Hubballi: ಮಸಳಿಕಟ್ಟಿ ಅರಣ್ಯ ಪ್ರದೇಶದಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಗಂಡಾನೆ ಸಾವು!

Published : Mar 17, 2023, 03:00 AM IST
Hubballi: ಮಸಳಿಕಟ್ಟಿ ಅರಣ್ಯ ಪ್ರದೇಶದಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಗಂಡಾನೆ ಸಾವು!

ಸಾರಾಂಶ

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಾಲ್ಕೈದು ವರ್ಷದ ಗಂಡು ಆನೆಯೊಂದು ತಾಲೂಕಿನ ಸೂಳಿಕಟ್ಟಿ ಗ್ರಾಪಂ ವ್ಯಾಪ್ತಿಯ ಮಸಳಿಕಟ್ಟಿ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿದೆ. 

ಹುಬ್ಬಳ್ಳಿ (ಮಾ.17): ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಾಲ್ಕೈದು ವರ್ಷದ ಗಂಡು ಆನೆಯೊಂದು ತಾಲೂಕಿನ ಸೂಳಿಕಟ್ಟಿ ಗ್ರಾಪಂ ವ್ಯಾಪ್ತಿಯ ಮಸಳಿಕಟ್ಟಿ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿದೆ. ಮುಂಡಗೋಡ ತಾಲೂಕಿನ ಅತ್ತಿವೇರಿ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗಿತ್ತು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಕಲಘಟಗಿ ತಾಲೂಕಿನ ಅರಣ್ಯಕ್ಕೆ ಬಂದಿತ್ತು. ಸೊಂಡಿಲು ಬಳಿ ಗಾಯಗೊಂಡಿದ್ದ ಆನೆಗೆ ಆಹಾರ ಸೇವಿಸಲು ಕಷ್ಟಪಡುತ್ತಿತ್ತು. ಇದನ್ನು ಗಮನಿಸಿದ‌ ಅರಣ್ಯ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದರು. 

ಮೂರು ತಿಂಗಳ ಹಿಂದೆ ಕಲಘಟಗಿ ಅರಣ್ಯ ಪ್ರದೇಶದಲ್ಲಿ ಆನೆಮರಿಯೊಂದು ಮೃತಪಟ್ಟಿತ್ತು. ಇದು ಎರಡನೇ ಘಟನೆ ಆಗಿದೆ. ಮೃತ ಆನೆ ನಾಲ್ಕೈದು ವರ್ಷದ ಗಂಡು ಸಲಗ. ಅರಣ್ಯದಲ್ಲಿ ಆಹಾರ ಸೇವನೆ ವೇಳೆ ಸೊಂಡಿಲು ಗಾಯ ಮಾಡಿಕೊಂಡಿತ್ತು. ಸಿಬ್ಬಂದಿ ಚಿಕಿತ್ಸೆ-ಆರೈಕೆ ನೀಡಿದ್ದರು. ಇನ್ನೂ ಹೆಚ್ಚಿನ ಚಿಕಿತ್ಸೆಗೆ ಗುರುವಾರ ತಜ್ಞ ವೈದ್ಯರ ತಂಡ ಬರಬೇಕಿತ್ತು. ಆದರೆ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ. ನಾಳೆ ಆನೆ ಕಳೆಬರಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಎಸ್.ಎಂ. ಸಂತೋಷ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಮಕ್ಕಳಂತೆ ಇದ್ದಾರೆ ಬುದ್ಧಿ ಬೆಳೆದಿಲ್ಲ: ಶಿವರಾಜ್ ಸಿಂಗ್ ಚೌಹಾಣ್

