ಚುನಾವಣಾ ಸಂದರ್ಭದಲ್ಲಿ ಜನರ ಭಾವನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಬಗ್ಗೆ ನಾನು ಹೇಳಿದ್ದೇನೆ ಹೊರತು ಗುಳಿಗ ದೈವದ ಬಗ್ಗೆ ನಾನು ಎಲ್ಲಿಯೂ ಟೀಕೆ ಮಾಡಿಲ್ಲ ಎಂದು ಹೇಳಿದ ಗೃಹಮಂತ್ರಿ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದರು.
ಶಿವಮೊಗ್ಗ (ಮಾ.17) : ಚುನಾವಣಾ ಸಂದರ್ಭದಲ್ಲಿ ಜನರ ಭಾವನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಬಗ್ಗೆ ನಾನು ಹೇಳಿದ್ದೇನೆ ಹೊರತು ಗುಳಿಗ ದೈವದ ಬಗ್ಗೆ ನಾನು ಎಲ್ಲಿಯೂ ಟೀಕೆ ಮಾಡಿಲ್ಲ ಎಂದು ಹೇಳಿದ ಗೃಹಮಂತ್ರಿ ಆರಗ ಜ್ಞಾನೇಂದ್ರ(Araga jnanendra) ಸ್ಪಷ್ಟನೆ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಟೀಕೆ ಮಾಡುವವರು ಯಾರು? ನನಗೆ ಗುಳಿಗ, ಪಂಜುರ್ಲಿ(Guliga panjurli) ಬಗ್ಗೆ ಭಕ್ತಿ ಇದೆ. ನಿನ್ನೆ ಕೂಡ ಪಂಜುರ್ಲಿ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದೇನೆ. ಯಾರಿಗೆ ಇದರ ಬಗ್ಗೆ ನಂಬಿಕೆ ಇಲ್ಲ, ವಿಶ್ವಾಸ ಇಲ್ಲ ಮೂಢನಂಬಿಕೆ ಅಂತಾ ತಿರುಗುತ್ತಿದ್ದರೋ ಅವರೇ ನಿನ್ನೆ ನಾಟಕ ಆಡಿಸಿದ್ದಾರೆ ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ 2.32 ಕೋಟಿ ಮನೆ ನಿರ್ಮಾಣ: ಸಂಸದ ಬಿವೈ ರಾಘವೇಂದ್ರ
ಚುನಾವಣೆ ಹತ್ತಿರದಲ್ಲಿ ಇರುವುದರಿಂದ ಕೆಲವರು ರಾಜಕೀಯ ಕುತಂತ್ರ ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ನನ್ನ ವಿರುದ್ಧ ಇಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಸತ್ಯ ಏನೆಂದು ಜನರಿಗೆ ಗೊತ್ತಿದೆ ಎಂದು ಖಾರವಾಗಿ ಹೇಳಿದರು.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಿ:
ಸಾಗರ: ವಿಜಯ ಸಂಕಲ್ಪ ಯಾತ್ರೆಯಲ್ಲಿ ರೈತ ಸಮುದಾಯದವರು ಪಾಲ್ಗೊಳ್ಳಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಹೇಳಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ರೈತರಿಗೆ ವಿಶೇಷವಾಗಿ ಆದ್ಯತೆ ನೀಡಿದೆ. ಅಡಕೆ ಬೆಳೆಗಾರರ ಸಂಕಷ್ಟಕಾಲದಲ್ಲಿ ಅವರ ಪರವಾಗಿ ನಿಂತು ಬೆಂಬಲ ಬೆಲೆಯೂ ಸೇರಿದಂತೆ ಆಮದು ಶುಲ್ಕ ಹೆಚ್ಚಿಸಿ ಇಲ್ಲಿಯ ಅಡಕೆ ಬೆಳೆಗಾರರಿಗೆ ಮಾರುಕಟ್ಟೆಸ್ಥಿರತೆ ಮತ್ತು ಭದ್ರತೆ ಒದಗಿಸಿಕೊಟ್ಟಿರುವ ಬಿಜೆಪಿ ಸರ್ಕಾರದ ಸಾಧನೆಗಳನ್ನು ಅರಿಯುವುದಕ್ಕೆ ಈ ವಿಜಯ ಸಂಕಲ್ಪ ಯಾತ್ರೆ ಮುಖ್ಯವಾಗಿದೆ ಎಂದರು.
ಅಜಾನ್ ಕೂಗಿನಿಂದ ಆಗುವ ಸಮಸ್ಯೆಗಳ ಬಹಿರಂಗಕ್ಕೆ ಹಿಂಜರಿಯಲ್ಲ: ಕೆಎಸ್ ಈಶ್ವರಪ್ಪ
ಕೃಷಿ ಸಮ್ಮಾನ ಯೋಜನೆ ಮೂಲಕ ನಮ್ಮೆಲ್ಲ ರೈತರ ಬ್ಯಾಂಕ್ ಖಾತೆಗೆ ಯಾವುದೇ ಅರ್ಜಿ, ಓಡಾಟಗಳಿಲ್ಲದೇ ಹಣ ಬರುವಂತೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ತಿಳಿಸುವುದು ನಮ್ಮ ಕರ್ತವ್ಯವಾಗಿದೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೂ ಬಿಜೆಪಿ ಸರ್ಕಾರ ಪ್ರೋತ್ಸಾಹ ನೀಡಿರುವುದು ಸೇರಿದಂತೆ ಇನ್ನೂ ಹತ್ತು ಹಲವು ಯೋಜನೆಯ ಮೂಲಕ ರೈತ ಬಾಂಧವರ ಜೀವನಕ್ಕೆ ಆಸರೆಯಾಗಿದೆ. ಮುಂದೆಯೂ ಮತ್ತಷ್ಟುಯೋಜನೆಗಳನ್ನು ರೈತ ಪರವಾಗಿ, ಬಡವರ ಪರವಾಗಿ ನೀಡಲಿರುವ ಬಿಜೆಪಿ ಪಕ್ಷದ ಪ್ರಮುಖರಿಗೆ ನಮ್ಮ ಬೆಂಬಲವನ್ನು ತೋರಬೇಕಿದೆ ಎಂದರು.