ಡಾ.ಜಿ.ಪರಮೇಶ್ವರ್‌ಗೆ ಕೊರಟಗೆರೆ ಕ್ಷೇತ್ರದಲ್ಲಿ ಸೋಲಿನ ಭಯ ಕಾಡ್ತೀದೆ. ಅದಕ್ಕಾಗಿಯೇ ನಮ್ಮ ವೀರಶೈವ-ಲಿಂಗಾಯಿತ ಸಮಾಜದ ಸಮಾವೇಶ ಮಾಡ್ತಾ ಇದಾರೇ. ಕೊರಟಗೆರೆ ವೀರಶೈವ-ಲಿಂಗಾಯಿತರ ನಡೆ ಪರಮೇಶ್ವರ್ ಕಡೆ ಸಮಾವೇಶಕ್ಕೆ ನಮ್ಮ ಸಮಾಜದ ಮುಖಂಡರು ಬರುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರೈತಮೊರ್ಚ ಜಿಲ್ಲಾಧ್ಯಕ್ಷ ವಿಶ್ವನಾಥ್ ಅಪ್ಪಾಜಪ್ಪ ತಿಳಿಸಿದರು.
ಕೊರಟಗೆರೆ: ಡಾ.ಜಿ.ಪರಮೇಶ್ವರ್‌ಗೆ ಕೊರಟಗೆರೆ ಕ್ಷೇತ್ರದಲ್ಲಿ ಸೋಲಿನ ಭಯ ಕಾಡ್ತೀದೆ. ಅದಕ್ಕಾಗಿಯೇ ನಮ್ಮ ವೀರಶೈವ-ಲಿಂಗಾಯಿತ ಸಮಾಜದ ಸಮಾವೇಶ ಮಾಡ್ತಾ ಇದಾರೇ. ಕೊರಟಗೆರೆ ವೀರಶೈವ-ಲಿಂಗಾಯಿತರ ನಡೆ ಪರಮೇಶ್ವರ್ ಕಡೆ ಸಮಾವೇಶಕ್ಕೆ ನಮ್ಮ ಸಮಾಜದ ಮುಖಂಡರು ಬರುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರೈತಮೊರ್ಚ ಜಿಲ್ಲಾಧ್ಯಕ್ಷ ವಿಶ್ವನಾಥ್ ಅಪ್ಪಾಜಪ್ಪ ತಿಳಿಸಿದರು.
ಕೊರಟಗೆರೆ ಪಟ್ಟಣದ ಕಾಮಧೇನು ಭವನದಲ್ಲಿ ಕೊರಟಗೆರೆ ವೀರಶೈವ ಲಿಂಗಾಯಿತ ಸಮುದಾಯದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ವೀರಶೈವ ಮತ್ತು ಲಿಂಗಾಯಿತ ಸಮುದಾಯ ಬೇರ್ಪಡಿಸುವ ಕೆಲಸವನ್ನು ಸಿದ್ದರಾಮಯ್ಯ ಸರಕಾರ ಮಾಡಿತ್ತು. ನಮ್ಮ ಸಮಾಜಕ್ಕೆ ಮೀಸಲು ಹೆಚ್ಚಿಸಿರುವ ಬೊಮ್ಮಾಯಿ ನೇತೃತ್ವದ ಬಿಜೆಪಿ ಪಕ್ಷದ ಪರವಾಗಿಯೇ ವೀರಶೈವ ಲಿಂಗಾಯಿತ ಸಮುದಾಯ ಇರಲಿದೆ. ಕೊರಟಗೆರೆ ಕ್ಷೇತ್ರದಲ್ಲಿ ಅತೀ ಶೀಘ್ರದಲ್ಲಿ ವೀರಶೈವ ಲಿಂಗಾಯಿತ ಸಮಾಜದ ಬೃಹತ್ ಸಮಾವೇಶ ಏರ್ಪಡಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಯುವಮೋರ್ಚಾ ರಾಜ್ಯಕಾರ್ಯಕಾರಿಣಿ ಸದಸ್ಯ ರುದ್ರೇಶ್ ಮಾತನಾಡಿ, ವೀರಶೈವ ಲಿಂಗಾಯಿತ ಸಮಾಜವು ಬಿಜೆಪಿ ಸರಕಾರದ ಪರವಾಗಿಯೇ ಇದೆ. ನಮ್ಮ ಸಮಾಜಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಅನ್ಯಾಯ ಆಗಿದೆ. ಚುನಾವಣೆಗೆ ಮಾತ್ರ ಸೀಮಿತವಾದ ಕಾಂಗ್ರೆಸ್ ಸಮಾವೇಶ ಮತದಾರನ ಸೆಳೆಯುವ ಪ್ರಯತ್ನವಷ್ಠೆ. ಸಮಾಜದ ಮುಖಂಡರು ಯಾರು ಸಮಾವೇಶಕ್ಕೆ ಹೋಗದೇ ಬಿಜೆಪಿ ಪಕ್ಷದ ಪರವಾಗಿಯೇ ಇರಬೇಕಿದೆ ಎಂದು ಮನವಿ ಮಾಡಿದರು.