ಕಾಫಿ ತೋಟದ ನೀರು ಸಂಗ್ರಹ ತೊಟ್ಟಿಯೊಳಗೆ ಬಿದ್ದು ಹೆಣ್ಣಾನೆ ಸಾವು: ಕಾಫಿ ತೋಟದಲ್ಲಿದ್ದ 10 ಅಡಿ ಆಳದ ನೀರು ಸಂಗ್ರಹಣಾ ತೊಟ್ಟಿಯೊಳಗೆ ಕಾಡಾನೆ ಬಿದ್ದು ಮೃತಪಟ್ಟಘಟನೆ ಶನಿವಾರ ಮುಂಜಾನೆ ಎಳನೀರುಗುಂಡಿ ಗ್ರಾಮದಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆ ಹೋಬಳಿ ವ್ಯಾಪ್ತಿಯ ಎಳನೀರುಗುಂಡಿ ಗ್ರಾಮದ ಚಂದ್ರಶೇಖರ್‌ ಎಂಬುವರ ಕಾಫಿ ತೋಟದಲ್ಲಿ ನೀರಾವರಿ ಸೌಲಭ್ಯಕ್ಕಾಗಿ ನಿರ್ಮಿಸಿದ ನೀರು ಸಂಗ್ರಹ ತೊಟ್ಟಿಯೊಳಗೆ ಶನಿವಾರ ಮುಂಜಾನೆ ವೇಳೆಗೆ ಸುಮಾರು 20 ವರ್ಷದ ಹೆಣ್ಣಾನೆಯೊಂದು ಬಿದ್ದಿದ್ದು, ಮೇಲೇಳಾಗದೆ ಮೃತಪಟ್ಟಿದೆ.

ಪಕ್ಕದ ಮೀಸಲು ಅರಣ್ಯದಿಂದ ಹೆಣ್ಣಾನೆ ಸೇರಿದಂತೆ 3 ಕಾಡಾನೆ ಹಿಂಡು ಕಾಫಿ ತೋಟದೊಳಗೆ ನುಸುಳಿವೆ. ಈ ಸಂದರ್ಭದಲ್ಲಿ ಹೆಣ್ಣಾನೆ ಆಕಸ್ಮಿಕವಾಗಿ ಸುಮಾರು 10 ಅಡಿಯಷ್ಟುಆಳ ಹೊಂದಿರುವ ನೀರು ಶೇಖರಣ ತೊಟ್ಟಿಯೊಳಗೆ ಬಿದ್ದಿದೆ. ನೀರಿನ ತೊಟ್ಟಿಆನೆಯಷ್ಟೇ ಅಗಲ ಇದ್ದರಿಂದ ಹೊರಗೆ ಬರಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದೆ.

ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

ತೋಟಕ್ಕೆ ತೆರಳಿದ್ದ ಕಾರ್ಮಿಕರು ಆನೆ ತೊಟ್ಟಿಯೊಳಗೆ ಬಿದ್ದು ಮೃತಪಟ್ಟಿರುವುದನ್ನು ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶನಿವಾರ ಸಂತೆ ಅರಣ್ಯ ವಲಯಾಧಿಕಾರಿ ಪ್ರಫುಲ್‌ ಕುಮಾರ್‌ ಶೆಟ್ಟಿ ಹಾಗೂ ಸಿಬ್ಬಂದಿ ಪರಿಶೀಲಿಸಿ ಆನೆಯ ಮೃತದೇಹವನ್ನು ಹೊರತೆಗೆದರು. ಶನಿವಾರಸಂತೆ ಪಶು ವೈದ್ಯಾಧಿಕಾರಿ ಡಾ. ಸತೀಶ್‌ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಪಕ್ಕದ ಮೀಸಲು ಅರಣ್ಯದಲ್ಲಿ ಆನೆಯ ಶವ ಸಂಸ್ಕಾರ ಮಾಡಲಾಯಿತು. ನೀರು ಶೇಖರಣಾ ತೊಟ್ಟಿಯೊಳಗೆ ಬಿದ್ದು ಆನೆ ಮೃತಪಟ್ಟ ಸ್ಥಳದಲ್ಲೇ ಮೂರು ಕಾಡಾನೆಗಳು ಓಡಾತ್ತಿದ್ದರಿಂದ ಕಾರ್ಮಿಕರು, ಸ್ಥಳೀಯರು ಭಯಭೀತರಾಗಿದ್ದರು.

PREV
Read more Articles on
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು