನ್ನಗಿರಿ ಗೌಡರು ಆಕಾಂಕ್ಷಿಗಳಾಗಿದ್ದೇವೆ. ಕೊನೆಯವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಮುಖಂಡ ಹೊನ್ನಗಿರಿ ಗೌಡ ಮಾತನಾಡಿ, ಯಾವುದೇ ಕಾರಣಕ್ಕೂ ಮಾಜಿ ಶಾಸಕರಿಗೆ ನಾವು ಕೆಲಸ ಮಾಡುವುದಿಲ್ಲ. ಅವರ ಮೇಲೆ ದ್ವೇಷವನ್ನು ಸಾ​ಸುವುದಿಲ್ಲ. ಪ್ರಚಾರವನ್ನು ಮಾಡುವುದಿಲ್ಲ ದೇವೇಗೌಡರನ್ನ ಬೈದಿರುವುದು ಬೇಸರ ತಂದಿದೆ. ನನಗೆ ಪಕ್ಷದಲ್ಲಿ ಬೇಸರ ತಂದರೆ ನಾನು ರಾಜೀನಾಮೆ ಕೊಡುತ್ತೇನೆ. ನಾವು ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ನಮ್ಮೆಲ್ಲಾ ಕಾರ್ಯಕರ್ತರು ಹಿತೈಷಿಗಳ ಜೊತೆ ಮಾತುಕತೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಜೆಡಿಎಸ್‌ ಬಿಟ್ಟು ಕಾಂಗ್ರೆಸಿಗೆ ಬಂದಿರುವವರು ಯಾರು ಇದುವರೆಗೂ ಗೆದ್ದಿಲ್ಲ ನಿಜವಾದ ಕಾಂಗ್ರೆಸ್ಸಿಗರು ಮಾತ್ರ ಗೆಲುವು ಪಡೆಯುತ್ತಾರೆ ಎಂದರು.

ಮುಖಂಡ ಶಶಿಕಿರಣ್‌ ಮಾತನಾಡಿ, ಇದುವರೆಗೂ ಬಿಫಾರಂ ಯಾರಿಗೂ ನೀಡಿಲ್ಲ, ಸಿ ಫಾರಂಗೂ ಸಹ ತುಂಬಾ ಬೆಲೆ ಇದ್ದು ಅದನ್ನು ಸಹ ಪಡೆಯುವಂತಹ ಎಲ್ಲಾ ಅವಕಾಶಗಳು ಇವೆ. ಕಷ್ಟಬಿದ್ದು ಪಕ್ಷ ಕಟ್ಟಿರುವಂತವರಿಗೆ ಗೌರವ ಸಿಗಬೇಕು ಎಂಬುದು ನಮ್ಮ ಒತ್ತಾಯವಾಗಿದ್ದು ನಾವು ಪಕ್ಷದಲ್ಲೇ ಇರುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಂ.ವಿ ಶ್ರೀನಿವಾಸ್‌, ಶಿವಣ್ಣ ಗೋವಿಂದಪ್ಪ, ಶಂಕರೇಗೌಡ, ಯೋಗೀಶ್‌, ಲಕ್ಷ್ಮಿ ನಾರಾಯಣ್‌, ಸಿದ್ದೇಶ್‌, ಗಂಗಾಧರ್‌, ಹೇಮಂತ್‌ ರಂಗನಾಥ್‌ ಶಿವಾನಂದ್‌ ಸೇರಿದಂತೆ ಇನ್ನಿತರರರು ಹಾಜರಿದ್ದರು.

ಕಾಂಗ್ರೆಸ್‌ಗೆ ಮತ ಹಾಕಿದರೆ ಸಿದ್ದರಾಮಯ್ಯ ಸಿಎಂ

ಗಂಗಾವತಿ(ಏ.06): ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿದರೆ ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಹೇಳಿದರು. ತಾಲೂಕಿನ ಹಂಪಸದುರ್ಗಾದಲ್ಲಿ ಜರುಗಿದ ಚುನಾವಣೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ ಇದ್ದು, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುತ್ತಿದ್ದು, ನನಗೆ ಮತ ಹಾಕಿ ಬೆಂಬಲಿಸಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಿದರೆ ಮುಖ್ಯಮಂತ್ರಿ ಆಗುವುದರಲ್ಲಿ ಸಂದೇಹ ಇಲ್ಲ ಎಂದರು.

ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಹಲವಾರು ಯೋಜನೆ ಅನುಷ್ಟಾನಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮತ್ತೇ ಮುಖ್ಯಮಂತ್ರಿ ಆದರೆ ಹಲವಾರು ಯೋಜನೆ ಕಾರ್ಯಗತಗೊಳಿಸುತ್ತಾರೆ ಎಂದರು.

ಈ ಭಾರಿ ಚುನಾವಣೆಗೆ ಬಳ್ಳಾರಿಯಿಂದ ಬಂದಿದ್ದಾರೆ, ಈಗಾಗಲೇ ಲೂಟಿ ಮಾಡಿ ಸಾಕಷ್ಟುಹೆಸರು ಪಡೆದಿದ್ದಾರೆ.ಇಂತವರು ಇಲ್ಲಿ ಇರಲಿಕ್ಕೆ ಸಾಧ್ಯಇಲ್ಲ. ಸರ್ಕಾರದ ಸಂಪತ್ತು ನಮ್ಮ ಸಂಪತ್ತು ಆಗಿದೆ.ಇಂತಹ ಸರ್ಕಾರದ ಲೂಟಿ ಮಾಡಿ ಈಗ ಗಂಗಾವತಿಗೆ ಬಂದಿದ್ದಾರೆ. ಇವರಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಹಲವಾರು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

ಕಾಂಗ್ರೆಸ್ಸಿನವರಿಗೆ ಗುಂಡಿಗೆನೂ ಇಲ್ಲ, ಗಂಡಸ್ತನವೂ ಇಲ್ಲ: ಸಚಿವ ಆನಂದ್‌ ಸಿಂಗ್‌ ವಿವಾದಾತ್ಮಕ ಹೇಳಿಕೆ

ರೋಡ್‌ ಶೋ:

ಹಂಪಸ ದುರ್ಗಾದಲ್ಲಿ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ರೋಡ್‌ ಶೋ ನಡೆಸಿದರು.ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಗ್ರಾಮದಲ್ಲಿ ಮತ ಯಾಚಿಸಿದರು. ಅಸಂಖ್ಯಾತ ಮಹಿಳೆಯರು,ಯುವಕರು ಜೈ ಘೋಷ ಹಾಕಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!