ಕೊರಟಗೆರೆ ಲಿಂಗಾಯಿತ ಸಮಾಜದ ಮುಖಂಡ ಶಿವರುದ್ರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಲಿಂಗಾಯಿತ ಸಮಾಜಕ್ಕೆ ಅನ್ಯಾಯ ಮಾಡಿದೆ. ಕಳೆದ 5ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯದ ಜನರ ಮೇಲೆ ಜಾತಿನಿಂದನೆ ಪ್ರಕರಣ ಹೆಚ್ಚಾಗಿ ದಾಖಲಾಗಿವೆ. ಕಾಂಗ್ರೆಸ್ ಪಕ್ಷ ವೀರಶೈವ-ಲಿಂಗಾಯಿತ ಸಮುದಾಯವನ್ನ ಹೊಡೆಯುವ ಕೆಲಸವನ್ನು ಮಾಡಿದೆ. ಬಿಜೆಪಿ ಪಕ್ಷದಿಂದ ಮಾತ್ರ ರಕ್ಷಣೆ ಸಾಧ್ಯ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷ ನಟರಾಜ್, ರೈತಮೋರ್ಚ ಅಧ್ಯಕ್ಷ ಮುಕ್ಕಣ್ಣಯ್ಯ, ಪಪಂ ಸದಸ್ಯ ಪ್ರದೀಪಕುಮಾರ್, ಗ್ರಾಪಂ ಉಪಾಧ್ಯಕ್ಷ ಉಮೇಶ್‌ಚಂದ್ರ, ಮುಖಂಡರಾದ ಚಂದ್ರಪ್ಪ, ಆರಾಧ್ಯ, ಶ್ರೀಧರ್, ಶಿವಕುಮಾರ್, ದಯಾನಂದ, ರವಿಕುಮಾರ್, ನಂಜಾರಾಧ್ಯ, ವೀರಭದ್ರಯ್ಯ, ಗಂಗಾಧರ್, ಬಸವರಾಜು, ನಂಜಪ್ಪ, ರಾಜಕುಮಾರ್, ರಾಜೇಂದ್ರ ಸೇರಿದಂತೆ ಇತರರು ಇದ್ದರು.
ಕಾಂಗ್ರೆಸ್‌ಗೆ ಮತ ನೀಡಿದರೆ ಮತ್ತೆ ಸಿದ್ದರಾಮ್ಯ ಸಿಎಂ
ಗಂಗಾವತಿ(ಏ.06): ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು. ತಾಲೂಕಿನ ಹಂಪಸದುರ್ಗಾದಲ್ಲಿ ಜರುಗಿದ ಚುನಾವಣೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುತ್ತಿದ್ದು, ನನಗೆ ಮತ ಹಾಕಿ ಬೆಂಬಲಿಸಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಿದರೆ ಮುಖ್ಯಮಂತ್ರಿ ಆಗುವುದರಲ್ಲಿ ಸಂದೇಹ ಇಲ್ಲ ಎಂದರು.
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಹಲವಾರು ಯೋಜನೆ ಅನುಷ್ಟಾನಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮತ್ತೇ ಮುಖ್ಯಮಂತ್ರಿ ಆದರೆ ಹಲವಾರು ಯೋಜನೆ ಕಾರ್ಯಗತಗೊಳಿಸುತ್ತಾರೆ ಎಂದರು.
ಈ ಭಾರಿ ಚುನಾವಣೆಗೆ ಬಳ್ಳಾರಿಯಿಂದ ಬಂದಿದ್ದಾರೆ, ಈಗಾಗಲೇ ಲೂಟಿ ಮಾಡಿ ಸಾಕಷ್ಟುಹೆಸರು ಪಡೆದಿದ್ದಾರೆ.ಇಂತವರು ಇಲ್ಲಿ ಇರಲಿಕ್ಕೆ ಸಾಧ್ಯಇಲ್ಲ. ಸರ್ಕಾರದ ಸಂಪತ್ತು ನಮ್ಮ ಸಂಪತ್ತು ಆಗಿದೆ.ಇಂತಹ ಸರ್ಕಾರದ ಲೂಟಿ ಮಾಡಿ ಈಗ ಗಂಗಾವತಿಗೆ ಬಂದಿದ್ದಾರೆ. ಇವರಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಹಲವಾರು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್ಸಿನವರಿಗೆ ಗುಂಡಿಗೆನೂ ಇಲ್ಲ, ಗಂಡಸ್ತನವೂ ಇಲ್ಲ: ಸಚಿವ ಆನಂದ್ ಸಿಂಗ್ ವಿವಾದಾತ್ಮಕ ಹೇಳಿಕೆ
ರೋಡ್ ಶೋ:
ಹಂಪಸ ದುರ್ಗಾದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ರೋಡ್ ಶೋ ನಡೆಸಿದರು.ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಗ್ರಾಮದಲ್ಲಿ ಮತ ಯಾಚಿಸಿದರು. ಅಸಂಖ್ಯಾತ ಮಹಿಳೆಯರು,ಯುವಕರು ಜೈ ಘೋಷ ಹಾಕಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.